HomePage_Banner
HomePage_Banner
HomePage_Banner
HomePage_Banner

ಕರ್ನಾಟಕ ಯಂಗ್ ಬ್ರಿಗೇಡ್ ಸೇವಾ ದಳದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ರಿಯಾಝ್ ಪರ್ಲಡ್ಕ ನೇಮಕ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
                                                              ರಿಯಾಝ್ ಪರ್ಲಡ್ಕ

ಪುತ್ತೂರು: ಕರ್ನಾಟಕ ಯಂಗ್ ಬ್ರಿಗೇಡ್ ಸೇವಾ ದಳದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ರಿಯಾಝ್ ಪರ್ಲಡ್ಕ ನೇಮಕಗೊಂಡಿದ್ದಾರೆ. ಅಖಿಲ ಭಾರತ ಕಾಂಗ್ರೆಸ್ ಸೇವಾದಳದ ಮುಖ್ಯ ಸಂಘಟಕ ಲಾಲ್ಜಿ ದೇಸಾಯಿರವರು ರಿಯಾಝ್‌ರವರನ್ನು ನೇಮಕ ಗೊಳಿಸಿ ಆದೇಶ ಮಾಡಿದ್ದಾರೆ. ಪುತ್ತೂರು ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈಯವರ ಕೋರಿಕೆಯಂತೆ ರಾಜ್ಯ ಯಂಗ್ ಬ್ರಿಗೇಡ್ ಸೇವಾದಳದ ಅಧ್ಯಕ್ಷ ಜುನೈದ್ ಪಿ.ಕೆ ರವರ ಶಿಫಾರಸಿನ ಮೇರೆಗೆ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್‌ರವರ ಸೂಚನೆಯಂತೆ ಈ ನೇಮಕಾತಿ ನಡೆದಿದೆ.

ಪುತ್ತೂರು ನಗರಸಭಾ ಸದಸ್ಯರಾಗಿರುವ ರಿಯಾಝ್ ಪರ್ಲಡ್ಕ ಅವರು ಪುತ್ತೂರು ಯಂಗ್ ಬ್ರಿಗೇಡ್‌ನ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದರು. ಯಂಗ್ ಬ್ರಿಗೇಡ್ ವತಿಯಿಂದ ಕೋರೋನಾ ರೋಗಿಗಳಿಗಾಗಿ ಉಚಿತ ಆಂಬುಲೆನ್ಸ್ ಸೇವೆ ಒದಗಿಸುವ ಕಾರ್ಯಕ್ರಮದ ಮುಖ್ಯ ರೂವಾರಿಯಾಗಿರುವ ರಿಯಾಝ್‌ರವರು ಹಲವಾರು ಸಮಾಜ ಮುಖಿ ಕಾಯ್ಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಮಾಜಿ ಪುರಸಭಾ ಸದಸ್ಯ ದಿ.ಅಬ್ದುಲ್ ಹಮೀದ್‌ರವರ ಪುತ್ರರಾಗಿರುವ ರಿಯಾಝ್‌ರವರು ಎಂ.ಟೆಕ್ ಪದವೀಧರರಾಗಿದ್ದು ಸಿವಿಲ್ ಕಾಂಟ್ರಾಕ್ಟ್ ವೃತ್ತಿ ಮಾಡುತ್ತಿದ್ದಾರೆ. ನಗರ ಸಭೆಯಿಂದ ತಿಂಗಳಿಗೆ ಸಿಗುವ ರೂ 4000 ಗೌರವ ಧನವನ್ನು ಬಡವರಿಗೆ ಹಂಚುವ ಮೂಲಕ ಸುದ್ದಿಯಾಗಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.