HomePage_Banner
HomePage_Banner
HomePage_Banner
HomePage_Banner

ವೀರಮಂಗಲದ ಯುವಕರಿಂದ ದೋಣಿ ನಿರ್ಮಾಣ- ಯುವಕರ ಸಾಧನೆಗೆ ಗ್ರಾಮಸ್ಥರ ಮೆಚ್ಚುಗೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

@ಯೂಸುಫ್ ರೆಂಜಲಾಡಿ

ಪುತ್ತೂರು: ನರಿಮೊಗರು ಗ್ರಾಮದ ವೀರಮಂಗಲ ಗ್ರಾಮದ ಮೂವರು ಯುವಕರು ವಿಶಿಷ್ಟ ಸಾಧನೆ ಮಾಡಿ ಗ್ರಾಮದಲ್ಲಿ ಸುದ್ದಿಯಾಗಿದ್ದಾರೆ. ನೀರು ಸಂಗ್ರಹಿಸುವ ಬ್ಯಾರೆಲ್‌ನಿಂದ ಮತ್ತು ಮರ, ಪೈಪ್ ಅಳವಡಿಸಿ ದೋಣಿ ನಿರ್ಮಿಸುಮ ಮೂಲಕ ಇವರು ಸಾಧನೆ ಮಾಡಿದ್ದಾರೆ.

ದೋಣಿಯನ್ನು ನೋಡದವರು ಬಹಳ ಅಪರೂಪ. ದೋಣಿಯಲ್ಲಿ ಪ್ರಯಾಣ ಮಾಡುವುದೆಂದರೆ ಎಲ್ಲರಿಗೂ ಖುಷಿ. ಆದರೆ ದೋಣಿಯನ್ನು ಹೇಗೆ ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಯಾರೂ ಮುಂದಾಗುವುದಿಲ್ಲ. ನದಿಗಳಲ್ಲಿ, ಸಮುದ್ರದಲ್ಲಿ ಮೀನು ಹಿಡಿಯಲು ಬಳಸುವ ದೋಣಿಗಳಲ್ಲಿ ನಾನಾ ವಿಧಗಳಿವೆ. ದೋಣಿಗಳನ್ನು ಮರ ಬಳಸಿ ನಿರ್ಮಾಣ ಮಾಡುತ್ತಾರೆ ಮತ್ತು ಅದು ನೀರಲ್ಲಿ ಮುಂದೆ ಸಾಗಬೇಕಾದರೆ ಅದಕ್ಕೆ ಅದರದ್ದೇ ಆದ ಆಕಾರ, ರೂಪವನ್ನು ಕೊಡಬೇಕಾಗುತ್ತದೆ. ಈ ಕಾರಣಕ್ಕೆ ದೋಣಿ ನಿರ್ಮಾಣ ಮಾಡಲು ಎಲ್ಲರಿಗೂ ಸಾಧ್ಯವಾಗದ ಮಾತು.

ಆದರೆ ವೀರಮಂಗಲದ ಯುವಕರಾದ ಜಮ್ಮು, ಅಶ್ರಫ್ ಮತ್ತು ರಶೀದ್‌ರವರು ಸೇರಿ ನೀರಿನ ಬ್ಯಾರಲ್‌ನಿಂದ ದೋಣಿಯನ್ನು ನಿರ್ಮಾಣ ಮಾಡಿ ಹೀಗೂ ದೋಣಿಯನ್ನು ನಿರ್ಮಾಣ ಮಾಡಬಹುದು ಎಂಬುದನ್ನು ತೋರಿಸಿಕೊಡುವ ಮೂಲಕ ಸಾಧನೆಯನ್ನು ಮಾಡಿದ್ದಾರೆ. ಇವರಿಗೆ ಇವರ ಗೆಳೆಯರು ಸಹಕಾರ ನೀಡಿದ್ದಾರೆ. ನೀರಿನ ಬ್ಯಾರೆಲ್‌ಗೆ ಮರದ ತುಂಡುಗಳನ್ನು, ಪಟ್ಟಿಗಳನ್ನು ಅಳವಡಿಸಿ ಒಂದು ಮರದ ಕಾಲಮಿತಿಯೊಳಗೆ ದೋಣಿಯನ್ನು ನಿರ್ಮಾಣ ಮಾಡಿದ್ದೂ ಮಾತ್ರವಲ್ಲದೆ ತಾವು ಮಾಡಿರುವ ದೋಣಿಯಲ್ಲಿ ಕುಮಾರಧಾರ ನದಿಯನ್ನು ದಾಟಿ ಪ್ರಾಯೋಗಿಕ ಸಂಚಾರವನ್ನು ಮಾಡಿ ಯಶಸ್ಸು ಕಂಡಿದ್ದಾರೆ. ಇವರು ನಿರ್ಮಾಣ ಮಾಡಿರುವ ದೋಣಿಯಲ್ಲಿ ಇಬ್ಬರು ಆರಾಮವಾಗಿ ಪ್ರಯಾಣಿಸಲು ಸಾಧ್ಯವಾಗುತ್ತದೆ. ಮೂವರು ಸಂಚಾರ ಮಾಡಬಹುದಾದರೂ ಪ್ರಯಾಣ ಸುಲಭವಲ್ಲ ಎಂದು ನಿರ್ಮಾಣ ಮಾಡಿದವರು ಹೇಳುತ್ತಾರೆ.

