HomePage_Banner
HomePage_Banner
HomePage_Banner
HomePage_Banner

ಬೆಟ್ಟಂಪಾಡಿ; ರೈತರ ಆಸಕ್ತ ಗುಂಪು ರಚನೆ, ಕೌಶಾಲ್ಯಾಭಿವೃದ್ದಿ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ; ದ.ಕ.ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಪುತ್ತೂರು ಇದರ ಆಶ್ರಯದಲ್ಲಿ 2021-22 ನೇ ಸಾಲಿನಲ್ಲಿ ಆತ್ಮ ಯಜನೆಯಡಿ ರೈತರ ಆಸಕ್ತ ಗುಂಪು ರಚನೆ ಮತ್ತು ಕೌಶಾಲ್ಯಾಭಿವೃದ್ದಿ ಕಾರ್ಯಕ್ರಮ ಬೆಟ್ಟಂಪಾಡಿ ಗ್ರಾಮದ ಕುವೆಂಜ ಅನಿತಾರವರ ಮನೆಯಲ್ಲಿ ಸೆ.15 ರಂದು ನಡೆಯಿತು.

ರೈತ ಸಂಪರ್ಕ ಕೇಂದ್ರ ಪುತ್ತೂರು ಇದರ ಸಹಾಯಕ ಕೃಷಿ ಅಧಿಕಾರಿ ಶುಭಕರ.ಬಿ ಮಾಹಿತಿ ನೀಡಿ ಕೃಷಿ ಇಲಾಖೆಯ ಆತ್ಮ  ಯೋಜನೆಯಡಿ ರೈತರ ಆಸಕ್ತ ಗುಂಪು ರಚನೆ ಮಾಡಿ ರೈತ ಸದಸ್ಯರು ಆ ಗುಂಪಿನಲ್ಲಿ ಆರ್ಥಿಕ ವ್ಯವಹಾರ ಮಾಡಿ ತಮ್ಮ ಕೃಷಿಯಲ್ಲಿ ತೊಡಗಿಸಿಕೊಂಡು ಸರಕಾರದ ಸವಲತ್ತುಗಳನ್ನು ಪಡೆದು ಕೊಳ್ಳಬಹುದು ಎಂದು ಹೇಳಿದರು. ಸಾಲ ಪಡೆದು ಸ್ವ ಉದ್ಯೋಗ ಮಾಡಿ ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ಹೇಳಿದರು.ಅಲ್ಲದೆ ರೈತ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಲು ಸರಕಾರ ಆರಂಭಿಸಿದ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ನೀಡಿದರು. ಕೃಷಿ ಇಲಾಖೆಯ ಆತ್ಮ\ ಯೋಜನೆಯ ತಾಲೂಕು (ಬಿಟಿಎಂ) ವ್ಯವಸ್ಥಾಪಕಿ ಲಿಕ್ಷಿತಾ ಗುಂಪುಗಳ ವ್ಯವಹಾರದ ಬಗ್ಗೆ ತಿಳಿಸಿದರು.ಈಗಾಗಲೇ ಸಮೃದ್ದಿ ಹೆಸರಿನ ಗುಂಪು ಕಾರ್ಯನಿರ್ವಹಿಸುತ್ತಿದ್ದು ಇಂದು ಮತ್ತೆ ಜನನಿ ಮತ್ತು ಅಕ್ಷಯ ಹೆಸರಿನ ಎರಡು ಗುಂಪು ರಚನೆ ಮಾಡಲಾಯಿತು. ಗುಂಪುಗಳಿಗೆ ದಾಖಲಾತಿ ಪುಸ್ತಕ ಮತ್ತು ಅಗತ್ಯ ಪರಿಕರಗಳ ಕಿಟ್ ನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.   ಸಮೃದ್ದಿ ಗುಂಪಿನ ಅಧ್ಯಕ್ಷ ಅಚ್ಯುತ ಭಟ್ ಕಕ್ಕೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅನಿತಾ ಕುವೆಂಜ ಸ್ವಾಗತಿಸಿ ವಂದಿಸಿದರು. ರೈತ ಗುಂಪುಗಳ ಸದಸ್ಯರು ಪಾಲ್ಗೊಂಡರು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.