HomePage_Banner
HomePage_Banner
HomePage_Banner
HomePage_Banner

ಕೆದಂಬಾಡಿ ಶಕ್ತಿಕೇಂದ್ರದ ಬೂತ್ ಅಧ್ಯಕ್ಷೆ ವೀಣಾ ಮನೆಯಲ್ಲಿ ನಾಮಫಲಕ ಅಳವಡಿಕೆ ಮತ್ತು ಕಾರ್ಯಕರ್ತರ ಭೇಟಿ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಕೆದಂಬಾಡಿ ಶಕ್ತಿಕೇಂದ್ರದ 184ನೇ ಬೂತ್ ನ ಅಧ್ಯಕ್ಷರಾದ ವೀಣಾ ಆರ್ ರೈ ಬೆದ್ರುಮಾರು ಇವರ ಮನೆಗೆ ಸೆ.9ರಂದು ಶಾಸಕ ಸಂಜೀವ ಮಠ0ದೂರುರವರು ಹಾಗೂ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಆಗಮಿಸಿ ಬೂತ್ ಅಧ್ಯಕ್ಷರ ಮನೆಯಲ್ಲಿ ನಾಮಫಲಕ ಅಳವಡಿಸುವ ಮತ್ತು ಕಾರ್ಯಕರ್ತರ ಬೇಟಿ ಕಾರ್ಯಕ್ರಮವು ನಡೆಯಿತು.

ಮೋದಿಜಿಯ ಕನಸಿನ ಅಭಿವೃದ್ಧಿ ಕಾರ್ಯಗಳು ಯೋಜನೆಗಳು ಪುತ್ತೂರು ತಾಲೂಕಿನ ಪ್ರತಿ ಹಳ್ಳಿ ಹಳ್ಳಿಯ ಕಟ್ಟ ಕಡೆಯ ವ್ಯಕ್ತಿಗೂ ತಲುಪ ಬೇಕೆಂಬ ದ್ಯೆಯ ಹೊಂದಿರುವ ತಾಲೂಕಿನ ಎಲ್ಲ ಗ್ರಾಮಗಳು ಅಭಿವೃದ್ಧಿ ಕಾಣಬೇಕೆಂದು ಹಲವಾರು ಕೆಲಸ ಕಾರ್ಯಗಳನ್ನು ಮಾಡುತ್ತಿರುವ ನಮ್ಮ ಹೆಮ್ಮೆಯ ಶಾಸಕರಾದ ಅಭಿವೃದ್ಧಿಯ ಹರಿಕಾರ ಶ್ರೀ ಸಂಜೀವ ಮಠ0ದೂರುರವರಿಂದ ಕೆದಂಬಾಡಿ ಗ್ರಾಮದ 184ನೇ ಬುತಿನ ಅಧ್ಯಕ್ಷೆ ವೀಣಾ ಆರ್ ರೈ ಬೆದ್ರುಮಾರು ಮನೆಯಲ್ಲಿ ನಾಮಫಲಕ ಅಳವಡಿಸುವ ಕಾರ್ಯಕ್ರಮ ಕ್ಕೆ ಆಗಮಿಸಿ ಭಾರತ ಮಾತೆಯ ಎದುರು ದೀಪ ಬೆಳಗಿಸಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಪಕ್ಷದ ಮುಖಂಡರ ಹಾಗೂ ಬಿಜೆಪಿ ಕಾರ್ಯಕರ್ತರ ಸಮ್ಮುಖದಲ್ಲಿ ನಾಮಫಲಕ ಅಳವಡಿಸುವ ಕಾರ್ಯಕ್ರಮ ನಡೆಯಿತು.

