HomePage_Banner
HomePage_Banner
HomePage_Banner
HomePage_Banner

ಪಿಎಫ್‌ಐ ಬ್ಲಡ್ ಡೋನರ್ಸ್ ಫಾರಂ ಸಾಲ್ಮರ ವತಿಯಿಂದ ರಕ್ತದಾನ ಶಿಬಿರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಆರೋಗ್ಯವಂತ ಜನರಿಗೆ ಆರೋಗ್ಯವಂತೆ ರಾಷ್ಟ್ರ ನಿರ್ಮಾಣ – ಸಿದ್ದಿಕ್ ಕೆ.ಎ
  • ಪಿಎಫ್‌ಐಯಿಂದ ಸಮಾಜಕ್ಕೆ ಐಕ್ಯತೆಯ ಸಂದೇಶ – ಶಾಫಿ ಬೆಳ್ಳಾರೆ
  • ಅಂತ್ಯಸಂಸ್ಕಾರ ಬೆಲೆಕಟ್ಟಲಾಗದ ಸೇವೆ – ನೂರುದ್ದೀನ್ ಸಾಲ್ಮರ

ಪುತ್ತೂರು: ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಸಾಲ್ಮರ ಘಟಕದ ಪದಗ್ರಹಣದ ಪ್ರಯುಕ್ತ ರಕ್ತದಾನ ಶಿಬಿರ ಹಾಗೂ ಸಮಾಜದ ವಿಶಿಷ್ಟ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಸಾಲ್ಮರ ಮೌಂಟನ್ ವ್ಯೂ ಶಾಲೆಯಲ್ಲಿ ಸೆ.12 ರಂದು ನಡೆಯಿತು. ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಸಾಲ್ಮರ ಘಟಕ ಅಧ್ಯಕ್ಷ ಸಿದ್ದೀಕ್ ಕೆರೆಮೂಲೆ ಸಭಾಧ್ಯಕ್ಷತೆ ವಹಿಸಿದ್ದರು. ಅಲ್ ಹಾಜ್ ಸಯ್ಯದ್ ಮುಹಮ್ಮದ್ ತಂಙಳ್ ಸಾಲ್ಮರ ದುಃವಾದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.


ಆರೋಗ್ಯವಂತ ಜನರಿಗೆ ಆರೋಗ್ಯವಂತೆ ರಾಷ್ಟ್ರ ನಿರ್ಮಾಣ:
ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಅಧ್ಯಕ್ಷರಾದ ಸಿದ್ದೀಕ್ ಕೆ.ಎ ಅವರು ಮಾತನಾಡಿ ಆರೋಗ್ಯವಂತ ಜನರಿಂದ ಮಾತ್ರ ಆರೋಗ್ಯವಂತ ರಾಷ್ಟ್ರ ನಿರ್ಮಾನ ಸಾದ್ಯ. ಈ ನಿಟ್ಟಿನಲ್ಲಿ ಪಾಪ್ಯುಲರ್ ಪ್ರಂಟ್ ಬ್ಲಡ್ ಡೋನರ್ಸ್ ಫಾರಂ ಆರೋಗ್ಯ ವಿಭಾಗದಲ್ಲಿ ಸಲ್ಲಿಸುತ್ತಿರುವ ಸೇವೆ ಅನಣ್ಯ ಎಂದರು.



ಪಿಎಫ್‌ಐಯಿಂದ ಸಮಾಜಕ್ಕೆ ಐಕ್ಯತೆಯ ಸಂದೇಶ:
ಪಿ.ಎಫ್.ಐ ರಾಜ್ಯ ನಾಯಕ ಶಾಫಿ ಬೆಳ್ಳಾರೆ ದಿಕ್ಸೂಚಿ ಭಾಷಣ ಮಾಡಿದರು. ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ದೇಶಾದ್ಯಂತ ಕೇವಲ ರಕ್ತದಾನ ಮಾತ್ರವಲ್ಲದೆ ವೈದ್ಯಕೀಯ ಸೇವೆ, ಸಲಹೆ ಸೂಚನೆಗಳನ್ನು ನೀಡುವ ಹಾಗು ಮೃತ ಶರೀರವನ್ನು ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡುವ ಕೆಲಸ ಮಾಡುತ್ತಿದೆ ಎಂದರು. ಕೋಮು ಧ್ರುವೀಕರಣದ ಮೂಲಕ ದೇಶವನ್ನು ವಿಭಜಿಸುತ್ತಿರುವ ಇಂದಿನ ಕಾಲದಲ್ಲಿ, ಸಾಲ್ಮರದ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಸೇರಿಸಿ ಸಮಾಜಕ್ಕೆ ಐಕ್ಯತೆಯ ಸಂದೇಶ ಸಾರಿದೆ ಎಂದ ಶಾಫಿ ಬೆಳ್ಳಾರೆ ಎಲ್ಲಾ ರಕ್ತದಾನಿಗಳಿಗೆ ಅಭಿನಂದನೆ ಸಲ್ಲಿಸಿದರು.

