HomePage_Banner
HomePage_Banner
HomePage_Banner
HomePage_Banner

ರಿಪೇರಿಗೆ ನೀಡಿದ ಆಭರಣ ನೀಡದೆ ಸತಾಯಿಸುವಿಕೆ ಚಿನ್ನಾಭರಣ ಅಂಗಡಿಯ ಮಾಲಕನ ವಿರುದ್ಧ ದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ರಿಪೇರಿಗೆ ನೀಡಿರುವ ಆಭರಣವನ್ನು ವಾಪಸ್ ಕೊಡದೇ ಸತಾಯಿಸುತ್ತಿದ್ದಾರೆ ಎಂದು ಮಹಿಳೆಯೋರ್ವರು ಇಲ್ಲಿನ ಸ್ವರ್ಣ ಜ್ಯುವೆಲ್ಲರ್‍ಸ್ ಸಂಸ್ಥೆಯ ವಿರುದ್ಧ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಬಾರ್ಯ ಗ್ರಾಮದ ನಿವಾಸಿ ರಶೀದಾ ಎಂಬವರು ಈ ಬಗ್ಗೆ ದೂರು ನೀಡಿದ್ದು, ನನ್ನ ತವರು ಮನೆಯವರು ನನ್ನ ಮದುವೆಯ ಸಂದರ್ಭ ಉಪ್ಪಿನಂಗಡಿಯ ಸ್ವರ್ಣ ಜ್ಯುವೆಲ್ಲರ್‌ನಿಂದ ಆಭರಣವನ್ನು ಖರೀದಿಸಿದ್ದರು. ಆ ಸಂದರ್ಭ ಅವರು ಅದಕ್ಕೆ ಹಣವನ್ನು ಪಾವತಿ ಮಾಡಿರುತ್ತಾರೆ. ನನಗೂ ಆಭರಣ ಅಂಗಡಿಯವರಿಗೂ ಇಲ್ಲಿಯವರೆಗೆ ಯಾವುದೇ ವ್ಯವಹಾರಗಳಿರುವುದಿಲ್ಲ. ಸೆ.೮ರಂದು ನಾನು ಕಾರ್ಯಕ್ರಮದ ನಿಮಿತ್ತ ನನ್ನ ತವರು ಮನೆಗೆ ಆಗಮಿಸಿದ್ದು, ಆ ಸಂದರ್ಭ ಮಗು ಆಕಸ್ಮಿಕವಾಗಿ ನನ್ನ ಬಳೆಯನ್ನು ತುಂಡರಿಸಿತ್ತು. ಅದನ್ನು ರಿಪೇರಿ ಮಾಡಲೆಂದು ನಾನು ಸ್ವರ್ಣ ಜ್ಯುವೆಲ್ಲರಿಗೆ ನೀಡಿದ್ದೆ. ಆ ಆಭರಣಗಳನ್ನು ಹಿಂಪಡೆಯಲು ನಾನು ಸೆ.13 ರಂದು ಅಂಗಡಿಗೆ ತೆರಳಿದ್ದು, ಬೆಳಗ್ಗೆಯಿಂದ ಸಂಜೆಯವರೆಗೆ ಆಭರಣ ನೀಡುತ್ತೇನೆ ಎಂದು ತಿಳಿಸಿದ ಅಂಗಡಿಯವರು ಸಂಜೆ ೭ರ ಸುಮಾರಿಗೆ ನಿಮ್ಮ ಆಭರಣಗಳನ್ನು ಕೊಡಲು ಆಗುವುದಿಲ್ಲ. ನಿನ್ನ ಅಣ್ಣ ನನಗೆ ಹಣ ನೀಡಬೇಕು. ಅದಕ್ಕಾಗಿ ಈ ಆಭರಣವನ್ನು ಕೊಡುವುದಿಲ್ಲ ಎಂದು ನನಗೆ ಗದರಿಸಿದ್ದಾರೆ. ಅಂದು ಮನೆಗೆ ಮರಳಿದ ನಾನು ಮರುದಿನ ವಯಸ್ಸಾದ ನನ್ನ ತಾಯಿಯೊಡನೆ ಕರೆದುಕೊಂಡು ಈ ಅಂಗಡಿಗೆ ಹೋಗಿದ್ದು, ಅಂದು ಕೂಡಾ ಅವರು ಆಭರಣ ಕೊಡಲು ನಿರಾಕರಿಸಿದ್ದಾರೆ. ಅಣ್ಣನ ವ್ಯವಹಾರದ ಬಗ್ಗೆ ನನಗೇನು ತಿಳಿದಿಲ್ಲ. ಅದಕ್ಕೂ ನನಗೂ ಸಂಬಂಧವೂ ಇಲ್ಲ. ಅದರ ಬಗ್ಗೆ ಅಂಗಡಿಯವರು ಅಣ್ಣನಲ್ಲೇ ವ್ಯವಹರಿಸಲಿ. ಅದು ಬಿಟ್ಟು ನನ್ನ ಚಿನ್ನಾಭರಣವನ್ನು ಹಿಡಿದಿಟ್ಟುಕೊಂಡಿದ್ದರಿಂದ ನೆಮ್ಮದಿಯಿಂದಿದ್ದ ನನಗೆ ಗಂಡನ ಮನೆಗೆ ಹೋಗಲೂ ಸಮಸ್ಯೆಯಾಗಿದೆ. ಆದ್ದರಿಂದ ರಿಪೇರಿಗೆ ನಾನು ನೀಡಿದ ಚಿನ್ನಾಭರಣವನ್ನು ವಾಪಸ್ ನೀಡಲು ನಿರಾಕರಿಸುತ್ತಿರುವ ಆಭರಣ ಅಂಗಡಿಯ ಮಾಲಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.