HomePage_Banner
HomePage_Banner
HomePage_Banner
HomePage_Banner

ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯಂತ ಮುಖ್ಯವಾದದ್ದು : ವೇ.ಮೂ.ಶ್ರೀಕೃಷ್ಣ ಉಪಾಧ್ಯಾಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

                ನೆಲ್ಲಿಕಟ್ಟೆ ಅಂಬಿಕಾ ಪ.ಪೂ.ವಿದ್ಯಾಲಯದಲ್ಲಿ ಪ್ರಥಮ ಪಿಯು ಪ್ರಾರಂಭೋತ್ಸವ

ಪುತ್ತೂರು: ಪ್ರಥಮ ಪಿಯು ತರಗತಿಗಳು ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಬುಧವಾರ ಪುರೋಹಿತ ವೇ.ಮೂ.ಶ್ರೀಕೃಷ್ಣ ಉಪಾಧ್ಯಾಯ ಅವರ ನೇತೃತ್ವದಲ್ಲಿ ಗಣಹೋಮ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಏಕಾಗ್ರತೆ ಅತ್ಯಂತ ಮುಖ್ಯವಾದದ್ದು. ಅದಿಲ್ಲದೆ ಯಾವ ಕೆಲಸ ಮಾಡಿದರೂ ಪ್ರತಿಫಲ ದೊರಕುವುದಕ್ಕೆ ಕಷ್ಟಸಾಧ್ಯ ಎಂದು ಹೇಳಿದರು.


ಭಗವಂತನ ಆರಾಧನೆಯ ಸಂದರ್ಭದಲ್ಲಿ ನಾವು ಯಾವ ದೇವರನ್ನು ಉದ್ದೇಶಿಸಿ ಪೂಜಾಕೈಂಕರ್ಯ ಮಾಡುತ್ತೇವೆಯೋ ಆ ದೇವರನ್ನು ಪೂಜೆಯ ಆರಂಭದಿಂದ ಕೊನೆಯವರೆಗೂ ಮನಸ್ಸಿನಲ್ಲಿ ನೆನೆಯುತ್ತಾ ಕಾರ್ಯನಿರತರಾಗಬೇಕು. ಮನಸ್ಸಿನಲ್ಲಿ ಹಲವಾರು ವಿಚಾರಗಳನ್ನು ಯೋಚಿಸುತ್ತಾ ಕೇವಲ ಭೌತಿಕವಾಗಿಯಷ್ಟೇ ಉಪಸ್ಥಿತರಿದ್ದರೆ ಉದ್ದೇಶಪ್ರಾಪ್ತಿಯಾಗುವುದಿಲ್ಲ. ಇದು ಕೇವಲ ಭಗವಂತನ ಆರಾಧನೆಗೆ ಮಾತ್ರ ಸೀಮಿತವಲ್ಲ. ಬದಲಾಗಿ ಮಾಡುವ ಯಾವುದೇ ಕಾರ್ಯದಲ್ಲಿ ಈ ಬಗೆಗಿನ ಏಕಾಗ್ರತೆಯ ಅಗತ್ಯವಿದೆ ಎಮದು ನುಡಿದರು.

ಸಾಮಾನ್ಯಾಗಿ ಪ್ರಾತಃಕಾಲದ ಅಧ್ಯಯನ ಮನಸ್ಸಿನಲ್ಲಿ ಹೆಚ್ಚು ಸ್ಥಿರವಾಗಿ ಉಳಿಯುತ್ತದೆ. ಆದರೆ ಬೆಳಗ್ಗಿನ ಮನ:ಸ್ಥಿತಿಯನ್ನು ರಾತ್ರಿಯವರೆಗೂ ಕಾಯ್ದುಕೊಂಡು ಓದನ್ನು ಮುಂದುವರೆಸಿದರೆ ಅತ್ಯುತ್ತಮ ಫಲಿತಾಂಶ ನಮ್ಮದಾಗುವುದಕ್ಕೆ ಸಾಧ್ಯ. ಅದರಲ್ಲೂ ಭಗವಂತನ ಆರಾಧನೆಯ ಜತೆಗೆ ಓದಿನ ಕಾಯಕವನ್ನು ರೂಢಿಸಿಕೊಳ್ಳುವುದರಿಂದ ಹೆಚ್ಚು ಪರಿಣಾಮ ಕಾಣಬಹುದು. ಪೂಜೆ, ಆರಾಧನೆಯಲ್ಲಿ ತೊಡಗುವವರಿಗೆ ಹೆಚ್ಚಿನ ಏಕಾಗ್ರತೆಯನ್ನು ಸಾಧಿಸಲು ಸುಲಭವೆನಿಸುತ್ತದೆ. ಆ ನೆಲೆಯಿಂದ ವಿದ್ಯಾರ್ಥಿಗಳು ಕಾರ್ಯತತ್ಪರರಾಗಬೇಕು ಎಂದು ಕರೆನೀಡಿದರ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಗಣಪತಿ ಹೋಮವನ್ನು ನೆರವೇರಿಸಿದರು. ಈಶ್ವರ ಪ್ರಕಾಶ ಭಟ್ಟ ಸಹಕರಿಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕುಮಾರ್ ಕಮ್ಮಜೆ, ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಎಂ, ಬೋಧಕ ಹಾಗೂ ಬೋಧಕೇತರ ವೃಂದ, ಸೀಮಿತ ಸಂಖ್ಯೆಯ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.