ಕಬಕ ಶ್ರೀ ಮಹಾದೇವಿ ಯುವಕ ಮಂಡಲದಿಂದ ಫಿಟ್ ಇಂಡಿಯಾ ಫ್ರೀಡಂ ರನ್ ಕಾಲ್ನಾಡಿಗೆ ಜಾಥಾ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ಪುತ್ತೂರು: ಭಾರತ ಸರ್ಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು ಇದರ ವತಿಯಿಂದ ಶ್ರೀ ಮಹಾದೇವಿ ಯುವಕ ಮಂಡಲ ಕಬಕ ಇದರ ಸಹಯೋಗದಲ್ಲಿ ಫಿಟ್ ಇಂಡಿಯಾ ಪ್ರೀಡಂ ರನ್ ಕಾರ್ಯಕ್ರಮ ಸೆ.12ರಂದು ಕಬಕ ಜಂಕ್ಷನ್ ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರ ಮಂಗಳೂರು ಇದರ ಪುತ್ತೂರು ತಾಲೂಕು ಸಂಯೋಜಕಿ ಪ್ರಜ್ಞಾ ಕುಲಾಲ್ ಕಾವು ಇವರು ಫಿಟ್ ಇಂಡಿಯಾ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಕ್ರೀಡಾ ಇಲಾಖೆಯ ಯುವ ಪ್ರವರ್ತಕ ಶ್ರೀಕಾಂತ್ ಪೂಜಾರಿ ಬಿರಾವು,ತಾಲೂಕು ಯುವ ಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲ್ಯಾನ್, ಕಾರ್ಯದರ್ಶಿ ದಿವ್ಯ ಶ್ರೀ,  ಯುವಕ ಮಂಡಲದ ಅಧ್ಯಕ್ಷ ನಾಗೇಶ್ ಕರ್ಗಲ್ಲು, ಕಾರ್ಯದರ್ಶಿ ನಿತಿನ್ ವಿದ್ಯಾಪುರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಘದ ಸದ್ಯಸರು ಫಿಟ್ ಇಂಡಿಯಾ ಫ್ರೀಡಂ ರನ್ ಪ್ರತಿಜ್ಞೆ ಸ್ವೀಕರಿಸಿದರು. ಬಳಿಕ ಕಬಕ ಜಂಕ್ಷನ್ ನಲ್ಲಿ ಕಾಲ್ನಾಡಿಗೆ ಜಾಥಾ ನಡೆಯಿತು.
 
 ಶ್ರೀ ಮಹಾದೇವಿ ಧರ್ಮಸೇವಾ ವಿಶ್ವಸ್ಥ ಮಂಡಳಿಯ ಕೋಶಾಧಿಕಾರಿ ಜತ್ತಪ್ಪ ಅಡ್ಯಾಲು, ಶ್ರೀ ಮಹಾದೇವಿ ಉತ್ಸವ ಸಮಿತಿ ಅಧ್ಯಕ್ಷ ಲೋಕೇಶ್ ಬಾಕಿಮಾರ್ , ರವೀಂದ್ರ ಕಲ್ಲಂದಡ್ಕ,  ರಕ್ಷಿತ್ ಅಡ್ಯಾಲು, ಕೃಷ್ಣಪ್ಪ ಅಡ್ಯಾಲು, ಬಾಲಕೃಷ್ಣ ಅಳಕೆಮಜಲು, ದೀಕ್ಷಿತ್ ಕಬಕ ಬೈಲು, ಯತೀಶ್ ಪದ್ನಡ್ಕ, ಈಶ್ವರ ಪುಳಿತ್ತಡಿ, ಸುಕೇಶ್ ಅಡ್ಯಾಲು, ಸ್ನೇಹಿತ್, ಸಚಿನ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಬಿಜೆಪಿ ಕಬಕ ಗ್ರಾಮ ಸಮಿತಿ ಅಧ್ಯಕ್ಷ ಜಯರಾಮ್  ನೆಕ್ಕರೆ ಕಾರ್ಯಕ್ರಮ ನಿರೂಪಿಸಿದರು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.