ಒಡಿಯೂರು ಶ್ರೀಗಳ ಷಷ್ಟ್ಯಬ್ದ ಸಮಿತಿಯಿಂದ ಸ್ವರ್ಧಾ ಕಾರ್ಯಕ್ರಮ ಪುಟಾಣಿಗಳ ಪ್ರತಿಭೆ ವಿಕಸನಕ್ಕೆ ಅವಕಾಶ ಅಗತ್ಯ- ಸೀತಾರಾಮ ರೈ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಸವಣೂರು : ಒಡಿಯೂರು ಶ್ರೀಗಳ ಷಷ್ಟ್ಯಬ್ದ ಸಂಭ್ರಮ ಸಮಿತಿ ವತಿಯಿಂದ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ನೆಲ್ಲಿಕಟ್ಟೆ ಅಂಗನವಾಡಿ ಪುಟಾಣಿಗಳಿಗೆ ರಾಧಾಕೃಷ್ಣ ಸ್ಪರ್ಧೆ ನಡೆಸಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದಕ್ಷನ್, ದ್ವಿತೀಯ ಬಹುಮಾನ ನಿಹಾರಿಕ, ತೃತಿಯ ಬಹುಮಾನ ಹಸ್ತ ಹಾಗೂ ತನ್ವಿಷ್ ಪಡೆದುಕೊಂಡರು.



ಪುತ್ತೂರು ತಾಲ್ಲೂಕು‌ ಷಷ್ಟ್ಯಬ್ದ ಸಮಿತಿಯ ಅಧ್ಯಕ್ಷ ಸೀತಾರಾಮ ರೈ ಸವಣೂರುಯವರು ಮಾತನಾಡಿ ಪುಟಾಣಿಗಳಲ್ಲಿ‌ಇರುವ ಪ್ರತಿಭೆಯನ್ನು ಹೊರ ತರುವಲ್ಲಿ ಪೋಷಕರು ಮುಂದೆ ಬರಬೇಕು. ಇಂದಿನ ಮಕ್ಕಳೇ ಭವಿಷ್ಯದ ಸಂಪತ್ತು ಎಂಬ ನೆಲೆಯಲ್ಲಿ ನಾವು ಪ್ರೋತ್ಸಾಹ ನೀಡೋಣ, ಒಡಿಯೂರು ಶ್ರೀ ಗಳ ಷಷ್ಟ್ಯಬ್ದ ಸಮಿತಿಯ ವತಿಯಿಂದ ಇಂಥ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ ಎಂದು ಹೇಳಿದರು. ಪ್ರಧಾನ ಕಾರ್ಯದರ್ಶಿ ಹರಿಣಾಕ್ಷಿ ಜೆ ಶೆಟ್ಟಿ ಸಮಿತಿಯ, ಮಾರ್ಗದರ್ಶಕರಾದ ಅನಿತಾ ಹೇಮನಾಥ ಶೆಟ್ಟಿ ಹಾಗೂ ಭಾಸ್ಕರ್ ಬಾರ್ಯ, ಮಹಿಳಾ ಸಂಚಾಲಕರಾದ ನಯನ ರೈ, ಪ್ರೇಮಲತಾ ರಾವ್, ಸಮಿತಿ ಉಪಾಧ್ಯಕ್ಷರಾದ ವತ್ಸಲಾ ರಾಜ್ನಿ, ಸದಸ್ಯರಾದ ಪ್ರಪುಲ್ಲ ಜತ್ತಪ್ಪ ರೈ, ಮಕ್ಕಳು ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಅಂಗನವಾಡಿಯ ಶಿಕ್ಷಕಿ ಜೀವಲಾಕ್ಷಿ ಸ್ವಾಗತಿಸಿ ಸಹಾಯಕಿ ಗುಲಾಬಿ ಅವರು ವಂದಿಸಿದರು.

ವರದಿ – ಉಮಾಪ್ರಸಾದ್ ರೈ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.