ಮೊದಲ ಬ್ಯಾಚ್‌ನಲ್ಲೇ ಸಿಎ ಫೌಂಡೇಶನ್ ಪರೀಕ್ಷೆ ತೇರ್ಗಡೆಯಾದ ಇಬ್ಬರು ವಿದ್ಯಾರ್ಥಿಗಳು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

               ಇತಿಹಾಸ ಬರೆದ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಾಣಿಜ್ಯ ವಿದ್ಯಾರ್ಥಿಗಳು

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಾಣಿಜ್ಯ ವಿಭಾಗದ ಪ್ರಥಮ ಬ್ಯಾಚ್‌ನ ಇಬ್ಬರು ವಿದ್ಯಾರ್ಥಿಗಳು ಸಿಎ ಫೌಂಡೇಶನ್ ಪರೀಕ್ಷೆ ಸಿಪಿಟಿ ಅನ್ನು ತೇರ್ಗಡೆಯಾಗುವುದರ ಮೂಲಕ ಸಾಧನೆ ಮೆರೆದಿದ್ದಾರೆ. ಸವಣೂರಿನ ಕಾಯರ್ಗ ನಿವಾಸಿಗಳಾದ ಹರಿಶ್ಚಂದ್ರ ಕಾಯರ್ಗ ಹಾಗೂ ಧರ್ಮಾವತಿ ಕಾಯರ್ಗ ದಂಪತಿ ಪುತ್ರಿ ಜಸ್ಮಿತಾ ಕಾಯರ್ಗ ಹಾಗೂ ಕಣಿಯೂರಿನ ಶೇಷಪ್ಪ ಗೌಡ ಹಾಗೂ ಲತಾ ದಂಪತಿ ಪುತ್ರ ಮನೀಶ್ ಬಿ.ಎಸ್ ಈ ಸಾಧನೆ ಮಾಡಿರುವ ವಿದ್ಯಾರ್ಥಿಗಳು. ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ವಿಜ್ಞಾನದೊಂದಿಗೆ ವಾಣಿಜ್ಯ ವಿಭಾಗವನ್ನೂ ಕಳೆದ ಮೂರು ವರ್ಷಗಳಿಂದ ಆರಂಭಿಸಿದ್ದು ಸಿಎ ಆಕಾಂಕ್ಷಿಗಳಿಗೆ ವಿಶೇಷ ತರಬೇತಿ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗುತ್ತಿದೆ. ಅನೇಕ ಮಂದಿ ಸಿ.ಎ ಅಪೇಕ್ಷಿತ ವಿದ್ಯಾರ್ಥಿಗಳು ಇಂದು ಅಂಬಿಕಾ ಪದವಿಪೂರ್ವ ವಿದ್ಯಾಲಯವನ್ನು ಅರಸಿ ಬರುತ್ತಿರುವುದು ಇಲ್ಲಿ ದೊರಕುತ್ತಿರುವ ಅತ್ಯುತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹಿಡಿದ ಕೈಗನ್ನಡಿಯೆನಿಸಿದೆ. ವಿದ್ಯಾರ್ಥಿಗಳಿಗೆ ವಾಣಿಜ್ಯ ವಿಷಯದ ಜತೆಗೆ ಸಿಎ ಪರೀಕ್ಷೆಗೆ ಬೇಕಾದ ಸಕಲ ತರಬೇತಿ ಕಾರ್ಯವನ್ನೂ ಈ ಸಂಸ್ಥೆ ನಡೆಸಿಕೊಂಡು ಬರುತ್ತಿದೆ.

ಪಿಯು ನಂತರ ಪದವಿ ಹಂತದಲ್ಲೂ ಸಿಎ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡುವ ಹಿನ್ನೆಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ಇಂಟಗ್ರೇಟೆಡ್ ಬಿ.ಕಾಂ ಅನ್ನು ಕೂಡ ಆರಂಭಿಸಲಾಗುತ್ತಿದೆ. ಇದರಿಂದಾಗಿ ಪಿಯು ಹಂತದಲ್ಲಿ ಸಿ.ಎ ತರಬೇತಿ ಪಡೆಯುವ ವಿದ್ಯಾಥಿಗಳು ನಂತರ ಪದವಿ ಹಂತದಲ್ಲೂ ತಮ್ಮ ತರಬೇತಿಯನ್ನು ಮುಂದುವರೆಸಿಕೊಂಡು ಹೋಗುವುದಕ್ಕೆ ಸಾಧ್ಯವಾಗಲಿದೆ. ಈ ನಡುವೆ ಪಿಯು ಹಂತದಲ್ಲಿ ಸಿ.ಎ ತರಬೇತಿ ಪಡೆಯದೆ ಪದವಿ ಹಂತದಲ್ಲಿ ಸಿ.ಎ ಪರೀಕ್ಷೆಯ ಕುರಿತಾಗಿ ಆಸಕ್ತಿ ವಹಿಸುವವರಿಗೂ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ ಎಂಬುದು ಗಮನಾರ್ಹ.

ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯ ಅತ್ಯುತ್ತಮ ಶಿಕ್ಷಣಕ್ಕೆ ಹೆಸರಾಗಿದ್ದು, ಪ್ರಸ್ತುತ ವರ್ಷ ಮಾತ್ರವಲ್ಲದೆ ಹಿಂದಿನ ಶೈಕ್ಷಣಿಕ ವರ್ಷದಲ್ಲಿಯೂ ನೂರು ಶೇಕಡಾ ಫಲಿತಾಂಶ ದಾಖಲಿಸಿ ತನ್ನ ಗುಣಮಟ್ಟವನ್ನು ನಿರೂಪಿಸಿದೆ. ಇದೀಗ ಸಿಪಿಟಿ ಪರೀಕ್ಷೆಯಲ್ಲೂ ವಿದ್ಯಾರ್ಥಿಗಳು ಸಾಧನೆ ಮಾಡುವುದರ ಮುಖೇನ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಶೈಕ್ಷಣಿಕ ನೆಲೆಯಿಂದ ಹೊಸ ಇತಿಹಾಸ ದಾಖಲಾಗಿದೆ. ವಿದ್ಯಾರ್ಥಿಗಳ ಸಾಧನೆಗೆ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಎಂ ಖುಷಿ ವ್ಯಕ್ತಪಡಿಸಿದ್ದಾರೆ.

‘ನಮ್ಮಲ್ಲಿ ಸೇರ್ಪಡೆಯಾಗುವ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಪೂರಕವಾಗುವ ಎಲ್ಲಾ ವ್ಯವಸ್ಥೆಗಳನ್ನು ನಾವು ಕಲ್ಪಿಸಿಕೊಡುತ್ತೇವೆ. ವಿದ್ಯಾರ್ಥಿಗಳು ಯಾವ ಸಿಎ ಕನಸನ್ನು ಹೊತ್ತು ಬರುತ್ತಾರೋ ಅಂತಹ ಕನಸು ನನಸಾಗುವಂತಾಗಬೇಕು. ಮೊದಲ ಬ್ಯಾಚ್‌ನಲ್ಲೇ ಇಂತಹದ್ದೊಂದು ಸಾಧನೆ ಸಾಧ್ಯ ಆಗಿರುವುದಕ್ಕೆ ನಮಗೆಲ್ಲ ಅತೀವವಾದ ಹೆಮ್ಮೆಯಿದೆ. ವಿದ್ಯಾರ್ಥಿಗಳಲ್ಲಿ ಅಪಾರವಾದ ಶಕ್ತಿಯಿದೆ. ಆ ಶಕ್ತಿಯನ್ನು ಗುರುತಿಸುವ ಕಾರ್ಯ ಅಂಬಿಕಾದಲ್ಲಿ ನಡೆಯುತ್ತಿದೆ’
– ಸುಬ್ರಹ್ಮಣ್ಯ ನಟ್ಟೋಜ, ಕಾರ್ಯದರ್ಶಿಗಳು,
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು

‘ನಮ್ಮಲ್ಲಿ ಪಿಯು ಹಂತದಿಂದ ತೊಡಗಿ ಪದವಿ ಹಂತದ ವರೆಗೆ ಸಿಎ ತರಬೇತಿ ಲಭ್ಯವಿದೆ. ವಾಣಿಜ್ಯ ವಿಷಯದ ಅಧ್ಯಯನದ ಜತೆಗೆ ಸಿಎ ಅಧ್ಯಯನ ಬಯಸುವ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಯನ್ನು ಒದಗಿಸಿಕೊಡುತ್ತಿದ್ದೇವೆ. ಅತ್ಯುತ್ತಮ ಉಪನ್ಯಾಸಕರು ಹಾಗೂ ವಿಷಯ ತಜ್ಞರು ನಮ್ಮ ಅಂಬಿಕಾ ಸಂಸ್ಥೆಯಲ್ಲಿದ್ದಾರೆ. ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳ ಈ ಸಾಧನೆ ಅಂಬಿಕಾದ ಗುಣಮಟ್ಟವನ್ನು ತೋರಿಸುತ್ತದೆ’
– ರಾಜಶ್ರೀ ಎಸ್ ನಟ್ಟೋಜ, ಕೋಶಾಧಿಕಾರಿಗಳು,
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.