ಗುಂಡ್ಯ: ಲಾರಿಯಿಂದ ರಬ್ಬರ್ ಶೀಟ್ ಕಳವು ಪ್ರಕರಣ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಮೂವರು ಆರೋಪಿಗಳ ಬಂಧನ-ರಬ್ಬರ್ ಶೀಟ್, ವಾಹನ ವಶ

ನೆಲ್ಯಾಡಿ: ಒಂದೂವರೇ ತಿಂಗಳ ಹಿಂದೆ ಗುಂಡ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿ ನಿಲ್ಲಿಸಿದ್ದ ಲಾರಿಯಿಂದ ರಬ್ಬರ್‌ಶೀಟ್ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಶಿರಾಡಿಯ ಮೂವರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

 

ಶಿರಾಡಿ ಗ್ರಾಮದ ಮಿತ್ತಮಜಲು ನಿವಾಸಿ ಎಂ.ಎಸ್.ರಾಜು ಎಂಬವರ ಪುತ್ರ ತೋಮಸ್ ಯಾನೆ ರಿಜು(33.), ಎಡಪ್ಪಾಟ್ ದಿ.ಕೆ.ಪಿ.ಪೈಲಿಯವರ ಪುತ್ರ ಇ.ಪಿ.ವರ್ಗೀಸ್(48ವ.)ಹಾಗೂ ಶಿರಾಡಿ ಗ್ರಾಮದ ಪೇರಮಜಲು ದಿ.ಚೋಮರವರ ಪುತ್ರ ಶೀನಪ್ಪ(46ವ.) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ತಲಾ 25 ಕೆ.ಜಿ.ಯ ಒಟ್ಟು 425 ಕೆ.ಜಿ.ತೂಕದ ಅಂದಾಜು 75 ಸಾವಿರ ರೂ.ಮೌಲ್ಯದ 17 ಬಂಡಲ್ ರಬ್ಬರ್ ಶೀಟ್‌ಗಳು., ರಬ್ಬರ್ ಶೀಟ್ ಸಾಗಿಸಲು ಉಪಯೋಗಿಸಿದ 1.50 ಲಕ್ಷ ರೂ.ಮೌಲ್ಯದ ಜೀಪು(ನಂಬ್ರ ಕೆಎ 19 ಝಡ್ 249) ವಶಪಡಿಸಿಕೊಂಡಿದ್ದಾರೆ.

