ಕೆದಂಬಾಡಿ ಬಿಜೆಪಿ ಬೂತ್ ಅಧ್ಯಕ್ಷ ಸೀತಾರಾಮ ಗೌಡರವರ ಮನೆಯಲ್ಲಿ ನಾಮಫಲಕ ಅನಾವರಣ, ಕಾರ್ಯಕರ್ತರ ಭೇಟಿ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಭಾರತೀಯ ಜನತಾಪಾರ್ಟಿ ಪುತ್ತೂರು ಗ್ರಾಮಂತರ ಮಂಡಲ ಇದರ ಆಶ್ರಯದಲ್ಲಿ ಕೆದಂಬಾಡಿ ಶಕ್ತಿಕೇಂದ್ರದ ೧೮೫ನೇ ಬೂತ್ ನ ಅಧ್ಯಕ್ಷರಾದ ಸೀತಾರಾಮ ಗೌಡ ಇದ್ಯಪ್ಪೆರವರ ಮನೆಯಲ್ಲಿ ಬೂತ್ ಅಧ್ಯಕ್ಷರ ನಾಮಫಲಕ ಅನಾವರಣ ಹಾಗೂ ಬಿಜೆಪಿ ಕಾರ್ಯಕರ್ತರ ಭೇಟಿ ಕಾರ್ಯಕ್ರಮ ಸೆ.೦೯ ರಂದು ನಡೆಯಿತು. ನಮ್ಮ ನೆಚ್ಚಿನ ಶಾಸಕರಾದ ಶ್ರೀ ಸಂಜೀವ ಮಠ೦ದೂರುರವರು ಹಾಗೂ ರವರು ಆಗಮಿಸಿ ಬೂತ್ ಅಧ್ಯಕ್ಷರ ಮನೆಯಲ್ಲಿ ನಾಮಫಲಕ ಅಳವಡಿಸುವ ಮತ್ತು ಕಾರ್ಯಕರ್ತರ ಬೇಟಿ ಕಾರ್ಯಕ್ರಮವು ನಡೆಯಿತು. ಶಾಸಕ ಸಂಜೀವ ಮಠಂದೂರುರವರು ಭಾರತ ಮಾತೆಯ ಭಾವಚಿತ್ರಕ್ಕೆ ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ನಾಮಫಲಕ ಅನಾವರಣ ಮಾಡಿ ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ , ಜಿಲ್ಲಾ ಒಬಿಸಿ ಮೋರ್ಚಾದ ಅಧ್ಯಕ್ಷ ಆರ್ ಸಿ ನಾರಾಯಣ , ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ ,ಮತ್ತು ಪುರುಷೋತ್ತಮ ಮುಂಗ್ಲಿಮನೆ, ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರತನ್ ರೈ ಕುಂಬ್ರ, ನೆ.ಮಾಡ್ನೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಹಾಗೂ ಮಂಡಲದ ಕಾರ್ಯದರ್ಶಿ ವಿಜಯ ಕುಮಾರ್ ರೈ ಕೊರಂಗ ,ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಯತೀಂದ್ರ ಕೊಚ್ಚಿ , ಕೆದಂಬಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾಸ್ಕರ್ ರೈ ಮಿತ್ರಂಪಾಡಿ , ಕೃಷ್ಣಕುಮಾರ್ ರೈ ಕೆದಂಬಾಡಿ ಗುತ್ತು, ಕೆದಂಬಾಡಿ ಶಕ್ತಿಕೇಂದ್ರದ ಪ್ರಮುಖ್ ನಾರಯಣ ಪೂಜಾರಿ ಕುರಿಕ್ಕಾರ, ಬೂತ್ ಪ್ರ.