HomePage_Banner
HomePage_Banner
HomePage_Banner
HomePage_Banner

ವೋಲ್ವೋ ಕಂಪನಿಯ ಎಸ್‌ಡಿಎಲ್‌ಜಿ ಎಕ್ಸಾವೇಟರ್ ಮಾರುಕಟ್ಟೆಗೆ ದಕ್ಷಿಣ ಭಾರತದ ಪ್ರಥಮ ಗ್ರಾಹಕ ಕನ್ಯಾನ ಅರ್ಥ್‌ಮೂವರ್‍ಸ್‌ನ ನಾರಾಯಣರಿಗೆ ಕೀ ಹಸ್ತಾಂತರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಹಿರೇಬಂಡಾಡಿ: ದೇಶ ಹಾಗೂ ವಿದೇಶದಲ್ಲಿ ಹೆಸರುವಾಸಿಯಾಗಿರುವ ವೋಲ್ವೋ ಕಂಪೆನಿಯು ಇದೀಗ ಎಸ್‌ಡಿಎಲ್‌ಜಿ ಎಕ್ಸಾವೇಟರ್ ಮಾರುಕಟ್ಟೆಗೆ ಪರಿಚಯಿಸಿದ್ದು ಇದರ ದಕ್ಷಿಣ ಭಾರತದ ಪ್ರಥಮ ಗ್ರಾಹಕರಾದ ಹಿರೇಬಂಡಾಡಿ ಕನ್ಯಾನ ಅರ್ಥ್‌ಮೂವರ್‍ಸ್‌ನ ಮಾಲಕ ನಾರಾಯಣ ಕನ್ಯಾನರವರಿಗೆ ಕೀ ಹಸ್ತಾಂತರ ಮಾಡಲಾಗಿದೆ.


ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕೀ ಹಸ್ತಾಂತರ ಮಾಡಲಾಯಿತು. ನಾರಾಯಣ ಕನ್ಯಾನರವರ ಜೊತೆಗೆ ವೋಲ್ವೋ ಎಸ್‌ಡಿಎಲ್‌ಜಿ ಎಕ್ಸಾವೇಟರ್ ಖರೀದಿದಾರರಾದ ವಿವಿಧ ಅರ್ಥಮೂವರ್‍ಸ್‌ನ ಮಾಲಕರಾದ ಪ್ರಶಾಂತ್, ಸಂದೀಪ್ ಪೂಜಾರಿ, ಗುರುರಾಜ್ ಹಾಗೂ ವಿನಯ್ ಪ್ರಸಾದ್‌ರವರಿಗೂ ಈ ಸಂದರ್ಭದಲ್ಲಿ ಕೀ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವೋಲ್ವೋ ಎಸ್‌ಡಿಎಲ್‌ಜಿ ಎಕ್ಸಾವೇಟರ್ ಕಂಪನಿಯ ಕರ್ನಾಟಕದ ಡೀಲರ್ ಆಗಿರುವ ವಿನಾಯಕ್‌ರವರು, ವಿನೂತನ ತಂತ್ರಜ್ಞಾನ ಹಾಗೂ ವಿಶಿಷ್ಟವಾದ ಟೆಕ್ನಾಲಜಿಯ ಮೂಲಕ ಎಸ್‌ಡಿಎಲ್‌ಜಿ ಎಕ್ಸಾವೇಟರ್ ತಯಾರಾಗಿದೆ. ಯಾವುದೇ ಜಾಗ, ಗುಡ್ಡ ಪ್ರದೇಶದ ಸಮತಟ್ಟು ಹಾಗೂ ಇತರೇ ಕೆಲಸಗಳು ಎಸ್‌ಡಿಎಲ್‌ಜಿ ಎಕ್ಸಾವೇಟರ್ ಮೂಲಕ ಸುಲಲಿತವಾಗಿ ಆಗಲಿದೆ. ಯಾವುದೇ ಸ್ಧಳದಲ್ಲಿ ಯಾವುದೇ ಕೆಲಸವನ್ನು ಸುಲಲಿತವಾಗಿ, ಅಚ್ಚುಕಟ್ಟಾಗಿ ಮಾಡುವಲ್ಲಿಯೂ ಈ ಎಕ್ಸಾವೇಟರ್ ಹೆಚ್ಚು ಪ್ರಯೋಜನಕಾರಿಯಾಗಿದ್ದು ಕೃಷಿಕರ, ಉದ್ಯೋಗಿಗಳ, ಎಂಜಿನಿಯರ್‌ಗಳ ಮನ ಗೆದ್ದಿದೆ. ಎಕ್ಸಾವೇಟರ್ ಭಾರತದ ಎರಡು ಕಡೆಗಳಲ್ಲಿ ಮಾರುಕಟ್ಟೆಗೆ ಬಂದಿದ್ದು ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಉಪ್ಪಿನಂಗಡಿಯಲ್ಲಿ ವಿತರಣೆಯಾಗುತ್ತಿದೆ. ಮಂಗಳೂರಿನ ಕೋಡಿಕಲ್ ಕ್ರಾಸ್‌ನ ವಿವೇಕಾನಂದ ನಗರದಲ್ಲಿ ವೋಲ್ವೋ ಕಂಪನಿಯ ಶಾಖೆಯಿದ್ದು ಗ್ರಾಹಕರು ಸಂಪರ್ಕಿಸಬಹುದಾಗಿದೆ ಎಂದರು. ವೋಲ್ವೋ ಕಂಪನಿಯ ನವೀನ್, ಪುತ್ತೂರು ಧರಿತ್ರಿ ಅರ್ಥ್‌ಮೂವರ್‍ಸ್‌ನ ಮುರಳಿಕೃಷ್ಣ ಹಸಂತಡ್ಕ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣರವರು ಶುಭಹಾರೈಸಿದರು.


ಕನ್ಯಾನ ಅರ್ಥ್‌ಮೂವರ್‍ಸ್‌ನ ಮಾಲಕ ನಾರಾಯಣ ಕನ್ಯಾನರವರು ಮಾತನಾಡಿ, ಕಳೆದ 10 ವರ್ಷಗಳಿಂದ ದ.ಕ.ಜಿಲ್ಲೆಯ ವಿವಿಧೆಡೆಗಳಲ್ಲಿ ಕನ್ಯಾನ ಅರ್ಥ್‌ಮೂವರ್‍ಸ್ ಉತ್ತಮ ಕೆಲಸ ನಿರ್ವಹಿಸುವ ಮೂಲಕ ಎಲ್ಲರಿಗೂ ಚಿರಪರಿಚಿತವಾಗಿದೆ. ಈಗ ನಮ್ಮ ಸಂಸ್ಥೆ 11ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ವೋಲ್ವೋ ಕಂಪನಿಯ ಎಸ್‌ಡಿಎಲ್‌ಜಿ ಎಕ್ಸಾವೇಟರ್ ಸೇರ್ಪಡೆಗೊಂಡಿರುವುದು ಬಲ ಹೆಚ್ಚಿಸಿದ್ದು, ಅರ್ಥ್‌ಮೂವರ್‍ಸ್‌ನ ಕೆಲಸ ಕಾರ್ಯಗಳಿಗೆ ಇನ್ನಷ್ಟೂ ವೇಗ ಸಿಗಲಿದೆ ಎಂದು ಹೇಳಿ ಎಲ್ಲರ ಸಹಕಾರ ಕೋರಿದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.