HomePage_Banner
HomePage_Banner
HomePage_Banner
HomePage_Banner

ಪುತ್ತೂರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಕಡತಗಳ ವಿಲೇವಾರಿಗೆ ಬೆಂಗಳೂರು ಸಚಿವರ ಸಭೆಯಲ್ಲಿ ಪ್ರಸ್ತಾಪ ಮಾಡಿದ ಶಾಸಕ ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರಿನಲ್ಲಿ ಗುಣಮಟ್ಟದ ವಿದ್ಯುತ್ ಪೂರೈಕೆಗಾಗಿ ಉಪಕೇಂದ್ರ ಸ್ಥಾಪನೆ, ಶಾಖೆ, ಪರಿವರ್ತಕಗಳ ದುರಸ್ತಿ ಘಟಕದ ಕಡತಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿದೆ. ಈ ಕಡತಗಳ ಶೀಘ್ರ ವಿಲೇವಾರಿ ಮಾಡುವಂತೆ ಶಾಸಕ ಸಂಜೀವ ಮಠಂದೂರು ಅವರು ಬೆಂಗಳೂರಿನಲ್ಲಿ ಸೆ.15 ರಂದು ನಡೆದ ಸಚಿವರ ಸಭೆಯಲ್ಲಿ ಪ್ರಸ್ತಾಪಿಸಿದರು. ಇಂಧನ ಖಾತೆ ಸಚಿವ ಸುನಿಲ್ ಕುಮಾರ್ ಕಡತಗಳ ಶೀಘ್ರ ವಿಲೇವಾರಿಗೆ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಒಳಮೊಗ್ರು ಗ್ರಾಮದ ಕೈಕಾರದಲ್ಲಿರುವ110 /33 /11  ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಲು ಬೃಹತ್ ಕಾಮಗಾರಿ ಕುರಿತು ಜಮೀನಿನ ಕಡತ ಮತ್ತು ಪುತ್ತೂರು ಶಾಖಾ ಕಚೇರಿಗೆ ಕಾಯ್ದಿರಿಸಲಾದ ಜಾಗದ ಮಂಜೂರಾತಿ ಕಡತ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಾಕಿ ಇದೆ. ಅದೇ ರೀತಿ ಉಪ್ಪಿನಂಗಡಿ ಉಪವಿಭಾಗ ಮತ್ತು ರಾಮಕುಂಜ ಮತ್ತು ಗೊಳಿತೊಟ್ಟು ಶಾಖೆ ಸ್ಥಾಪನೆಗೆ ಶೀಘ್ರ ಕ್ರಮ ಕೈಗೊಳ್ಳಬೇಕು. ಪುತ್ತೂರಿನಲ್ಲಿ ಪರಿವರ್ತಕಗಳ ದುರಸ್ತಿ ಘಟಕಕ್ಕೆ ಅನುಮೊದನೆ ನೀಡುವಂತೆ ಅವರು ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಈ ಕುರಿತು ಸಚಿವ ಸುನಿಲ್ ಕುಮಾರ್ ಅವರು ಕಡತಗಳ ವಿಲೇವಾರಿ ಕುರಿತು ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.