HomePage_Banner
HomePage_Banner
HomePage_Banner
HomePage_Banner

ಕ್ರಿಸ್ಟೋಫರ್ ಫಿಟ್ನೆಸ್ ಸೆಂಟರ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಮುತ್ತಿನನಗರಿಗೆ ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ಮತ್ತೊಂದು ಕೊಡುಗೆ
  • ಸದೃಢ ಆರೋಗ್ಯದ ವ್ಯಾಯಾಮಕ್ಕೆ ಪೂರಕ ವ್ಯವಸ್ಥೆ ಶ್ಲಾಘನೀಯ-ಡಾ.ಯತೀಶ್ ಉಳ್ಳಾಲ್

ಪುತ್ತೂರು: ದೈನಂದಿನ ಜೀವನದ ಒತ್ತಡದ ಜಂಜಾಟದಲ್ಲಿ ಮನುಷ್ಯನಿಗೆ ಸದೃಢ ಆರೋಗ್ಯ ಹೊಂದಲು ಹಲವಾರು ಆಯಾಮಗಳಲ್ಲಿ ವ್ಯಾಯಾಮ ಅಗತ್ಯವಾಗಿ ಬೇಕಾಗಿದೆ. ಈ ನಿಟ್ಟಿನಲ್ಲಿ ದೊಡ್ಡ ದೊಡ್ಡ ನಗರಗಳಳ್ಲಿ ವ್ಯಾಯಾಮಕ್ಕೆ ಪೂರಕವಾಗಿ ಕಾಣ ಸಿಗುವ ಅತ್ಯಾಧುನಿಕ ವ್ಯವಸ್ಥೆಯ ಆಗರವನ್ನು ಇಲ್ಲಿನ ಕ್ರಿಸ್ಟೋಫರ್ ಫಿಟ್ನೆಸ್ ಸೆಂಟರ್ ಹೊಂದಿರುವುದು ಶ್ಲಾಘನೀಯ ಎಂದು ಪುತ್ತೂರು ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್‌ರವರು ಹೇಳಿದರು.


ಪುತ್ತೂರಿನ ಫಿಟ್‌ನೆಸ್ ಇತಿಹಾಸದಲ್ಲಿ ಪುರುಷರ ಹಾಗೂ ಮಹಿಳೆಯರ ಪ್ರತ್ಯೇಕ ಓಪನ್ ಏರ್ ಬೃಹತ್ ಸುಸಜ್ಜಿತ ಜಿಮ್ ಎನ್ನುವ ಹೆಗ್ಗಳಿಕೆಯೊಂದಿಗೆ ಮುತ್ತಿನನಗರಿ ಪುತ್ತೂರಿನ ಎ.ಪಿ.ಎಂ.ಸಿ ರಸ್ತೆಯಲ್ಲಿನ ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ಮತ್ತೊಂದು ಕೊಡುಗೆಯಾಗಿ `ಕ್ರಿಸ್ಟೋಫರ್ ಫಿಟ್ನೆಸ್ ಸೆಂಟರ್’ ಸೆ.15  ರಂದು ಪುತ್ತೂರು ಸಿಟಿ ಆಸ್ಪತ್ರೆ ಬಳಿಯ ಕ್ರಿಸ್ಟೋಫರ್ ಕಾಂಪ್ಲೆಕ್ಸ್‌ನಲ್ಲಿ ಲೋಕಾರ್ಪಣೆಗೊಂಡಿದ್ದು, ಇದರ ಉದ್ಘಾಟನೆಯನ್ನು ರಿಬ್ಬನ್ ಕತ್ತರಿಸುವ ಮೂಲಕ ನೆರವೇರಿಸಿ ಅವರು ಮಾತನಾಡಿದರು. ಕೇವಲ ನಾಲ್ಕೈದು ಸಲಕರಣೆಗಳೊಂದಿಗೆ ಜಿಮ್ ಎಂದರೆ ಅದು ತಪ್ಪಾಗುತ್ತದೆ. ಜಿಮ್‌ಗೆ ಅದರದ್ದೇ ಆದ ವ್ಯಾಖ್ಯಾನವಿದೆ. ಜಿಮ್ ಎಂದರೆ ಸೈಯನ್ಸ್, ಟೆಕ್ನೋಲಜಿ, ಟೆಕ್ನಿಕ್ ಎಂಬ ವ್ಯಾಖ್ಯಾನಗಳು ಅಡಗಿಕೊಂಡಿದೆ. ಜಿಮ್‌ನಲ್ಲಿರುವ ಸಲಕರಣೆಗಳನ್ನು ಹೇಗೆ ಮತ್ತು ಯಾರು ಬಳಸಬಹುದು ಅಲ್ಲದೆ ಬಳಸಿದವರಿಗೆ ಯಾವ ರೀತಿಯ ಪ್ರಯೋಜನ ಸಿಗಬಲ್ಲುದು ಎಂಬುದು ಬಹಳ ಮುಖ್ಯವಾಗಿದೆ. ಇಲ್ಲಿನ ಫಿಟ್ನೆಸ್ ಸೆಂಟರ್ ಎಂಜಾಯ್ ಮಾಡುತ್ತಾ ಫಿಟ್ ಆಗುವ ಉತ್ತಮವಾದ ಅವಕಾಶಗಳನ್ನು ಸಂಸ್ಥೆಯು ಒದಗಿಸಿಕೊಟ್ಟಿದ್ದು ಯಶಸ್ವಿಯಾಗಲಿ ಎಂದರು.


