HomePage_Banner
HomePage_Banner
HomePage_Banner
HomePage_Banner

ಅಂಬಿಕಾ ಸಿಬಿಎಸ್‌ಸಿ ವಿದ್ಯಾಲಯದಲ್ಲಿ ಹಿಂದಿ ದಿವಸ್ ಆಚರಣೆ ಭಾಷೆ ಭಾವನೆಗಳನ್ನು ವ್ಯಕ್ತಪಡಿಸುತ್ತದೆ : ಸರ್ವಮಂಗಳ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ನಗರದ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದಲ್ಲಿ ಸೆ.14  ರಂದು ಹಿಂದಿ ದಿವಸ್ ಆಚರಣೆ ಕಾರ್ಯಕ್ರಮ ನಡೆಯಿತುಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಹಿಂದಿ ಉಪನ್ಯಾಸಕಿ ಸರ್ವಮಂಗಳ ಮಾತನಾಡಿ ಹಿಂದಿ ಭಾಷೆಯು ಅತ್ಯಂತ ಪುರಾತನವಾದ ಭಾಷೆಯಾಗಿದೆ, ಭಾಷೆಯ ಕಲಿಕೆಯಲ್ಲಿ ಅದರ ವ್ಯಾಕರಣ ಹಾಗೂ ಶಬ್ದಗಳ ಸರಿಯಾದ ಬಳಕೆಯಿಂದ ಭಾಷೆಯ ಶುದ್ಧತೆ ಸಾಧ್ಯ. ಭಾಷೆಯನ್ನು ಕಲಿಯುವುದರಿಂದ ಭಾವನೆಗಳನ್ನು ತಿಳಿಯುವು ದಕ್ಕೆ ಅನುಕೂಲವಾಗುತ್ತದೆ. ಭಾಷೆ ಭಾವನೆಗಳನ್ನು ಅಭಿವ್ಯಕ್ತಗೊಳಿಸುತ್ತದೆ ಎನ್ನುತ್ತಾ ಭಾಷೆಯ ಮಹತ್ವವನ್ನು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಹಿಂದಿ ಭಾಷೆಯು ಹಿಂದೂ ಸ್ಥಾನದ ಭಾಷೆ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಭಾರತದ ರಾಷ್ಟ್ರ ಭಾಷೆಯಾಗಿ ಬರಬೇಕು. ರಾಷ್ಟ್ರ ಭಾಷೆಯು ಎಲ್ಲರಿಗೂ ಬರುವಂತಾಗಬೇಕು. ಭಾಷೆಯ ಉಳಿವು ನಮ್ಮ ಕೈಯ್ಯಲ್ಲಿದೆ ನಮ್ಮ ದೇಶ ನಮ್ಮ ಭಾಷೆ ಎಂಬ ಆತ್ಮಾಭಿಮಾನ ನಮ್ಮಲ್ಲಿ ಬೆಳೆದಾಗ ದೇಶ ಸುಭಿಕ್ಷವಾಗುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು. ವಿದ್ಯಾಲಯದ ಹಿಂದಿ ಶಿಕ್ಷಕಿ ಕುಸುಮ ಹಿಂದಿ ದಿವಸದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ನಟ್ಟೋಜ ಫೌಂಡೇಶನ್ ಟ್ರಸ್ಟಿನ ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಭಟ್, ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ವಿದ್ಯಾಲಯದ ವಿದ್ಯಾರ್ಥಿಗಳು, ಶಿಕ್ಷಕ, ಶಿಕ್ಷಕಿಯರು ಹಾಗೂ ವಿದ್ಯಾರ್ಥಿ ಪೋಷಕರು ಪಾಲ್ಗೊಂಡಿದ್ದರು. ಶ್ರೇಷ್ಠ ಹಾಗೂ ಆತ್ಮಶ್ರೀ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಅಶ್ವಿನಿ ಸ್ವಾಗತಿಸಿ, ಶಿಕ್ಷಕಿ ಸುನೀತಾ ಜೆ. ರೈ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ : ಸಮಾರಂಭದ ಬಳಿಕ ವಿದ್ಯಾರ್ಥಿಗಳಾದ ಮನಿಷಾ ಕಜೆ, ಮಂದಿರಾ ಕಜೆ, ಧ್ರುವ ಇವರು ಹಿಂದಿ ದಿವಸದ ಮಹತ್ವವನ್ನು ತಿಳಿಸಿದರು. ವಿದ್ಯಾರ್ಥಿನಿ ಯಶ್ವಿ ಭುಟ್ ಇವಳಿಂದ ದೇಶಭಕ್ತಿ ಗಾಯನಕ್ಕೆ ನೃತ್ಯ ಪ್ರದರ್ಶನ, ವೈಷ್ಣವಿ ಎಂ ಆರ್, ಸನ್ಮಯ್ ಹಾಗೂ ಆದಿಶ್ರೀ ದೇಶಭಕ್ತಿ ಗೀತೆಯನ್ನು ಹಾಡಿದರು.  ಪಂಚಮಿ ಪ್ರಾರ್ಥನೆಯನ್ನು ಹಾಡಿ ಆತ್ಮಶ್ರೀ ಹಾಗೂ ಶ್ರೇಷ್ಠ ಆಳ್ವ ಕಾರ್ಯಕ್ರಮ ನಿರ್ವಹಿಸಿದರು.  ಆತ್ಮಶ್ರೀ ಹಾಗೂ ಪ್ರಾಪ್ತಿ , ಶ್ರೇಷ್ಟ ಆಳ್ವ ಸಮೂಹ ಗಾನ, ವಿದ್ಯಾರ್ಥಿಗಳಾದ ಶಿವಪ್ರಸಾದ್, ಚಿಂತನ್, ಸ್ವಸ್ತಿಕ್, ಅನೀಶ್ ಹಾಗೂ ತಿಲಕರಾಜ್ ರವರ ಹಿಂದಿ ಪ್ರಹಸನ ನಡೆಯಿತು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.