ಮುಗರೋಡಿ: ದಂಪತಿಗೆ ಮಾನಹಾನಿ ಮಾಡಿ ಹಲ್ಲೆ ಪ್ರಕರಣ – ಆರೋಪಿಯ ಅಪರಾಧ ಸಾಬೀತು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಪ್ರಾಸಿಕ್ಯೂಶನ್ ಪರ ವಾದಿಸಿದ ಸ.ಸ.ಅಭಿಯೋಜಕ ಪುತ್ತೂರು ನಿವಾಸಿ ದಿವ್ಯರಾಜ್ ಹೆಗ್ಡೆ

ಪುತ್ತೂರು: ೫ ವರ್ಷದ ಹಿಂದೆ ಬೆಳ್ತಂಗಡಿಯ ಮುಗರೋಡಿಯಲ್ಲಿ ಮನೆಯ ಅಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿ ದಂಪತಿಗೆ ಮಾನಹಾನಿ ಮಾಡಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಕೃತ್ಯ ಎಸಗಿದ ಕುರಿತು ಬೆಳ್ತಂಗಡಿ ನ್ಯಾಯಾಲಯ ಆರೋಪಿಯ ಅಪರಾಧ ಸಾಬೀತಾದ ಹಿನ್ನಲೆಯಲ್ಲಿ ಆರೋಪಿಯನ್ನು ದೋಷಿ ಎಂದು ತೀರ್ಪು ನೀಡಿದೆ. ಬೆಳ್ತಂಗಡಿ ಸರಕಾರಿ ಸಹಾಯಕ ಅಭಿಯೋಜಕ ಪುತ್ತೂರು ಉರ್ಲಾಂಡಿ ನಿವಾಸಿ ದಿವ್ಯರಾಜ್ ಅವರು ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದರು.

ಆರೋಪಿ ಬೆಳ್ತಂಗಡಿ ಕಣಿಯೂರು ಗ್ರಾಮದ ಶರತ್ ಚೌಟ ಅವರು ೨೦೧೬ರ ಫೆ. ೧೭ರಂದು ಸಂಜೆ ಕಣಿಯೂರು ಗ್ರಾಮದ ಶ್ರೇಯಾ ಮುಗರೋಡಿ ಎಂಬಲ್ಲಿ ರಾಜೀವ ರೈ ಅವರ ಮನೆಯ ಅಂಗಳಕ್ಕೆ ಪ್ರವೇಶ ಮಾಡಿ ರಾಜೀವ ರೈ ಅವರ ಪತ್ನಿ ಶಾರದಾ ಅವರ ಮಾನ ಹಾನಿ ಮಾಡಿದ ಮತ್ತು ಶಾರದಾ ಮತ್ತು ಅವರ ಪತಿ ರಾಜೀವ ರೈ ಅವರಿಗೆ ಹಲ್ಲೆ ನಡೆಸಿದ ಕೊಲೆ ಬೆದರಿಕೆಯೊಡ್ಡಿದ ಪ್ರಕರಣ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಪೊಲೀಸರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಬೆಳ್ತಂಗಡಿ ಸಿ.ಜೆ(ಹಿ.ವಿ) ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ನಾಗೇಶ್ ಮೂರ್ತಿ ಕೆ ಅವರು ಆರೋಪಿ ಶರತ್ ಚೌಟ ಅವರು ಎಸಗಿರುವ ಅಪರಾಧಗಳ ಪೈಕಿ ಐಪಿಸಿ ಕಲಂ ೪೪೭, ೩೫೪, ೩೨೩, ೫೦೬ ರಡಿಯ ಅಪರಾಧವು ಸಾಬೀತಾದ ನಿಟ್ಟಿನಲ್ಲಿ ಆರೋಪಿಯನ್ನು ದೋಷಿ ಎಂದು ಪರಿಗಣಿಸಿ ತೀರ್ಪು ನೀಡಿದ್ದಾರೆ. ಶಿಕ್ಷೆಯ ಪ್ರಮಾಣದ ಘೋಷಣೆಯನ್ನು ಅ.೮ಕ್ಕೆ ಮಾಡಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.