HomePage_Banner
HomePage_Banner
HomePage_Banner
HomePage_Banner

ಕಾಂಗ್ರೆಸ್ ನೀಡಿದ ಜನಪರ ಕಾರ್ಯಕ್ರಮದ ಬಗ್ಗೆ ಜನತೆಗೆ ತಿಳಿಸಿ- ಸಾಮೆತಡ್ಕ ಗೋಪಾಲಕೃಷ್ಣ ಭಟ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಸಾಮೆತ್ತಡ್ಕ ಕಾಂಗ್ರೆಸ್ ಕಾರ್ಯಕರ್ತರ ಸಭೆ
ಪುತ್ತೂರು : ಕಳೆದ 70 ವರ್ಷಗಳ ಕಾಂಗ್ರೆಸ್ ಆಡಳಿತವು ದೇಶಕ್ಕೆ ಹಲವಾರು ಕೊಡುಗೆಗಳನ್ನು ನೀಡಿದೆ, ದೇಶದ ಬಡಜನರ ಕಲ್ಯಾಣಕ್ಕಾಗಿ ಹಲವಾರು ಜನಪರ ಕಾರ್ಯಕ್ರಮ ಕೊಟ್ಟಿದೆ. ಕಾಂಗ್ರೆಸ್ ನೀಡಿದ ಹಲವಾರು ಜನಪರ ಕಾರ್ಯಕ್ರಮದ ಬಗ್ಗೆ ಕಾರ್ಯಕರ್ತರು ಜನತೆಗೆ ತಿಳಿಸುವಂತಾಗಬೇಕು ಎಂದು ಮಾಜಿ ತಾಲ್ಲೂಕು ಬೋರ್ಡ್ ಅಧ್ಯಕ್ಷ ಹಾಗೂ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಿರಿಯರಾದ ಸಾಮೆತಡ್ಕ ಗೋಪಾಲ ಕೃಷ್ಣ ಭಟ್ ಹೇಳಿದರು.

ಅವರು ಬ್ಲಾಕ್ ಕಾರ್ಮಿಕ ಘಟಕದ ಅಧ್ಯಕ್ಷ ಶರೂನ್ ಸಿಕ್ವೇರಾರವರ ಮನೆಯಲ್ಲಿ ಸೆ.12 ರಂದು ನಡೆದ ನಗರದ ಸಾಮೆತಡ್ಕ ವಲಯದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಪ್ರಧಾನಿ ಇಂದಿರಾ ಗಾಂಧಿಯವರು ಕ್ರಾಂತಿಕಾರಿಯಾದಂತ ಭೂ ಮಸೂದೆ ಕಾನೂನು ತಂದು ಗೇಣಿದಾರನಿಗೆ ಭೂಮಿ ಹಂಚಿರುತ್ತಾರೆ, ಶ್ರೀಮಂತರ ಕೈಯಲ್ಲಿದ್ದ ಬ್ಯಾಂಕ್ ನ್ನು ರಾಷ್ಟ್ರೀ ಕರಣ ಮಾಡಿ ದೇಶದ ಬಡವರಿಗೆ ಬ್ಯಾಂಕ್ ಸೌಲಭ್ಯ ಸಿಗುವಂತೆ ಮಾಡಿದ್ದಾರೆ, ಜೀತ ಪದ್ಧತಿ ಮುಕ್ತಗೊಳಿಸುವ ಕಾನೂನು ತಂದಿರುತ್ತಾರೆ, ಪ್ರತಿಯೊಬ್ಬನಿಗೂ ವಾಸಿಸಲು ನಿವೇಶನ ಮತ್ತು ಮನೆ ಒದಗಿಸಲು ಜನತಾ ಕಾಲೋನಿ ಹೆಸರಿನ ಯೋಜನೆಯ ತಂದಿರುವುದರಿಂದ ತಾಲ್ಲೂಕಿನ ಎಲ್ಲಾ ಕಡೆ ಜನತಾ ಕಾಲೋನಿ ನಿ ರ್ಮಾಣ ವಾಗಿರುತ್ತದೆ, ಪ್ರತಿ ಬಡವನ ಮನೆಗೆ ಉಚಿತ ವಿದ್ಯುತ್ ಒದಗಿಸಲು ಭಾಗ್ಯ ಜ್ಯೋತಿ ಕಾರ್ಯ ಕ್ರಮ ತಂದಿರುತ್ತಾರೆ,ಕಾಂಗ್ರೆಸ್ ಸರಕಾರ ಜನತೆಯ ಒಳಿತಿಗಾಗಿ ಹಲವಾರು ಯೋಜನೆಗಳನ್ನು ತಂದಿರುತ್ತದೆ ಎಂದರು.


ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ವಿ ಎಚ್ ಎ ಶಕೂರ್ ಹಾಜಿ ಮಾತನಾಡಿ, ಬಿಜೆಪಿಯ ದುರಾಡಳಿತದಿಂದ ಜನ ಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ, ಬಿಜೆಪಿಗರು ಈಗಲೂ ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ, ಕಾರ್ಯಕರ್ತರು ವಾಸ್ತವ ವಿಷಯವನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು ಎಂದರು.


ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಆಲಿ ಮಾತನಾಡಿ, ನಗರದ ವ್ಯಾಪಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸುವ ಸಲುವಾಗಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟಣೆ ಕೆಲಸಕ್ಕೆ ತೊಡಗಿಸಿ ಕೊಂಡಿದ್ದೇವೆ, ನಗರ ಸಭೆಯಲ್ಲಿ ಕಾಂಗ್ರೆಸ್ ಆಡಳಿತ ಹಾಗೂ ಬಿಜೆಪಿ ಆಡಳಿತದ ಕಾರ್ಯ ಶೈಲಿಯನ್ನು ಜನರು ತುಲನೆ ಮಾಡಿ ನೋಡುತ್ತಿದ್ದಾರೆ, ಕಾಂಗ್ರೆಸ್ ಆಡಳಿತ ಪುತ್ತೂರು ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದೆ, ಆದರೆ ಬಿಜೆಪಿ ಆಡಳಿತ ಜನರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದೆ ಎಂದರು.


ಬ್ಲಾಕ್ ಎಸ್ ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆ ಮಾಡಿದರು, ಈ ಸಭೆಯಲ್ಲಿ ಬ್ಲಾಕ್ ಕಚೇರಿ ಕಾರ್ಯದರ್ಶಿ ಜೋನ್ ಸಿರಿಲ್ ರೋಡ್ರಿಗಸ್, ಕೊಂಕಣಿ ಅಕಾಡಮಿಯ ಮಾಜಿ ಸದಸ್ಯ ದಾಮೋದರ್ ಭಂಡಾರ್ಕರ್ , ನಗರಸಭಾ ಮಾಜಿ ಸದಸ್ಯೆ ಶ್ರೀಮತಿ ಉಷಾ ಧನಂಜಯ, ಕಾಂಗ್ರೆಸ್ ಸ್ಥಳೀಯ ಹಿರಿಯ ಮುಖಂಡರಾದ ಐತಪ್ಪ ಆಚಾರ್ಯ, ಆನಂದ ಶೆಟ್ಟಿ ಸುರೇಶ್ ಸಾಲಿಯಾನ್,ಸಿರಾಜ್ ಸಾಮೆತಡ್ಕ, ಜೆರೋಮ್ ಪುಡ್ತಾದೊ ಕಜೆ, ಅರುಣ್ ಪಿಂಟೋ, ಜಯಕರ, ದಿನೇಶ್ ಕಾಮತ್, ನಾರಾಯಣ ಕುಡ್ವ ಹಾಗೂ ಹಲವಾರು ಕಾರ್ಯ ಕರ್ತರು ಬಾಗವಹಿಸಿದ್ದರು ಈ ಸಂದರ್ಭದಲ್ಲಿ ಸಾಮೆತಡ್ಕದ ಎರಡು ಬೂತ್ ಗಳಿಗೆ ಬೂತ್ ಸಮಿತಿ ರಚನೆ ಮಾಡಲಾಯಿತು

ಪ್ರತಿ ತಿಂಗಳು ಕಾರ್ಯಕರ್ತರ ಸಭೆ ನಡೆಯಬೇಕು…
ಕಾರ್ಯ ಕರ್ತರ ಶ್ರಮದಿಂದ ಪಕ್ಷದ ಬೆಳವಣಿಗೆ ಸಾಧ್ಯ,ಪಕ್ಷದ ಕಾರ್ಯಕರ್ತರಿಗೆ ಹೆಚ್ಚಿನ ಮನ್ನಣೆ ಕೊಡುವುದಕ್ಕೆ ಕೆಲಸ ಮಾಡುತ್ತಿದ್ದೇವೆ, ಬೂತ್ ಸಮಿತಿಯವರು ಕಡ್ಡಾಯವಾಗಿ ಪ್ರತಿ ತಿಂಗಳು ಬೂತ್ ಸಮಿತಿ ಸಭೆ ನಡೆಸಬೇಕು,ಪ್ರತಿ ಸಬೆಗೂ ಬ್ಲಾಕ್ ಮಟ್ಟದ ನಾಯಕ ರುಗಳು ಭಾಗಿಯಾಗುವಂತೆ ಕ್ರಮ ಕೈಗೊಳ್ಳಲಾಗುವುದು.
-ಎಂ.ಬಿ ವಿಶ್ವನಾಥ ರೈ, ಅಧ್ಯಕ್ಷರು, ಪುತ್ತೂರು ಬ್ಲಾಕ್ ಕಾಂಗ್ರೆಸ್

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.