HomePage_Banner
HomePage_Banner
HomePage_Banner
HomePage_Banner

ಸಾಬಿಯ ಸೈಫಿ ಅತ್ಯಾಚಾರ ಖಂಡಿಸಿ ನ್ಯಾಷನಲ್ ವಿಮೆನ್ಸ್ ಫ್ರಂಟ್ ವತಿಯಿಂದ ಪ್ರತಿಭಟನೆ – ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ಒಪ್ಪಿಸಿ ಕಠಿಣ ಕ್ರಮ ಕೈಗೊಳ್ಳಲು ಆಗ್ರಹ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದೆಹಲಿಯ ಸಬಿಯಾ ಸೈಫಿ ಎಂಬ ಪೋಲಿಸ್( ಸಿವಿಲ್‌ಡಿಫೆನ್ಸ್) ಉದ್ಯೋಗಿಯ ಮೇಲೆ ನಾಲ್ವರು ಕ್ರೂರಿಗಳು ಸೇರಿ ನಡೆಸಿದ ಅತ್ಯಂತ ಅಮಾನವೀಯವಾದ ಅತ್ಯಾಚಾರವನ್ನು ಖಂಡಿಸಿ ನ್ಯಾಷನಲ್ ವಿಮೆನ್ಸ್ ಫ್ರಂಟ್ ಜಿಲ್ಲಾ ಸಮಿತಿಯಿಂದ ಪುತ್ತೂರು ಮಿನಿ ವಿಧಾನ ಸಭೆಯ ಎದುರು ಪ್ರತಿಭಟನೆ ನಡೆಯಿತು. ಹೆಣ್ಣು ಮಕ್ಕಳ ಸುರಕ್ಷತೆಗೆ ಸರಕಾರ ಒತ್ತು ನೀಡಬೇಕು ಮತ್ತು ಅತ್ಯಾಚಾರದ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ಒಪ್ಪಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಲಾಯಿತು.


ವಿಮೆನ್ಸ್ ಫ್ರಂಟ್ ಜಿಲ್ಲಾ ಸದಸ್ಯೆ ಪುತ್ತೂರು ನಗರಸಭೆ ಸದಸ್ಯೆ ಆಗಿರುವ ಕೆ.ಪಾತಿಮತ್ ಝೋರಾ ಅವರು ಮಾತನಾಡಿ ಮಹಿಳೆ ಮತ್ತು ಹೆಣ್ಣುಮಕ್ಕಳ ಪಾಲಿಗೆ ಭಾರತ ಹೆಚ್ಚು ಅಪಾಯಕಾರಿ ದೇಶವಾಗಿ ಮುನ್ನಡೆಯುತ್ತಿರುವುದು ದುರಂತ. ನಾನೊಬ್ಬ ಚೌಕಿದಾರ ಎಂದು ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರು ಇವತ್ತಿ ಕೇವಲ ಪುಂಗಿದಾಸರಾಗಿದ್ದಾರೆ. ತನ್ನ ಮಾತಿಗೆ ಎಲ್ಲದಷ್ಟು ನಡೆದು ಕೊಂಡಿಲ್ಲ ಎಂಬುದಕ್ಕೆ ನಮ್ಮ ದೇಶದ ರಾಜಧಾನಿಯಾದ ದೆಹಲಿಯಲ್ಲಿ ಆರೋಪಿಗಳು ಸಿವಿಲ್ ಡೆಪೆನ್ಸ್ ಪೊಲೀಸ್ ಅಧಿಕಾರಿ ಸಾಬಿಯಾ ಸೈಫಿ ಅವರನ್ನು ಅಪಹರಿಸಿ ಅವರ ಮೇಲೆ ಅತ್ಯಾಚಾರ ಎಸಗಿ ಕ್ರೂರ ರೀತಿಯಲ್ಲಿ ನಡೆದು ಕೊಂಡಿರುವುದು ಸರಕಾರ ಮಹಿಳೆಗೆ ನೀಡುವ ಭದ್ರತೆಯಲ್ಲಿ ವಿಫಲವಾಗಿ ಎಂದು ಸಾಬೀತಾಗಿದೆ. ಈ ನಿಟ್ಟಿನಲ್ಲಿ ಸರಕಾರ ಮೌನ ಮುರಿದು ರಾಜ್ಯ ಮತ್ತು ರಾಷ್ಟ್ರದಲ್ಲಿ ಸ್ತ್ರೀಗಳ ಮೇಲೆ ನಡೆಯುತ್ತಿರುವ ಅತ್ಯಾಚಾರದ ವಿರುದ್ಧ ಧ್ವನಿ ಎತ್ತಿ ಸಾಮಾಜಿಕ ಜಾಗೃತಿ ಮೂಡಿಸಬೇಕೆಂದು ಒತ್ತಾಯಿಸಿದರು.

