HomePage_Banner
HomePage_Banner
HomePage_Banner
HomePage_Banner

ಸಂಘ ಬೆಳೆಯಲು ಹಿರಿಯರ ನಿಸ್ವಾರ್ಥ ಸೇವೆ ಕಾರಣ-ಜಯಂತ್ ನಡುಬೈಲು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  •   ಪುತ್ತೂರು ಬಿಲ್ಲವ ಸಂಘದ ವಾರ್ಷಿಕ ಮಹಾಸಭೆ

ಪುತ್ತೂರು: ಹಿರಿಯರ ನಿಸ್ವಾರ್ಥ ಸೇವೆಯಿಂದ ಮತ್ತು ಅವರು ಹಾಕಿಕೊಟ್ಟ ಭದ್ರ ಅಡಿಪಾಯದಿಂದ ಇಂದು ಪುತ್ತೂರು ಬಿಲ್ಲವ ಸಂಘ ಬಹಳ ಎತ್ತರಕ್ಕೆ ಬೆಳೆದಿದೆ. ಬಿಲ್ಲವ ಸಂಘವನ್ನು ಪ್ರತಿಯೋರ್ವರ ಸಹಕಾರದಿಂದ ಮತ್ತಷ್ಟು ಬಲವರ್ಧನೆಗಳಿಸಲು ಎಲ್ಲರ ಗುರಿಯಾಗಬೇಕು ಎಂದು ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಜಯಂತ್ ನಡುಬೈಲುರವರು ಹೇಳಿದರು.

ಅವರು ಬಪ್ಪಳಿಗೆ-ಪುತ್ತೂರು ಇಲ್ಲಿನ ಬಿಲ್ಲವ ಸಂಘದ ಸಭಾಭವನದಲ್ಲಿ ನಡೆದ ತಾಲೂಕು ಬಿಲ್ಲವ ಸಂಘದ ೨೦೨೦-೨೧ನೇ ಸಾಲಿನ ೪೫ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪುತ್ತೂರು ಬಿಲ್ಲವ ಸಂಘ ಬೆಳೆಯಲು ಯುವಸಮೂಹದಿಂದ ಕೂಡಿದ ಯುವವಾಹಿನಿ ಘಟಕ, ಬಿಲ್ಲವ ಮಹಿಳಾ ವೇದಿಕೆ, ತಾಲೂಕಿನ ೫೧ ವಿವಿಧ ಗ್ರಾಮ ಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರ ಮತ್ತು ಬಿಲ್ಲವ ಸಮುದಾಯದ ಪ್ರತಿಯೋರ್ವ ಪ್ರಜ್ಞಾವಂತ ನಾಗರಿಕ ಬಂಧುಗಳ ಸಹಕಾರದಿಂದ ಬಿಲ್ಲವ ಸಂಘ ಯಶಸ್ವಿ ಹಾದಿಯಲ್ಲಿ ಸಾಗುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಸಂಘದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಹಿನ್ನೆಡೆಯಾಗಿತ್ತು. ಎಲ್ಲವೂ ಸರಿ ಹೋದರೆ ಮುಂದಿನ ದಿನಗಳಲ್ಲಿ ಬಿಲ್ಲವ ಸಂಘ ಮತ್ತಷ್ಟು ಎತ್ತರಕ್ಕೆ ಬೆಳೆಯಲಿದೆ ಎಂದರು.

ಬಿಲ್ಲವ ಸಂಘದ ಉಪಾಧ್ಯಕ್ಷರಾದ ಡಾ.ಸದಾನಂದ ಕುಂದರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಶಶಿಧರ್ ಕಿನ್ನಿಮಜಲು ವರದಿ ಮಂಡಿಸಿದರು. ಸಂಘದ ಲೆಕ್ಕಪತ್ರವನ್ನು ಕೋಶಾಧಿಕಾರಿ ನಾಗೇಶ್ ಬಲ್ನಾಡು, ಗುರುಮಂದಿರದ ಲೆಕ್ಕಪತ್ರವನ್ನು ಗುರುಮಂದಿರದ ಕಾರ್ಯನಿರ್ವಹಣಾಧಿಕಾರಿ ಆರ್.ಸಿ ನಾರಾಯಣರವರು ನೀಡಿದರು. ಸಂಘದ ಉಪಾಧ್ಯಕ್ಷೆ ವಿನಯ ವಸಂತ್ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.