HomePage_Banner
HomePage_Banner
HomePage_Banner
HomePage_Banner

ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಭಗವದ್ಗೀತಾ ಪಠಣ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಭಕ್ತಿ ಎಂಬುದು ಸಹಜವಾಗಿ ಮೂಡಿಬರಬೇಕು : ಶ್ರೀಕೃಷ್ಣ ಉಪಾಧ್ಯಾಯ


ಪುತ್ತೂರು: ಭಗವದ್ಗೀತಾ ಪಠಣವಾಗಲಿ, ಭಜನೆಯಾಗಲಿ ಭಕ್ತಿಯಿಂದ, ಪ್ರೀತಿಯಿಂದ, ಹೃದಯದಿಂದ ಮೂಡಿ ಬರಬೇಕೇ ಹೊರತು ಒತ್ತಾಯದಿಂದಲ್ಲ. ಭಕ್ತಿಯೆಂದರೆ ಸಹಜವಾಗಿ ಉಂಟಾಗುವ ಸ್ವಾಭಾವಿಕ ಬಂಧನ. ಜನ್ಮ ಜನ್ಮಗಳ ಪುಣ್ಯದ ಸಂಸ್ಕಾರವಿದ್ದರೆ ದೇವರ ಮೇಲೆ ಭಕ್ತಿ ತನ್ನಿಂದ ತಾನೇ ಉಂಟಾಗುತ್ತದೆ ಎಂದು ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಸೋಮವಾರ ನಡೆದ ಶ್ರೀಮದ್ಭಗವದ್ಗೀತಾ ಪಠಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಭಗವಂತನ ವಿಚಾರದಲ್ಲಿ ಉಕ್ಕಿ ಹರಿಯುವ ಪ್ರೀತಿಯೇ ಭಕ್ತಿ. ಭಗವಂತನಾಡಿದ ಮಾತುಗಳು ನಮಗೆ ಭಗವದ್ಗೀತೆಯಲ್ಲಿ ಸಿಗುತ್ತವೆ. ಆದುದರಿಂದ ಭಗವಂತನ ನಾಲಿಗೆಯಿಂದ ಬಂದ ಭಗವದ್ಗೀತೆಯ ಶ್ಲೋಕಗಳು ಇಂದು ನಮ್ಮ ನಿಮ್ಮೆಲ್ಲರ ಬಾಯಿಂದಲೂ ಬರುಂತಾಗಬೇಕು ಎಂದರಲ್ಲದೆ ಭಗವದ್ಗೀತೆಯ ಮಹತ್ವವನ್ನು ಅರುಹುತ್ತಾ ಭಗವದ್ಗೀತೆಯನ್ನು ವ್ಯಾಕರಣಬದ್ಧವಾಗಿ, ಸ್ಪಷ್ಟ ಉಚ್ಛಾರದಿಂದ ಪಠಿಸಲು ಕಲಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಭಗವದ್ಗೀತೆ ಎನ್ನುವುದು ದುಃಖಕ್ಕೆ ಸ್ಥಿತಪ್ರಜ್ಞತೆಯ ಔಷಧ ನೀಡುವ ಬ್ರಹ್ಮಾಸ್ತ್ರ. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಲು ಭಗವದ್ಗೀತೆ ಕಲಿಸಿಕೊಡುತ್ತದೆ. ಇಂತಹ ಸರ್ವಶ್ರೇಷ್ಟ ಹಾಗೂ ಪವಿತ್ರವಾದ ಭಗವದ್ಗೀತೆಯನ್ನು ಅತ್ಯುತ್ತಮ ಗುರು ಮುಖೇನ ವಿದ್ಯಾರ್ಥಿಗಳಿಗೆ ಒದಗಿಸಿಕೊಡುವುದು ಶಿಕ್ಷಣ ಸಂಸ್ಥೆಗಳ ಆದ್ಯ ಕರ್ತವ್ಯ. ಇದರ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಂಡಾಗ ಕಾರ್ಯಕ್ರಮದ ಆಯೋಜನೆ ಸಾರ್ಥಕವೆನಿಸುತ್ತದೆ ಎಂದು ನುಡಿದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ನಿರ್ದೇಶಕ ಸುರೇಶ್ ಶೆಟ್ಟಿ, ಬೋಧಕ ಹಾಗೂ ಬೋಧಕೇತರ ವೃಂದ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಿದರು. ಗಣಿತಶಾಸ್ತ್ರ ವಿಭಾಗದ ಉಪನ್ಯಾಸಕಿ ರಮ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.