ಅಧ್ಯಕ್ಷತೆ ವಹಿಸಿದ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋರವರು ಆಶೀರ್ವಚನ ನೀಡುತ್ತಾ ಮಾತನಾಡಿ, ಮನುಷ್ಯನಾದವನು ದೈಹಿಕವಾಗಿ, ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ಸದೃಢರಾಗಿ ಬೆಳೆದಾಗ ಆರೋಗ್ಯಯುತ ಜೀವನ ನಮ್ಮದಾಗುತ್ತದೆ. ಕೇವಲ ದೇಹದಾರ್ಡ್ಯ, ವ್ಯಾಯಾಮಕ್ಕೆ ಸೀಮಿತವಾಗದೆ ಆರೋಗ್ಯವಂತ ಪ್ರಜೆ ನಿರ್ಮಾಣ ಮಾಡಿ ಅವನ್ನು ಪೋಷಿಸಿದಾಗ ಸದೃಢ ಸಮಾಜದ ನಿರ್ಮಾಣವೂ ಆಗುತ್ತದೆ. ದೇಹವನ್ನು ಅತಿಯಾಗಿ ಪ್ರೀತಿಸದೆ, ಅತಿಯಾಗಿ ದ್ವೇಷಿಸದೆ ಆರೋಗ್ಯವಂತರಾಗಿ ಬೆಳೆಸುವ ಗುರುತರ ಜವಾಬ್ದಾರಿ ಎಲ್ಲರಲ್ಲಿರಲಿ ಎಂದು ಹೇಳಿ ಶುಭ ಹಾರೈಸಿದರು.


ಮುಖ್ಯ ಅತಿಥಿ, ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರು ಮಾತನಾಡಿ, ಮಳೆಗಾಲದಲ್ಲಿ ಮನುಷ್ಯನಿಗೆ ಹೊರಾಂಗಣದಲ್ಲಿ ಫಿಟ್ನೆಸ್ ಚಟುವಟಿಕೆಗಳನ್ನು ಮಾಡಲು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಜಿಮ್‌ನಂತಹ ಒಳಾಂಗಣ ಕ್ರೀಡಾಂಗಣ ಮನುಷ್ಯನ ಸದೃಢ ಆರೋಗ್ಯದ ಚಟುವಟಿಕೆಗಳಿಗೆ ಪೂರಕವಾಗಿ ಪರಿಣಮಿಸತಕ್ಕದ್ದು. ಮನುಷ್ಯನು ನೂರು ಪ್ರತಿಶತ ಫಿಟ್ನೆಸ್ ಹೊಂದಬೇಕಾದರೆ ಅವರು ತರಬೇತುದಾರರಲ್ಲಿ ಮಾಹಿತಿ ಪಡೆದುಕೊಂಡೇ ತರಬೇತು ಮಾಡಬೇಕಾಗುತ್ತದೆ. ಇಲ್ಲದಿದ್ದರೆ ದೇಹದ ಯಾವುದಾದರೊಂದು ಅಂಗಗಳಿಗೆ ಗಾಯಗಳಾಗುವುದು ಖಂಡಿತ. ಸದೃಢ ಆರೋಗ್ಯಕ್ಕೆ ನ್ಯೂಟ್ರಿಶಿಯನ್ ಫುಡ್ ಸೇವಿಸುವುದು ಕೂಡ ಅಗತ್ಯವಾಗಿದೆ. ಹಿತ-ಮಿತದಲ್ಲಿ ವ್ಯಾಯಾಮ ಮಾಡುವುದರಿಂದ ಮನುಷ್ಯನ ಹೃದಯ ಹಾಗೂ ಶ್ವಾಸಕೋಶ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಹಕಾರಿಯಾಗುತ್ತದೆ ಎಂದು ಹೇಳಿ ಶುಭ ಹಾರೈಸಿದರು.

