ಇಂದು (ಸೆ.15) ಇಂಜಿನಿಯರ್ಸ್‌ ಡೇ : ಭಾರತ ರತ್ನ ಸರ್‌ಎಂ.ವಿಶ್ವೇಶ್ವರಯ್ಯ ಸ್ಮರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಇಂಜಿನಿಯರ್ ಒಂದು ಹೃದಯವಿದ್ದಂತೆ, ಇಂಜಿನಿಯರಿಂಗ್ ಎಂದರೆ ವಿಜ್ಞಾನವನ್ನು ಬಳಸಿ ಕ್ರಿಯಾಶೀಲತೆಯಲ್ಲಿ ಪ್ರಾಯೋಗಿಕವಾಗಿ ಪರಿಹಾರವನ್ನು ಕಂಡುಹಿಡಿಯುವುದು. ಇದು ಒಂದು ಉದಾತ್ತ ವೃತ್ತಿಯಾಗಿದೆ’ ಹೌದು ರಾಣಿ ಎಲಿಜಬೆತ್ ಹೇಳಿದ ಈ ಮಾತುಗಳು ಇಂಜಿನಿಯರ್‌ಗಳಿಗೆ ಅಕ್ಷರಶಃ ಒಪ್ಪುತ್ತವೆ. ಇಂಜಿನಿಯರ್‌ಗಳ ಕೆಲಸವು ಒಂದು ದೊಡ್ಡ ವೈಜ್ಞಾನಿಕ ಸಾಹಸವೂ ಆಗಿರುವಂತೆ ಒಂದು ದೊಡ್ಡ ಮಾನವ ಸಾಹಸವೂ ಆಗಿದೆ. ವಿಜ್ಞಾನ ಅಂದರೆ ತಿಳಿದುಕೊಳ್ಳುವುದು, ಇಂಜಿನಿಯರಿಂಗ್ ಅಂದ್ರೆ ಮಾಡುವುದು. ಇಂಜಿನಿಯರ್ ದಿನವನ್ನು ವಿವಿಧ ದೇಶಗಳಲ್ಲಿ ವಿವಿಧ ದಿನಾಂಕಗಳಲ್ಲಿ ಆಚರಿಸಲಾಗುತ್ತದೆ. ಭಾರತದಲ್ಲಿ ಇಂಜಿನಿಯರ್ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಆಚರಿಸಲಾಗುತ್ತದೆ.

 

ಈ ದಿನವನು ಶ್ರೇಷ್ಠ ಭಾರತೀಯ ಇಂಜಿನಿಯರ್ ಭಾರತ ರತ್ನ ಸರ್‌ಎಂ.ವಿಶ್ವೇಶ್ವರಯ್ಯರವರಿಗೆ ಗೌರವ ಸೂಚಕವಾಗಿ ಆಚರಿಸಲಾಗುತ್ತದೆ. ಭಾರತ ಕಂಡ ಅತ್ಯುತ್ತಮ ಶ್ರೇಷ್ಠ ಇಂಜಿನಿಯರ್‌ಗಳಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಅಗ್ರಗಣ್ಯರಾಗಿದ್ದಾರೆ. ಅವರು ಸೆ.15 , 1860 ರಲ್ಲಿ ಜನಿಸಿದರು. ವಿಶ್ವೇಶ್ವರಯ್ಯರವರು ಮೈಸೂರಿನಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಾಣದ ಮುಖ್ಯ ಇಂಜಿನಿಯರ್ ಮತ್ತು ಹೈದರಾಬಾದ್ ನಗರಕ್ಕೆ ಪ್ರವಾಹ ಸಂರಕ್ಷಣಾ ವ್ಯವಸ್ಥೆಯ ಮುಖ್ಯ ವಿನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಭಾರತದಲ್ಲಿ ಇಂಜಿನಿಯರ್ ಸಮುದಾಯವು ಸರ್.ಎಂ.