ಕನ್ಯಾನ ಗ್ರಾಮ ಪಂಚಾಯತ್ ನಲ್ಲಿ ‘ಬೃಹತ್ ಕೋವಿಡ್ ಲಸಿಕಾ ಮೇಳ’ ಯಶಸ್ವಿಗಾಗಿ ಪೂರ್ವಭಾವಿ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವಿಟ್ಲ: ಕನ್ಯಾನ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಗ್ರಾ.ಪಂ. ಅಧ್ಯಕ್ಷರಾದ ಕೆ.ಪಿ.ಅಬ್ದುಲ್ ರಹಿಮಾನ್ ರವರ ಅಧ್ಯಕ್ಷತೆಯಲ್ಲಿ  ಸೆ.17 ರಂದು ನಡೆಯಲಿರುವ ‘ಬೃಹತ್ ಕೋವಿಡ್ ಲಸಿಕಾ ಮೇಳ’ ದ ಯಶಸ್ಸಿಗಾಗಿ  ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಕನ್ಯಾನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಫಿಯೋಲಿನಾ ಡಿ ಸೋಜಾ ರವರು ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಸದಸ್ಯರಾದ ಕೆ ಪಿ ರಘರಾಮಶೆಟ್ಟಿ, ಮೊಯಿದು ಕುಂಞ ಮಂಡ್ಯೂರು,  ಗ್ರಾಮ ಪಂಚಾಯತ್ ಕಾರ್ಯದರ್ಶಿ ಅಬ್ದುಲ್‌ ಕರೀಂ, ಗ್ರಾಮ ಕರಣಿಕರಾದ ಪ್ರಶಾಂತ್ ಟಿ ಎಸ್., ಆಶಾ ಕಾರ್ಯಕರ್ತರು,ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.   ತಂಡಗಳನ್ನು ರಚಿಸಿಕೊಂಡು ಎರಡು ದಿನಗಳಲ್ಲಿ ಲಸಿಕೆ ಪಡೆಯಲು ಬಾಕಿ ಇರುವವರ ಮನೆ ಮನೆಗೆ ತೆರಳಿ ಅವರನ್ನು ಸೆ.17ರಂದು  ಲಸಿಕಾ ಕೇಂದ್ರಗಳಿಗೆ ತೆರಳಿ ಲಸಿಕೆ ಪಡೆಯುವ ಬಗ್ಗೆ ಮನವೊಲಿಸಿ, ಗ್ರಾಮದ ಎಲ್ಲರೂ ಲಸಿಕೆ ಪಡೆಯುವಂತೆ  ಶ್ರಮಿಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.