ಹಾಗು ಬಿಜೆಪಿಯನ್ನು ಕಟ್ಟಿಬೆಳೆಸಿದ ಬೂತ್ ನ ಹಿರಿಯ ಕಾರ್ಯಕರ್ತರಾದ ನಾರಯಣ ಗೌಡ ಇದ್ಯಪ್ಪೆ, ರಾಜೀವ ರೈ ಕೋರಂಗ ಇವರನ್ನು ಗುರುತಿಸಿ ಗೌರವಿಸಲಾಯಿತು. ಬೂತ್ ಅಧ್ಯಕ್ಷರಿಗೆ ನೆನಪಿನ ಕಾಣಿಕೆಯನ್ನು ಶಕ್ತಿಕೇಂದ್ರದ ವತಿಯಿಂದ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಒಬಿಸಿ ಮೋರ್ಚಾದ ಅಧ್ಯಕ್ಷ ಆರ್ ಸಿ ನಾರಾಯಣ , ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ ,ಮತ್ತು ಪುರುಷೋತ್ತಮ ಮುಂಗ್ಲಿಮನೆ,ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರತನ್ ರೈ ಕುಂಬ್ರ ನೆ.ಮಾಡ್ನೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಹಾಗೂ ಮಂಡಲದ ಕಾರ್ಯದರ್ಶಿ ವಿಜಯ ಕುಮಾರ್ ರೈ ಕೊರಂಗ ಗ್ರಾಮಾಂತರ ಮಂಡಲದ ಉಪಾಧ್ಯಕ್ಷ  ಯತೀಂದ್ರ ಕೊಚ್ಚಿ, ಕೆದಂಬಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ  ಬಾಸ್ಕರ್ ರೈ ಮಿತ್ರಂಪಾಡಿ ,
ಕೃಷ್ಣಕುಮಾರ್ ರೈ ಕೆದಂಬಾಡಿ ಗುತ್ತು, ಕೆದಂಬಾಡಿ ಶಕ್ತಿಕೇಂದ್ರದ ಪ್ರಮುಖ್ ನಾರಾಯಣ ಪೂಜಾರಿ ಕುರಿಕ್ಕಾರ, ಬೂತ್ ಅಧ್ಯಕ್ಷ ವೀಣಾ ಆರ್ ರೈ ಬೆದ್ರುಮಾರ್ , ಬೂತ್ ಕಾರ್ಯದರ್ಶಿಗಳಾದ ರಾಕೇಶ್ ಬೋಳೋಡಿ ಜನಾರ್ಧನ ರೈ ಪಡ್ಡಂಬೈಲು ಕೊಡಂಕಿರಿ ಪಂಚಾಯತ್ ಸದಸ್ಯರಾದ ವಿಠಲ್ ರೈ ಮಿತ್ತೋಡಿ, ಕೃಷ್ಣ ಕುಮಾರ್ ಇದ್ಯಪ್ಪೆ, ರೇವತಿ ಬೋಳೋಡಿ ಕೆದಂಬಾಡಿ,ಮಾಜಿ ಪಂಚಾಯತ್ ಸದಸ್ಯರಾದ ಪುಷ್ಪಾ.ಎಂ ಬೋಳೋಡಿ, ರಾಘವ ಗೌಡ ಕೆರೆಮೂಲೆ,ರೇಖಾ ಆರ್ ಗೌಡ , ಬೂತ್ ನ ಮಾಜಿ ಅಧ್ಯಕ್ಷರಾದ ಯಶೋಧರ ಚೌಟ, ಶ್ರೀರಾಮ ಭಜನಾ ಮಂದಿರ ಸನ್ಯಾಸಿಗುಡ್ಡೆ ಇದರ ಅಧ್ಯಕ್ಷರಾದ ಕರುಣಾಕರ ಅತ್ರೆಜಾಲು ಅಲಡ್ಕ ಸದಾಶಿವ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಅರುಣ್ ರೈ ಬೋಳೋಡಿ, ಮೋಹನ್ ಆಳ್ವ ಮುಂಡಾಲ ದಿನಕರ ರೈ ಮಾಣಿಪ್ಪಾಡಿ, ಕರುಣಾಕರ ರೈ ಕೊರಂಗ ಚಿರಾಗ್ ರೈ ಬೆದ್ರಮಾರ್ , ಮಹಾಬಲ ರೈ ಕುಕ್ಕುಜೋಡು, ಉಮೇಶ್ ನಾಯಕ್ ಬೋಳೋಡಿ ಲೋಕೇಶ್ ನಾಯ್ಕ ಬೋಳೋಡಿ, ಬಾಲಕೃಷ್ಣ ಚೌಟ, ಮೋಹನ್ ಪಾಟಲಿ ಕೊರಗಪ್ಪ ಪೂಜಾರಿ,ಸಾಯಿ ಪ್ರಸಾದ್ ರೈ, ಉಮಾ ಎಸ್ ರೈ,ಶಕಿಲಾ ರೈ, ಪ್ರಣಮ್ ರೈ ಶ್ರೇಷ್ಟ ರೈ, ಚೈತನ್ಯ ರೈ ಕಿರಣ್ ಬೋಳೋಡಿ ಉಪಸ್ಥಿತರಿದ್ದರು. ಕೃಷ್ಣ ಕುಮಾರ್ ಗೌಡ ಸ್ವಾಗತಿಸಿದರು. ನಾರಯಣ ಪೂಜಾರಿ ವಂದಿಸಿದರು. ಶರತ್ ಗುತ್ತು ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.