ನ್ಯಾಷನಲ್ ವಿಮೆನ್ಸ್ ಫ್ರಂಟ್ ಜಿಲ್ಲಾ ಕಾರ್ಯದರ್ಶಿ ಸಾಬೀರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ತಮ್ಮ ಬೇಡಿಕೆಗಳನ್ನು ಸರಕಾರದ ಮುಂದಿಟ್ಟರು. ಅತ್ಯಾಚಾರಿಗಳು ತಪ್ಪಿಸಿಕೊಳ್ಳದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಸಂತ್ರಸ್ತೆಯ ಪರವಾಗಿ ಪೊಲೀಸರು ಸ್ವಯಂ ಪ್ರೇರಿತರಾಗಿ ಕೇಸುಗಳನ್ನು ದಾಖಲಿಸಬೇಕು. ಸಂತ್ರಸ್ತೆಗೆ ಝಡ್ ಪ್ಲಸ್ ಮಾದರಿಯ ಸುರಕ್ಷತೆ ನೀಡಬೇಕು. ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥ ಆಗುವ ತನಕ ರಾಜಕೀಯ ಪ್ರೇರಿತ ಅಥವಾ ಸಂಘಟನಾ ಪ್ರೇರಿತ ಯಾವುದೇ ಶಿಫಾರಸನ್ನು ಮಾನ್ಯ ಮಾಡಬಾರದು. ಪ್ರತಿ ಅರಕ್ಷಕ ಠಾಣೆಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿಟಾಸ್ಕ್ ಪೋರ್ಸ್‌ಗಳನ್ನು ನೇಮಿಸಬೇಕು. ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಕಲಿಕೆಯೊಂದಿಗೆ ಸೆಲ್ಪ್ ಡೆಫೆನ್ಸ್ ಅನ್ನು ಕಡ್ಡಾಯವಾಗಿ ಕಲಿಸಬೇಕು. ಆಶ್ಲೀಲತೆ ಪಸರಿಸದಂತೆ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಿಗೆ ಸೆನ್ಸಾರ್ ಅಳವಡಿಸುವುದು. ಬ್ಲೂಫಿಲಂ ಹಾಗು ಮಾದಕ ದ್ರವ್ಯ ವಸ್ತುಗಳ ಮಾರಾಟ ಮತ್ತು ಸೇವನೆಯನ್ನು ಬುಡಸಹಿತ ಕಿತ್ತೆಸೆಯಲು ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ವಿವಿಧ ಬೇಡಿಕೆ ಮುಂದಿಟ್ಟರು. ಪ್ರತಿಭಟನೆ ಬಳಿಕ ಸಹಾಯಕ ಕಮೀಷನರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸದಸ್ಯೆಯೂ ಮತ್ತು ಸವಣೂರು ಗ್ರಾ.ಪಂ ಸದಸ್ಯೆಯೂ ಆಗಿರುವ ಶಬೀನಾ, ಸದಸ್ಯೆಯಾಗಿರುವ ಸಹನಾಝ್, ಆಸಿಪಾ ಮತ್ತಿತರರು ಉಪಸ್ಥಿತರಿದ್ದರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.