HomePage_Banner
HomePage_Banner
HomePage_Banner
HomePage_Banner

ಲೇಖಕ, ಅಂಕಣಗಾರ ಡಾI ನರೇಂದ್ರ ರೈ ದೇರ್ಲರವರ ‘ನೆಲಮುಖಿ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ, ಲೇಖಕ, ಅಂಕಣಗಾರ ಡಾI ನರೇಂದ್ರ ರೈ ದೇರ್ಲರವರ ‘ನೆಲಮುಖಿ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸೆ. 12 ರಂದು ನಡೆದ ಕಾರ್ಯಕ್ರಮದಲ್ಲಿ ದೇರ್ಲರವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾI ಚಂದ್ರಶೇಖರ ಕಂಬಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ. ವಸಂತ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಕೃತಿ ಪರಿಚಯ: ‘ನೆಲಮುಖಿ’ ಕೃಷಿ, ಪರಿಸರ ಸಂಬಂಧೀ ಕೃತಿ. ಅಭಿವೃದ್ಧಿಯೇ ಶಾಪವಾಗಿ ಪರಿಸರ ನಾಶವಾಗುತ್ತಿರುವ ಸಂದರ್ಭದಲ್ಲಿ ಮನುಷ್ಯಕೃತ ಅಪರಾಧಗಳ ಬಗ್ಗೆ, ಭೂಮಿಯ ಭವಿಷ್ಯದ ಬಗ್ಗೆ ವಿಷಾದದ ಒಳನೋಟಗಳಿವೆ. ನೆಲಜಲ ಮಣ್ಣು ಸುಸ್ಥಿರತೆಯ ಒಳನೋಟಗಳು ಇಲ್ಲಿವೆ. ಇಲ್ಲಿಯ ಲೇಖನಗಳು ಕನ್ನಡದ ದೈನಿಕವೊಂದಕ್ಕೆ ಕೃತಿಕಾರರು ಬರೆಯುತ್ತಿದ್ದ ನಿಯತ ಅಂಕಣ ಬರಹಗಳಾಗಿದ್ದವು. ಸುಮಾರು 56 ಲೇಖನಗಳ ಈ ಕೃತಿಗೆ ಖ್ಯಾತ ಪರಿಸರವಾದಿ ನಾಗೇಶ್ ಹೆಗ್ಡೆ ಮುನ್ನುಡಿ ಬರೆದಿದ್ದಾರೆ. ಇದೇ ‘ನೆಲಮುಖಿ’ ಕೃತಿಗೆ ಶಿವಮೊಗ್ಗ ‘ಕರ್ನಾಟಕ ಸಂಘ’ ದ ಡಾI ಹಾ.ಮಾ.ನಾಯಕ ಅಂಕಣ ಪ್ರಶಸ್ತಿಯೂ ಲಭಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.