ದೋಣಿ ನಿರ್ಮಿಸಿದ್ದು ಹೀಗೆ…
ನೀರಿನ ಬ್ಯಾರಲ್‌ನ್ನು ಕತ್ತರಿಸಿ ಅದರ ಮೇಲ್ಬಾಗದಲ್ಲಿ ಮರದ ತುಂಡುಗಳನ್ನು ಅಳವಡಿಸಿ ಮತ್ತು ಅದರ ಒಳಗೆ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿದೆ. ನದಿಯಲ್ಲಿ ನೀರಿನ ಸೆಳೆತ ಎಷ್ಟೇ ಇದ್ದರೂ ಈ ದೋಣಿಯಲ್ಲಿ ದಾರಾಳವಾಗಿ ಮುಂದೆ ಸಾಗಬಹುದಾದ ತಾಂತ್ರಿಕತೆಯನ್ನು ಸಿದ್ದಪಡಿಸಲಾಗಿದೆ. ನದಿಯಲ್ಲಿ ನೀರು ತುಂಬಿ ಹರಿಯುವ ವೇಳೆಯೂ ಈ ದೋಣಿಯಲ್ಲಿ ಇಬ್ಬರು ಪ್ರಯಾಣಿಸಿ ಸೈ ಎನಿಸಿಕೊಂಡಿದ್ದಾರೆ. ಯುವಕರ ಈ ಅಪರೂಪದ ಸಾಧನೆಯನ್ನು ಕಂಡು ವೀರಮಂಗಲದ ಜನ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕುಮಾರಧಾರ ನದಿಯ ಒಂದು ತಟದಿಂದ ಇನ್ನೊಂದು ತಟಕ್ಕೆ ತುರ್ತಾಗಿ ತೆರಳಬೇಕಿದ್ದರೆ ಈ ಭಾಗದಲ್ಲಿ ದೋಣಿಯ ವ್ಯವಸ್ಥೆ ಇಲ್ಲದೇ ಇರುವ ಕಾರಣ ಹೊಸದಾಗಿ ನಿರ್ಮಾಣ ಮಾಡಿರುವ ದೋಣಿಯಲ್ಲಿ ತಟ ದಾಟಿಸಬಹುದು ಎಂದು ಸ್ಥಳೀಯರಾದ ಫಾರೂಕ್ ಆನಾಜೆ ತಿಳಿಸಿದ್ದಾರೆ.

ಆತೂರಿಗೆ ಸುಲಭ ಸಂಪರ್ಕ:
ಕುಮಾರಧಾರ ನದಿಯ ಇನ್ನೊಂದು ಬದಿಗೆ ಸಂಚರಿಸಿದರೆ ಕುದ್ಲೂರು, ಆತೂರು ಊರು ತಲುಪುತ್ತದೆ. ಬೇಸಿಗೆಯಲ್ಲಿ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದು ಆ ಸಂದರ್ಭದಲ್ಲಿ ಜನರನ್ನು ಆ ಕಡೆಗೆ ಕೊಂಡೊಯ್ಯಲು ದೋಣಿಯನ್ನು ಬಳಸುವ ಯೋಚನೆಯನ್ನು ಹೊಂದಿದ್ದೇವೆ ಎಂದು ಇಲ್ಲಿನ ಯುವಕರು ಹೇಳಿಕೊಂಡಿದ್ದಾರೆ.

ನಾವು ಮೂವರು ಯುವಕರು ನೀರಿನ ಬ್ಯಾರೆಲ್‌ಗೆ ಮರದ ತುಂಡು ಮತ್ತು ಮರದ ಪಟ್ಟಿಯನ್ನು ಬಳಸಿ ದೋಣಿಯನ್ನು ನಿರ್ಮಾಣ ಮಾಡಿದ್ದೇವೆ. ಒಂದು ವಾರಗಳ ಪ್ರಯತ್ನದಿಂದ ಇದರ ನಿರ್ಮಾಣ ಕಾರ್ಯ ನಡೆದಿದೆ. ಸುಮಾರು ೩೦೦೦ ರೂ ಖರ್ಚಾಗಿದೆ. ನಿರ್ಮಾಣ ಮಾಡಿರುವ ದೋಣಿಯಲ್ಲಿ ನಾವೇ ಪ್ರಾಯೋಗಿಕ ಸಂಚಾರವನ್ನು ಮಾಡಿದ್ದೇವೆ. ಯಾವುದೇ ತೊಂದರೆ ಕಾಣಿಸಿಕೊಳ್ಳಲಿಲ್ಲ. ಮುಂದೆ ದೊಡ್ಡ ದೋಣಿ ತಯಾರಿಸಿ ಮೋಟಾರ್ ಅಳವಡಿಸುವ ಯೋಚನೆಯೂ ಇದೆ. ಮೊದಲ ಪ್ರಯೋಗದಲ್ಲಿ ಯಶಸ್ವಿಯಾಗಿದ್ದೇವೆ, ಮುಂದೆಯೂ ಯಶಸ್ವಿಯಾಗಲಿದ್ದೇವೆ. ಇದಕ್ಕಾಗಿ ಗೆಳೆಯರ ಗ್ರಾಮಸ್ಥರ ಸಂಪೂರ್ಣ ಸಹಕಾರವೂ ಇದೆ.
-ಜಮ್ಮು, ಅಶ್ರಫ್, ರಶೀದ್(ದೋಣಿ ನಿರ್ಮಿಸಿದವರು)

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.