ಘಟನೆ ವಿವರ:
ತಮಿಳುನಾಡು ಮೂಲದ ಬಾಬು ಎಂಬವರು ಟಿಎನ್ 73 ಎಂ 3499 ನಂಬ್ರದ ಲಾರಿಯಲ್ಲಿ ರಬ್ಬರ್ ಶೀಟ್‌ಗಳನ್ನು ಲೋಡ್ ಮಾಡಿಕೊಂಡು ಬಂದು ಕಡಬ ತಾಲೂಕು ಶಿರಾಡಿ ಗ್ರಾಮದ ಗುಂಡ್ಯ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ 25-07-2021 ರಂದು ಬೆಳಿಗ್ಗೆ 7-30 ಗಂಟೆಗೆ ನಿಲ್ಲಿಸಿ ಹೋಗಿದ್ದು ಯಾರೋ ಕಳ್ಳರು 25-07-2021 ರಂದು ಬೆಳಿಗ್ಗೆ 7.30 ಗಂಟೆಯಿಂದ 28-07-2021 ರಂದು ಮಧ್ಯಾಹ್ನ 1 ಗಂಟೆಯ ಅವಧಿಯಲ್ಲಿ ಲೋಡ್ ಮಾಡಿದ ರಬ್ಬರ್ ಶೀಟ್‌ಗಳನ್ನು ಅದರ ಮೇಲೆ ಹಾಕಲಾದ ಟರ್ಪಾಲ್‌ಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿ ಟರ್ಪಾಲ್ ಸರಿಸಿ ಲಾರಿಯಲ್ಲಿ ಲೋಡ್ ಮಾಡಿದ್ದ ರಬ್ಬರ್ ಶೀಟ್‌ಗಳಿರುವ ಬಂಡಲ್‌ಗಳ ಪೈಕಿ ಅಂದಾಜು 1.45 ಲಕ್ಷ ರೂ.ಮೌಲ್ಯದ ತಲಾ 25 ಕೆ ಜಿ ತೂಕದ ರಬ್ಬರ್ ಶೀಟ್‌ಗಳಿರುವ ಸುಮಾರು 35 ಬಂಡಲ್‌ಗಳನ್ನು ಕಳವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಬಾಬು ಜಿ.,ರವರು ನೀಡಿದ ದೂರಿನ ಆಧಾರದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡಿದ್ದ ನೆಲ್ಯಾಡಿ ಹೊರ ಠಾಣಾ ಎಎಸ್‌ಐ ಸೀತಾರಾಮ ಗೌಡ, ಹೆಡ್‌ಕಾನ್ಸ್‌ಸ್ಟೇಬಲ್ ಹಿತೋಷ್ ಕುಮಾರ್, ಕಾನ್ಸ್‌ಸ್ಟೇಬಲ್ ಯೋಗರಾಜ್‌ರವರು ಶಿರಾಡಿ ಗ್ರಾಮದ ಮಿತ್ತಮಜಲು ಚರ್ಚ್‌ಗೆ ಸಂಬಂಧಪಟ್ಟ ಸಿಲುಬೆ ಬಳಿ ಆರೋಪಿಗಳಾದ ಮಿತ್ತಮಜಲು ನಿವಾಸಿ ತೋಮಸ್ ಯಾನೆ ರಿಜು, ಎಡಪ್ಪಾಟ್ ನಿವಾಸಿ ಇ.ಪಿ.ವರ್ಗೀಸ್ ಹಾಗೂ ಪೇರಮಜಲು ನಿವಾಸಿ ಶೀನಪ್ಪ ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದರು. ವಿಚಾರಣೆ ವೇಳೆ ಆರೋಪಿಗಳು 26.07.2021ರಂದು ರಾತ್ರಿ ಸುಮಾರು 10.30 ಕ್ಕೆ ಗುಂಡ್ಯ ಬಳಿ ರಾಷ್ಟ್ರೀಯ ಹೆದ್ದಾರಿ ಬಳಿ ಬಳಿ ನಿಲ್ಲಿಸಿದ್ದ ರಬ್ಬರ್ ಲೋಡ್ ಲಾರಿಯಿಂದ ರಬ್ಬರ್ ಶೀಟ್ ಬಂಡಲ್‌ಗಳನ್ನು ತಂಗಚ್ಚನ್ ಹಾಗೂ ಸನೋಜ್ ಎಂಬವರುಗಳ ಜೊತೆ ಸೇರಿಕೊಂಡು ಕಳ್ಳತನ ಮಾಡಿ ತಂಗಚ್ಚನ್‌ರವರ ಬಾಬ್ತು ಜೀಪಿನಲ್ಲಿ ಸಾಗಿಸಿರುವುದಾಗಿ ಹೇಳಿ ತಪ್ಪೊಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಗಳಾದ ತೋಮಸ್ ಯಾನೆ ರಿಜು, ಇ.ಪಿ.ವರ್ಗೀಸ್ ಹಾಗೂ ಶೀನಪ್ಪ ಎಂಬರನ್ನು ಬಂಧಿಸಿದ್ದು ಈ ಕೃತ್ಯದಲ್ಲಿ ಭಾಗಿಯಾಗಿದ್ದ ತಂಗಚ್ಚನ್ ಹಾಗೂ ಸನೋಜ್‌ರವರ ಪತ್ತೆ ಕಾರ್ಯಾಚರಣೆ ಕೈಗೊಂಡಿದ್ದಾರೆ.

 

ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಪೊಲೀಸ್ ಅಧೀಕ್ಷಕರು ದ.ಕ ಜಿಲ್ಲೆ ಮಂಗಳೂರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ದ.ಕ ಜಿಲ್ಲೆ ಮಂಗಳೂರವರ ನಿರ್ದೇಶನದಲ್ಲಿ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಹಾಗೂ ಉಪ್ಪಿನಂಗಡಿ ಠಾಣಾ ಪಿಎಸ್‌ಐ ಕುಮಾರ್ ಕಾಂಬ್ಳೆ, ಎಎಸ್‌ಐ ಸೀತಾರಾಮ ಗೌಡ, ಹೆಡ್‌ಕಾನ್ಸ್‌ಸ್ಟೇಬಲ್‌ಗಳಾದ ಹಿತೋಷ್ ಕುಮಾರ್, ಕೃಷ್ಣಪ್ಪ ನಾಯ್ಕ, ಕಾನ್ಸ್‌ಸ್ಟೇಬಲ್ ಯೋಗರಾಜ್‌ರವರು ಸದ್ರಿ ಪ್ರಕರಣದ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.