HomePage_Banner
HomePage_Banner
HomePage_Banner
HomePage_Banner

ಫೂಟ್‌ಪಾತ್‌ನಲ್ಲಿ ಮುರಿದಿದ್ದ ಸ್ಲ್ಯಾಬ್‌ಗೆ ಹೊಸ ಸ್ಲ್ಯಾಬ್ ಅಳವಡಿಸಿದ ನಗರಸಭೆ – ಮುರಿದ ಸ್ಲ್ಯಾಬ್‌ಗೆ ಪಾದಚಾರಿಯೊಬ್ಬರು ಬಿದ್ದು ಗಾಯಗೊಂಡ ಕುರಿತ ವರದಿಗೆ ನಗರಸಭೆ ಸ್ಪಂದನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಲ್ಲಿನ ಜೆ.ಎಮ್.ಬಿಲ್ಡಿಂಗ್ ಎದುರು ಮುರಿದು ಬಿದ್ದಿರುವ ಫೂಟ್‌ಪಾತ್ ಸ್ಲ್ಯಾಬ್‌ಗೆ ಸೆ.11 ರ ರಾತ್ರಿ ಪಾದಚಾರಿಯೊಬ್ಬರು ಬಿದ್ದು ತೀವ್ರ ಗಾಯಗೊಂಡ ಘಟನೆಗೆ ಸಂಬಂಧಿಸಿ ನಗರಸಭೆ ಸೆ.13 ರ ಬೆಳಿಗ್ಗೆ ಹೊಸ ಸ್ಲ್ಯಾಬ್ ಅಳವಡಿಸಿ ಸಮಸ್ಯೆಯನ್ನು ಬಗೆ ಹರಿಸಿದೆ. ಇಲ್ಲಿನ ಜೆ.ಎಮ್. ಬಿಲ್ಡಿಂಗ್ ಎದುರು ಕಳೆದ ಹಲವು ಸಮಯಗಳಿಂದ ಫೂಟ್‌ಪಾತ್ ಸ್ಲ್ಯಾಬ್‌ವೊಂದು ಮುರಿದು ಬಿದ್ದಿತ್ತು. ಹಗಲು ಹೊತ್ತು ಪಾದಚಾರಿಗಳಿಗೆ ಇದು ಗೋಚರವಾಗಿ ಅದನ್ನು ತಪ್ಪಿಸಿ ಹೋಗುತ್ತಿದ್ದಾರಾದರೂ ರಾತ್ರಿ ವೇಳೆ ಹೋಗುವ ಪಾದಚಾರಿಗಳಿಗೆ ಸ್ಲ್ಯಾಬ್ ಮುರಿದಿರುವುದು ಗಮನಕ್ಕೆ ಬಾರದೆ ಹಲವು ಮಂದಿ ಬಿದ್ದಿದ್ದರು. ಸೆ.11  ರಾತ್ರಿ ವ್ಯಕ್ತಿಯೊಬ್ಬರು ಮುರಿದ ಸ್ಲ್ಯಾಬ್‌ಗೆ ಬಿದ್ದು ಕಾಲಿಗೆ ತೀವ್ರ ಗಾಯವಾಗಿತ್ತು. ಈ ಕುರಿತು ಸುದ್ದಿಯಲ್ಲಿ ವರದಿಯಾಗಿತ್ತು. ಸೆ.12 ರ ಬೆಳಿಗ್ಗೆ ನಗರಸಭೆ ಅಧ್ಯಕ್ಷರು ಸ್ಥಳ ಪರಿಶೀಲಿಸಿದ್ದರು. ಸೆ.13 ರ ಬೆಳಿಗ್ಗೆ ಮುರಿದ ಸ್ಯ್ಲಾಬ್ ತೆರವು ಗೊಳಿಸಿ ಹೊಸ ಸ್ಲ್ಯಾಬ್ ಅಳವಡಿಸಲಾಗಿದೆ. ಸುದ್ದಿಯಿಂದ ಜನಪರ ಕಾಳಜಿ ವರದಿಗೆ ನಗರಸಭೆ ಸ್ಪಂಧಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.