ಟಸ್ಟರ್ ಪೂಲ್ಸ್ ಆಂಡ್ ಫಿಟ್ನೆಸ್‌ನ ಮಾಲಕ ನವೀನ್ ಕುಲಾಲ್‌ರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ದೇಹ ಮತ್ತು ಮನಸ್ಸು ಒಂದೇ ನಾಣ್ಯದ ಎರಡು ಮುಖಗಳಿದ್ದಾಗೆ. ದೇಹ ಮತ್ತು ಮನಸ್ಸು ಸಮತೋಲನದಲ್ಲಿ ಕಾಯ್ದುಕೊಂಡಾಗ ಮಾತ್ರ ಆರೋಗ್ಯ ಕೂಡ ಪೂರ್ಣವೆನಿಸುವುದು. ದೇಹ ಮತ್ತು ಮನಸ್ಸು ಎರಡನ್ನೂ ಸಮತೋಲನದಲ್ಲಿಡಬೇಕಾದರೆ ಅದಕ್ಕೆ ವ್ಯಾಯಾಮ ಅತ್ಯಗತ್ಯ. ಅಂತರ್ರಾಷ್ಟ್ರೀಯ ಮಟ್ಟದ ಅತ್ಯಾಧುನಿಕವಾದ ಸಲಕರಣೆಗಳನ್ನು ಜೋಡಣೆ ಹಾಗೂ ದೇಹಕ್ಕೆ ಆಕ್ಸಿಜನ್ ಒದಗಿಸುವ ನಿಟ್ಟಿನಲ್ಲಿ ಓಪನ್ ಏರ್‌ನಲ್ಲಿ ಗಾಳಿ-ಬೆಳಕಿನೊಂದಿಗೆ ಕ್ರಿಸ್ಟೋಫರ್ ಫಿಟ್ನೆಸ್ ಸೆಂಟರ್ ಹೊಂದಿರುವುದು ವಿಶೇಷವಾಗಿದೆ. ಕಡಿಮೆ ಫೀಸ್‌ನೊಂದಿಗೆ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಸೂಕ್ತವಾದ ವ್ಯಾಯಾಮವನ್ನು ಒದಗಿಸಲು ಈ ಸೆಂಟರ್ ಸಿದ್ಧವಾಗಿ ನಿಂತಿದೆ ಎಂದು ಹೇಳಿ ಶುಭ ಹಾರೈಸಿದರು.


ಮಿಸ್ಟರ್ ಕರ್ನಾಟಕ `ಉದಯ’ ರವಿ ಕುಲಾಲ್, ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ಎಂ.ಡಿ ವಲೇರಿಯನ್ ಡಾಯಸ್, ವಲೇರಿಯನ್ ಡಾಯಸ್‌ರವರ ಪುತ್ರ ಮನೋಜ್ ಡಾಯಸ್, ಜಿಮ್ ತರಬೇತುದಾರ ನವನೀತ್ ಬಜಾಜ್ ಉಪಸ್ಥಿತರಿದ್ದರು. ಮತ್ತೋರ್ವ ಜಿಮ್ ತರಬೇತುದಾರ ಆದರ್ಶ್ ವಂದಿಸಿ, ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.