ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ನಿವೃತ್ತ ಕಾರ್ಯನಿರ್ವಹಣಾಧಿಕಾರಿಯವರ ಅಭಿನಂದನಾ ಸಮಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಪಾರದರ್ಶಕತೆಯ ವ್ಯವಹಾರದಿಂದ ಸಹಕಾರಿಯು ಯಶಸ್ಸನ್ನು ಸಾಧಿಸಬಹುದು- ಒಡಿಯೂರು ಶ್ರೀ


ವಿಟ್ಲ: ಸಹಕಾರಿಯು ಯಶಸ್ಸು ಸಾಧಿಸಲು ವ್ಯವಹಾರದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ವ್ಯವಹಾರದಲ್ಲಿ ಒಂದು ಬಾಹ್ಯ ಮತ್ತು ಇನ್ನೊಂದು ಅಂತರಂಗದ ವ್ಯವಹಾರ. ಲೌಕಿಕ ಬದುಕಿನಲ್ಲಿ ಬಾಹ್ಯ ವ್ಯವಹಾರದೊಂದಿಗೆ ಹೃದಯ ಶ್ರೀಮಂತಿಕೆ ಬೆಳೆಸಿಕೊಂಡಾಗ ಒಳಿತನ್ನು ಕಾಣಲು ಸಾಧ್ಯ. ಇದರಲ್ಲಿ ಸಮಾಜಮುಖಿ ಚಿಂತನೆ ಮತ್ತು ಪರಿಶುದ್ಧತೆ ಇರಬೇಕು. ಅಧ್ಯಾತ್ಮದ ಬದುಕಿಗೆ ಒಂದೇ ಉದ್ದೇಶ, ಸಮಾಜೋದ್ಧಾರಕ್ಕೆ ವಿವಿಧೋದ್ದೇಶ ಬೇಕು. ಇವೆಲ್ಲವೂ ನಮ್ಮ ಮನಸ್ಸಿನ ಆಯ್ಕೆ” ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ  ಶ್ರೀ ಗುರುದೇವಾನಂದ ಸ್ವಾಮಿಜಿಯವರು ಹೇಳಿದರು.

ಒಡಿಯೂರು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಜರಗಿದ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಎಂ. ಉಗ್ಗಪ್ಪ ಶೆಟ್ಟಿ ರವರ ಅಭಿನಂದನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
 
ಸಾಧ್ವಿ ಶ್ರೀ ಮಾತಾನಂದಮಯೀಯವರು ಆಶೀರ್ವಚನ ನೀಡಿ ನಿಸ್ವಾರ್ಥ ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಂಡು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುವ ಸಂದರ್ಭ ವಜ್ರದಂತೆ ಕಠಿಣವಾಗಿರಬೇಕಾಗುತ್ತದೆ. ಇಂತಹ ಬದ್ಧತೆಯಿಂದ ಸೇವೆ ಸಲ್ಲಿಸಿದ ಶ್ರೀಯುತರಿಗೆ ಪೂಜ್ಯ ಶ್ರೀಗಳವರ ಅಭಯ ಯಾವಾಗಲೂ ಇರುತ್ತದೆ ಎಂದರು.

ಅಭಿನಂದನೆ ಸ್ವೀಕರಿಸಿದ ಉಗ್ಗಪ್ಪ ಶೆಟ್ಟಿಯವರು ಮಾತನಾಡಿ ಈ ಅಭಿನಂದನೆಯು ನನ್ನ ಜೀವನದ ಅಮೂಲ್ಯವಾದ ಕ್ಷಣ. ಹೆಚ್ಚು ಸಂತೋಷವನ್ನುಂಟುಮಾಡಿದ ಸಂದರ್ಭವಾಗಿದ್ದು, ಇದೆಂದಿಗೂ ಮರೆಯಲಾಗದ ಮಧುರ ಕ್ಷಣವಾಗಿದೆ ಎಂದರು.

ವೇದಿಕೆಯಲ್ಲಿ ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ  ಎ. ಅಶೋಕ್‌ಕುಮಾರ್ ಬಿಜೈ, ಹಿರಿಯ ಪತ್ರಕರ್ತ, ಒಡಿಯೂರ್ದ ತುಳುಕೂಟದ ಅಧ್ಯಕ್ಷ  ಯಶವಂತ ವಿಟ್ಲ, ಹಾಗೂ ಸಹಕಾರಿಯ  ನಿರ್ದೇಶಕರು ಉಪಸ್ಥಿತರಿದ್ದರು.

ಸಹಕಾರಿಯ ಅಧ್ಯಕ್ಷ  ಎ. ಸುರೇಶ್ ರೈ ಮತ್ತು ನಿರ್ದೇಶಕ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠ ಸಂಚಾಲಕ  ಗಣಪತಿ ಭಟ್ ಸೇರಾಜೆ ಅನಿಸಿಕೆ ಮಾತುಗಳನ್ನಾಡಿದರು. ಸಹಕಾರಿಯ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿ ಅಭಿನಂದನಾ ಪತ್ರ ವಾಚಿಸಿದರು. ಉಪಾಧ್ಯಕ್ಷ  ಪಿ. ಲಿಂಗಪ್ಪ ಗೌಡ ರವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಮಹಾಪ್ರಬಂಧಕ  ತಾರಾನಾಥ ಶೆಟ್ಟಿ ವಂದಿಸಿದರು. ತೊಕ್ಕೊಟ್ಟು ಶಾಖಾ ಪ್ರಬಂಧಕ ಸದಾಶಿವ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.