HomePage_Banner
HomePage_Banner
HomePage_Banner
HomePage_Banner

ಪುಣ್ಚಪ್ಪಾಡಿ ನಡುಮನೆಯಲ್ಲಿ ವಸಂತ ರೈರವರಿಗೆ ಶ್ರದ್ಧಾಂಜಲಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವಸಂತ ರೈರವರು ವ್ಯವಹಾರ ಮತ್ತು ಕೃಷಿ ಕ್ಷೇತ್ರದ ಸಾಧಕರು-ಗಿರಿಶಂಕರ್ ಸುಲಾಯ

ಪುತ್ತೂರು: ಸೆ.2ರಂದು ನಿಧನರಾದ ಸವಣೂರಿನ ಹಿರಿಯ ವರ್ತಕರಾದ ಪುಣ್ಚಪ್ಪಾಡಿ ಗ್ರಾಮದ ಎನ್. ವಸಂತ ರೈ ನಡುಮನೆರವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ‍್ಯಕ್ರಮವು ಅವರ ಸೃಗೃಹ ಪುಣ್ಚಪ್ಪಾಡಿ ನಡುಮನೆಯಲ್ಲಿ ಸೆ. 12 ರಂದು ಜರಗಿತು.

 



ಸವಣೂರು ಬೊಳ್ಳಿ ಬೊಲ್ಪು ತುಳುಕೂಟ ಸಂಸ್ಥೆಯ ಗೌರವಾಧ್ಯಕ್ಷ ಹಾಗೂ ಸವಣೂರು ಗ್ರಾ.ಪಂ, ಸದಸ್ಯರಾದ ಗಿರಿಶಂಕರ್ ಸುಲಾಯ ದೇವಶ್ಯರರವರು ಎನ್. ವಸಂತ ರೈರವರ ಶ್ರದ್ದಾಂಜಲಿ ಕಾರ‍್ಯಕ್ರಮದಲ್ಲಿ ಮಾತನಾಡಿ, ವ್ಯವಹಾರ ಮತ್ತು ಕೃಷಿ ಕ್ಷೇತ್ರದಲ್ಲಿ ವಸಂತ ರೈರವರು ಸಾಧನೆಯನ್ನು ಮಾಡಿದ್ದಾರೆ, ಸರಳ ರೀತಿಯ ಬದುಕು ಮತ್ತು ಎಲ್ಲರೊಂದಿಗೆ ಅತ್ಮೀಯರಾಗಿ ಬೆರೆಯುವ ದೊಡ್ಡ ಗುಣದ ಮೂಲಕ ಶ್ರೇಷ್ಠ ವ್ಯಕ್ತಿಯಾಗಿದ್ದರು, ಸದಾ ಸಂತೋಷದಿಂದ ತನ್ನ ವ್ಯವಹಾರದಲ್ಲಿ ತೊಡಗಿಸಿಕೊಂಡು, ಗ್ರಾಹಕರು ಮತ್ತು ಊರಿನವರ ಅಚ್ಚು ಮೆಚ್ಚಿನ ವ್ಯಕ್ತಿಯಾಗಿ, ಜನಮಾನಸದಲ್ಲಿ ಅಮರರಾಗಿದ್ದಾರೆ ಎಂದು ಗಿರಿಶಂಕರ್ ಸುಲಾಯ ಹೇಳಿದರು.

ಎನ್.ವಸಂತ ರೈರವರ ಸಹೋದರರಾದ ಉದ್ಯಮಿ ಎನ್.ಸುಂದರ ರೈ ಸವಣೂರು, ಎನ್. ವಿಠಲ ರೈ ಸವಣೂರು, ಸಹೋದರಿಯರಾದ ಗಿರಿಜಾ ಸೀತಾರಾಮ ರೈ ಕಲಾಯಿ, ಭವಾನಿ ಎಸ್.ರೈ ಕೆಲ್ಲಾಡಿ, ಲಲಿತಾ ದೇವಣ್ಣ ಆಳ್ವ ಎರ್ಮೆನಿಲೆ, ಪತ್ನಿ ಕುಮುದಾ ವಿ.ರೈ, ಅಳಿಯ ಸೀತಾರಾಮ ರೈ ಮೈಸೂರು, ಪುತ್ರಿ ರಚನಾ ಎಸ್. ರೈ ಮೈಸೂರು, ಪುತ್ರ ಮಂಜುನಾಥ ಪ್ರಸಾದ್ ರೈ ನಡುಮನೆ, ಸೊಸೆ ಮಣಿ ಎಂ. ರೈ, ಮೊಮ್ಮಕ್ಕಳಾದ ದಿತ್ಯ, ದ್ರಿಶಿತ್, ಆಶ್ರಿತ್ ಹಾಗೂ ಪುಣ್ಚಪ್ಪಾಡಿ ನಡುಮನೆ ಕುಟುಂಬಸ್ಥರು, ಊರ-ಪರವೂರ ಹಿತೈಷಿಗಳು, ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ವರ್ತಕರು, ಉದ್ಯಮಿಗಳು ಸಹಿತ ಅನೇಕ ಮಂದಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.