ವಿರವರ ನೆನಪಿನಲ್ಲಿ ಈ ದಿನವನ್ನು ಆಚರಿಸುಗುತ್ತದೆ. ವಿಶ್ವೇಶ್ವರಯ್ಯನವರು ಜಾಗತಿಕ ಮಟ್ಟದಲ್ಲೇ ಸಾರ್ವಕಾಲಿಕ ಶ್ರೇಷ್ಠ ತಾಂತ್ರಿಕ ಮೇರುವ್ಯಕ್ತಿ. ಅವರು ತಮ್ಮ ತಾಂತ್ರಿಕ ಕುಶಲತೆಯನ್ನು ಸಮುದಾಯ, ನಾಡು-ದೇಶದ ಹಿತಕ್ಕಾಗಿಯೇ ಮೀಸಲಿಟ್ಟ ಪ್ರಾತಃಸ್ಮರಣೀಯ ಪುರುಷರು. ಅವರ ಉತ್ಕೃಷ್ಟ ಸಾಧನೆಯಾದ ಜಲ ಸಂಪನ್ಮೂಲದ ಸದ್ಬಳಕೆ ಇಂದಿಗೂ ನಮಗೆ ಜೀವನದಿಯಾಗಿ ನೀರುಣಿಸುತ್ತಿದೆ. ಅವರು ಅಂದು ಹಾಕಿದಂತ ಮೇಲ್ಪಂಕ್ತಿಯಿಂದಾಗಿ ಇಂಜಿನಿಯರ್‌ಗಳು ಇಂದಿಗೂ ಸಹ ನಮ್ಮ ದೈನಿಕ ಜೀವನದಲ್ಲಿ ಮುಖ್ಯ ಪಾತ್ರ ವಹಿಸುತ್ತಲೇ ಬಂದಿದ್ದಾರೆ. ಮೂಲ ವಿಜ್ಞಾನದ ತಲಹದಿಯಿಂದ, ತಾಂತ್ರಿಕ ನೈಪುಣ್ಯತೆಯ ಮಾಧ್ಯಮದ ಮೂಲಕ ನಿರ್ದಿಷ್ಟ ವಸ್ತು ಅಥವಾ ಸೇವೆ ನೀಡುವಲ್ಲಿ ಇಂಜಿನಿಯರ್‌ಗಳ ಪಾತ್ರ ಇಂದು ನಮ್ಮ ಬದುಕನ್ನು ಹಸನಾಗಿಸಿದೆ. ಜರ್ಮನ್‌ನ ವಾಸ್ತುಶಿಲ್ಪಿ ವಾಲ್ಟರ್ ಗ್ರೋಪಿಯನ್ ಯವರು ಒಂದು ಕಡೆ ಹೇಳುತ್ತಾರೆ, ಇಂಜಿನಿಯರಿಂಗ್ ಕೊನೆಗೊಳ್ಳುವ ಸ್ಥಳದಲ್ಲಿ ವಾಸ್ತುಶಿಲ್ಪ ಪ್ರಾರಂಭವಾಗುತ್ತದೆ ಎಂಬುದಾಗಿ ಹೌದು, ಯಶಸ್ವಿ ಇಂಜಿನಿಯರಿಂಗ್ ಎಂದರೆ ವಿಷಯಗಳು ಹೇಗೆ ಮುರಿಯುತ್ತವೆ ಅಥವಾ ವಿಫಲಗೊಳ್ಳುತ್ತವೆ. ಎಂಬುದನ್ನು ಅರ್ಥಮಾಡಿಕೊಳ್ಳುವುದಾಗಿದೆ ಎನ್ನುತ್ತಾರೆ ಅಮೇರಿಕನ್ ಇಂಜಿನಿಯರ್ ಹೆನ್ರಿಯವರು. ಮನೆ, ಕಟ್ಟಡ ಯಾವುದೇ ಆಗಲಿ ಒಂದು ಸದೃಢ ನಿರ್ಮಾಣದ ಹಿಂದೆ ಇಂಜಿನಿಯರ್‌ಗಳ ಪಾತ್ರ ಬಹಳ ಪ್ರಾಮುಖ್ಯವಾದದ್ದು ಆಗಿದೆ. ಇಂಜಿನಿಯರ್ ದಿನದ ಪ್ರಯುಕ್ತ ನಮ್ಮ ಎಲ್ಲಾ ಅಭಿಯಂತರರುಗಳಿಗೆ ಪ್ರೀತಿಯ ಶುಭಾಶಯಗಳೊಂದಿಗೆ ನಿಮ್ಮೊಳಗಿನ ತಾಂತ್ರಿಕ ಕ್ರಿಯಾಶೀಲತೆಯಿಂದ ಒಂದು ಸದೃಢ ಭಾರತ ನಿರ್ಮಾಣವಾಗಲಿ ಎಂಬುದೇ ನಮ್ಮೆಲ್ಲರ ಹಾರೈಕೆಯಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.