ಅಂತ್ಯಸಂಸ್ಕಾರ ಬೆಲೆಕಟ್ಟಲಾಗದ ಸೇವೆ:
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಯ್ಯದ್ ಮಲೆ ಜುಮಾ ಮಸೀದಿಯ ಅಧ್ಯಕ್ಷ ನೂರುದ್ದೀನ್ ಸಾಲ್ಮರ ಮಾತನಾಡಿ ಮನುಷ್ಯ ಬದುಕುವಾಗ ಯಾವ ರೀತಿ ಇದ್ದರೂ ಆತನ ಮರಣದ ನಂತರ ಗೌರವಯುತವಾಗಿ ಅಂತ್ಯ ಸಂಸ್ಕಾರ ನಡೆಸಬೇಕಾಗಿರುವುದು ಮಾನವ ಧರ್ಮವಾಗಿದೆ. ಈ ನಿಟ್ಟಿನಲ್ಲಿ ಇವತ್ತು ಸನ್ಮಾನ ಸ್ವೀಕರಿಸುವ ಮೂರು ಮಂದಿಯ ಸೇವೆ ಬೆಲೆಕಟ್ಟಲಾಗದ ಕೆಲಸವಾಗಿದೆ ಎಂದರು. ಎ.ಜೆ ಆಸ್ಪತ್ರೆ ವೈದ್ಯಾಧಿಕಾರಿ ಅರವಿಂದ್, ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ನೂತನ ಅಧ್ಯಕ್ಷ ಇಬ್ರಾಹಿಂ ಹಾಜಿ ಸಾಗರ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕಳೆದ ಹಲವಾರು ವರ್ಷಗಳಿಂದ ಅಂತ್ಯಸಂಸ್ಕಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಹುಸೈನ್, ದಲಿತರ ಅಂತ್ಯಸಂಸ್ಕಾರ ನೆರವೇರಿಸುತ್ತಿರುವ ಮುಂಡಪ್ಪ, ಕ್ರೈಸ್ತ ಸಮುದಾಯದ ಅಂತ್ಯಸಂಸ್ಕಾರ ನಡೆಸಿಕೊಂಡು ಬಂದ ವರ್ಗೀಸ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ನಿರ್ವಾಹಕ ಅಶ್ರಫ್ ಬಾವ ಪದಗ್ರಹಣ ನಡೆಸಿಕೊಟ್ಟರು.


ವೇದಿಕೆಯಲ್ಲಿ ಸಯ್ಯದ್ ಮಲೆ ಮಸೀದಿ ಮಾಜಿ ಅಧ್ಯಕ್ಷರುಗಳಾದ ಸುಲೈಮಾನ್ ಹಾಜಿ, ಅಬ್ದುಲ್ಲಾ ಹಾಜಿ, ಎಪಿಎಂಸಿ ಮಸೀದಿ ಕಾರ್ಯದರ್ಶಿ ರಹಿಮಾನ್, ಅನ್ಸಾರುದ್ದೀನ್ ಯತೀಂ ಖಾನದ ಕಾರ್ಯದರ್ಶಿ ಇಸ್ಮಾಯಿಲ್, ರೋಟರಿ ಎಲೈಟಿನ ಮನ್ಸೂರ್ ಬೊಳ್ವಾರ್, ವಿಖಾಯ ಕ್ಲಸ್ಟರ್ ಕಾರ್ಯದರ್ಶಿ ಬಾತಿಷ್ ಸಾಲ್ಮರ, ಬ್ಲಡ್ ಡೊನರ್ಸ್ ಫಾರಂ ನಿರ್ವಾಹಕ ಮುಖ್ತಾರ್ ಕುಂಬ್ರ, ಎಸ್.ಡಿ.ಪಿ.ಐ ಸಾಲ್ಮರ ವಲಯದ ಸದಸ್ಯ ವಾಲ್ಟರ್, ಪಿಎಫ್‌ಐ ಪುತ್ತೂರು ಸಿಟಿ ಡಿವಿಝನ್ ಅಧ್ಯಕ್ಷ ಉಮರ್ ಕೂರ್ನಡ್ಕ, ಕಾರ್ಯದರ್ಶಿ ಸಾದಿಕ್ ಸಾಲ್ಮರ, ಎಸ್.ಡಿ.ಪಿ.ಐ ಸಾಲ್ಮರ ವಾರ್ಡ್ ಸಮಿತಿಯ ಅಧ್ಯಕ್ಷ ನವಾಝ್ ಪಿ.ಎಸ್ ಉಪಸ್ಥಿತರಿದ್ದರು. ಹಮೀದ್ ಸಾಲ್ಮರ ಸ್ವಾಗತಿಸಿ, ಕರೀಂ ಜೆಡೆಕಲ್ಲು ವಂದಿಸಿದರು. ಗಝ್ಝಾಲಿ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ರಕ್ತದಾನ ಶಿಬಿರದಲ್ಲಿ ಒಟ್ಟು 69  ಯುನಿಟ್ ರಕ್ತ ಸಂಗ್ರಹವಾಯಿತು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.