ಕಾರ್ಯದರ್ಶಿ ಚಂದ್ರ ಇದ್ಯಪ್ಪೆ, ಕೆದಂಬಾಡಿ ಪಂಚಾಯತ್ ಸದಸ್ಯರುಗಳಾದ ವಿಠಲ್ ರೈ ಮಿತ್ತೋಡಿ, ಕೃಷ್ಣ, ಸುಜಾತ ಮುಲಿಗದ್ದೆ, ರೇವತಿ ಬೋಳೋಡಿ ಕೆದಂಬಾಡಿ ಸಹಕಾರಿ ಸಂಘದ ನಿರ್ದೇಶಕ ಶಿವರಾಮ ಗೌಡ ಇದ್ಯಪ್ಪೆ, ಟಿ.ಎ.ಪಿ.ಎಂ.ಸಿ ನಿರ್ದೇಶಕ ಜಯರಾಮ ರೈ ಬಾಲಯ, ಪೊಡಿಯ ತ್ಯಾಗರಾಜ, ಬೂತ್ ನಾ ಮಾಜಿ ಅಧ್ಯಕ್ಷ ರಾದ ನೇಮಿರಾಜ ರೈ ಕುರಿಕ್ಕಾರ ಹಾಗು ದಾಮೋದರ ಗೌಡ ಇದ್ಯಪ್ಪೆ, ಯುವ ಮೋರ್ಚಾದ ಬೂತ್ ಅಧ್ಯಕ್ಷೆ ಅಶ್ವಿನಿ ಕುರಿಕ್ಕಾರ, ತಾರನಾಥ ಕುರಿಕ್ಕಾರ, ಉದಯಕುಮಾರ್ ಇದ್ಯಪ್ಪೆ, ಗಂಗಾಧರ ಗೌಡ ಹೇಮಳ ಇದ್ಯಪ್ಪೆ, ಅಶೋಕ ಬೆಂಗಳೂರು ಇದ್ಯಪ್ಪೆ, ನಿರ್ಮಲ ಇದ್ಯಪ್ಪೆ, ಚಿತ್ರಕಲೆ ಇದ್ಯಪ್ಪೆ ಪದ್ಮಾವತಿ ಇದ್ಯಪ್ಪೆ, ಪ್ರೀತಾ ಎನ್ ರೈ ಕುರಿಕ್ಕಾರ,ಸುಭಾಷ್ ರೈ ಕುರಿಕ್ಕಾರ, ವಿದೀಪ್ ಕುಮಾರ್,ಚಂದ್ರವತಿ ಇದ್ಯಪ್ಪೆ ,ನಾರಯಣ ಗೌಡ ಇದ್ಯಪ್ಪೆ, ಅರ್ಪಿತಾ ಇದ್ಯಪ್ಪೆ ,ಕವಿತಾ ಇದ್ಯಪ್ಪೆ ಸೇರಿದಂತೆ ಹಲವು ಮಂದಿ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು. ಶಿವರಾಮ ಗೌಡ ಇದ್ಯಪ್ಪೆ ಸ್ವಾಗತಿಸಿ ,ಅಶ್ವಿನಿ ರೈ ಕುರಿಕ್ಕಾರ ವಂದಿಸಿದರು.

ಬಿಜೆಪಿಯನ್ನು ಕಟ್ಟಿಬೆಳೆಸಿದ ಬೂತ್‌ನ ಹಿರಿಯ ಕಾರ್ಯಕರ್ತರಾದ ಚೆನ್ನಪ್ಪ ರೈ ಕುರಿಕ್ಕಾರ, ಬಾಲಕೃಷ್ಣ ರೈ ಕುಂಬ್ರರವರುಗಳನ್ನು ಈ ಸಂದರ್ಭದಲ್ಲಿ ಗುರುತಿಸಿ ಗೌರವಿಸಲಾಯಿತು. ಬೂತ್ ಅಧ್ಯಕ್ಷರಿಗೆ ನೆನಪಿನ ಕಾಣಿಕೆಯನ್ನು ಶಕ್ತಿಕೇಂದ್ರದ ವತಿಯಿಂದ ನೀಡಲಾಯಿತು. ಕೆದಂಬಾಡಿ ಶಕ್ತೀಕೇಂದ್ರ ಮತ್ತು ಗ್ರಾಮದ ಬಿಜೆಪಿ ಕಾರ್ಯಕರ್ತರ ಪರವಾಗಿ ಕೆದಂಬಾಡಿ ಗ್ರಾಮಕ್ಕೆ ಬಹಳಷ್ಟು ಅನುದಾನ ಒದಗಿಸಿದ ಶಾಸಕ ಸಂಜೀವ ಮಠಂದೂರುರವರನ್ನು ಶಕ್ತಿಕೇಂದ್ರದ ಸಂಚಾಲಕ ನಾರಾಯಣ ಪೂಜಾರಿ ಕುರಿಕ್ಕಾರ ಸನ್ಮಾನಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.