ತಾ. ಮುಸ್ಲಿಂ ಸಂಯುಕ್ತ ಜಮಾಅತ್ ಸಭೆ | ತಾಲೂಕು ಮಟ್ಟದ ಮಾಹಿತಿ ಕಾರ್ಯಾಗಾರ ನಡೆಸಲು ತೀರ್ಮಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ತಾ. ಮುಸ್ಲಿಂ ಸಂಯುಕ್ತ ಜಮಾಅತ್ ಇದರ ಸಾಮಾನ್ಯ ಸಭೆಯು ಸಮಿತಿ ಅಧ್ಯಕ್ಷ ಕೆ.ಪಿ. ಮುಹಮ್ಮದ್ ಹಾಜಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಪುತ್ತೂರು ತಾಲೂಕು ಮಟ್ಟದ ಎಲ್ಲಾ ಮಸೀದಿಗಳ ಅಧ್ಯಕ್ಷ ಕಾರ್ಯದರ್ಶಿ ಹಾಗೂ ಖಂಜಾಜಿಗಳಿಗೆ ಒಂದು ದಿನದ ಮಾಹಿತಿ ಕಾರ್ಯಾಗಾರವನ್ನು ನಡೆಸಲು ತೀರ್ಮಾನಿಸಲಾಯಿತು. ವಕ್ಫ್ ಸಮಿತಿ ಅಲ್ಪಸಂಖ್ಯಾತ ಇಲಾಖೆ ಹಾಗೂ ನಿಗಮಗಳಿಂದ ಮುಸ್ಲಿಂ ಸಮುದಾಯಕ್ಕೆ ಸಿಗುವ ಸೌಲಭ್ಯಗಳ ಬಗ್ಗೆ ಶೈಕ್ಷಣಿಕವಾಗಿ ಸಿಗುವ ಸೌಲಭ್ಯಗಳ ಹಾಗೂ ಇನ್ನಿತರ ಸೌಲಭ್ಯಗಳ ಬಗ್ಗೆ ಇಲಾಖೆಯ ಅಧಿಕಾರಿಗಳಿಂದ ಒಂದು ದಿನದ ಮಾಹಿತಿ ಕಾರ್ಯಾಗಾರ ನಡೆಯಲಿದೆ. ಅ.೫ರಂದು ಪುತ್ತೂರು ಕೊಟೆಚಾ ಹಾಲ್‌ನಲ್ಲಿ ಈ ಮಾಹಿತಿ ಕಾರ್ಯಾಗಾರ ನಡೆಸಲು ತೀರ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ವಹಿಸಿದ್ದ ಕೆ.ಪಿ. ಮುಹಮ್ಮದ್ ಹಾಜಿ ಕಲ್ಲೇಗ ಮಾತನಾಡಿ, ಅ.೫ರಂದು ನಡೆಸಲು ಉದ್ದೇಶಿಸಿದ ಒಂದು ದಿನದ ಮಾಹಿತಿ ಕಾರ್ಯಾಗಾರದಲ್ಲಿ ಎಲ್ಲಾ ಮಸೀದಿಗಳ ಪದಾಧಿಕಾರಿಗಳು ಭಾಗವಹಿಸಿ ಯಶಸ್ವಿಗೊಳಿಸುವಂತೆ ವಿನಂತಿಸಿದರು. ಸತ್ತಾರ್ ಸಖಾಫಿ ಮತ್ತು ಉಮ್ಮರ್ ದಾರಿಮಿ ಸಾಲ್ಮರ ದುಆ ನೆರೆವೇರಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ವಿವಿಧ ಪದಾಧಿಕಾರಿಗಳಾದ ಉಪಾಧ್ಯಕ್ಷ ಕೆ.ಎಂ. ಬಾವಾ ಹಾಜಿ ಕೂರ್ನಡ್ಕ, ಕೋಶಾಧಿಕಾರಿ ಬಿ.ಎ. ಶಕೂರ್ ಹಾಜಿ, ಎಂ.ಎಸ್. ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಎಲ್.ಟಿ. ಅಬ್ದುಲ್ ರಝಾಕ್ ಹಾಜಿ, ಕೆ.ಬಿ. ಖಾಸೀಂ ಹಾಜಿ ಮಿತ್ತೂರು, ಅರಿಯಡ್ಕ ಅಬ್ದುಲ್ ರಹೀಮಾನ್ ಹಾಜಿ, ಯು. ಅಬ್ದುಲ್ಲಾ ಹಾಜಿ ಸಾಲ್ಮರ, ರಹೀಮಾನ್ ಗಾರ್ಬಲ್ ಸಾಲ್ಮರ, ಅಶ್ರಫ್ ಕಲ್ಲೇಗ, ಹಸನ್ ಹಾಜಿ ಸಿಟಿ ಬಝಾರ್, ಇಬ್ರಾಹಿಂ ತಿಂಗಳಾಡಿ, ಸುಲೈಮಾನ್ ಹಾಜಿ ಸಾಲ್ಮರ, ಶೇಖ್ ಜೈನುದ್ದೀನ್, ರಶೀದ್ ಹಾಜಿ ಪರ್ಲಡ್ಕ, ಶಂಶುದ್ದೀನ್, ಯೂಸೂಫ್ ರೆಂಜಲಾಡಿ, ಅಬ್ದುಲ್ಲಾ ಸಖಾಫಿ, ಕೆ.ಎಂ. ಸಿದ್ದೀಕ್ ರವರು ಸಲಹೆ ಸೂಚನೆಗಳನ್ನು ನೀಡಿದರು. ಉಪಾಧ್ಯಕ್ಷ ಕೆ.ಎಂ. ಬಾವಾ ಹಾಜಿ ಪ್ರಸ್ತಾವಿಕ ಮಾತುಗಳಾನ್ನಾಡಿದರು. ಪ್ರಧಾನ ಕಾರ್ಯದರ್ಶಿ ಎಲ್.ಟಿ. ಅಬ್ದುಲ್ ರಝಾಕ್ ಹಾಜಿ ಸ್ವಾಗತಿಸಿ, ಕೋಶಾಧಿಕಾರಿ ಬಿ.ಎ. ಶಕೂರ್ ಹಾಜಿ ವಂದಿಸಿದರು.

—ಬಾಕ್ಸ್—-
ಕಮ್ಮಾಡಿ ಇಬ್ರಾಹಿಂ ಹಾಜಿಯವರಿಗೆ ಅನುಸ್ಮರಣೆ
ತಾ. ಮುಸ್ಲಿಂ ಸಂಯುಕ್ತ ಜಮಾಅತ್‌ನ ಅಧ್ಯಕ್ಷರಾಗಿದ್ದ ದಿ. ಕಮ್ಮಾಡಿ ಇಬ್ರಾಹಿಂ ಹಾಜಿ ಹಾಗೂ ಆಗಲಿದ ಸಂಯುಕ್ತ ಜಮಾಅತಿನ ವಿವಿಧ ಪದಾಧಿಕಾರಿಗಳ ಹೆಸರಿನಲ್ಲಿ ಅನುಸ್ಮರಣೆ ನಡೆಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.