HomePage_Banner
HomePage_Banner
HomePage_Banner
HomePage_Banner

ಅಪೂರ್ವ ವಿನ್ಯಾಸಗಳ ಬೃಹತ್ ಸಂಗ್ರಹದ ಟೈಲ್ಸ್ ಮಳಿಗೆ – ಡೆಲ್ಮಾ ಸ್ಯಾನಿಟರಿ ಸೆ.17 ರಂದು ಸಂಪ್ಯದ  ಫಾಝಿಲ್ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಶುಭಾರಂಭದ ಪ್ರಯುಕ್ತ ವಿಶೇಷ ರಿಯಾಯಿತಿ
  • ವಿಶಾಲ‌ ಸಂಗ್ರಹ – ಹೆಚ್ಚುವರಿ ಗ್ಯಾರಂಟಿ
  • ಡೋರ್ ಡೆಲಿವರಿ ವ್ಯವಸ್ಥೆ
  • ಅನುಕೂಲಕರ ಪಾರ್ಕಿಂಗ್ ವ್ಯವಸ್ಥೆ
  • ವಿಫುಲ ಆಯ್ಕೆಗೆ ಮುಕ್ತ ಅವಕಾಶ

ಪುತ್ತೂರು: ಮನೆ ಅಥವಾ ಕಟ್ಟಡವೊಂದು ಸುಂದರವಾಗಿ ಕಂಗೊಳಿಸುತ್ತಿದೆಯೆಂದರೆ ಕೇವಲ ಅದರ ಬಾಹ್ಯ ವಿನ್ಯಾಸ ಮಾತ್ರವಲ್ಲದೇ ಒಳ ವಿನ್ಯಾಸವೂ ಅಷ್ಟೇ ಕಾರಣವಾಗಿರುತ್ತದೆ. ಅದಕ್ಕಾಗಿ ಮನೆಯ ಒಳವಿನ್ಯಾಸಕ್ಕೆ ಈಗ ವಿವಿಧ ಬಣ್ಣ, ಗಾತ್ರ, ವಿನ್ಯಾಸಗಳ ಟೈಲ್ಸ್, ಸ್ಯಾನಿಟರಿ ಸಾಮಾಗ್ರಿಗಳು ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಪಡೆಯುತ್ತಿವೆ. ಪ್ರಸ್ತುತ ಕಾಲದಲ್ಲಿ ಸಾಮಾನ್ಯ ವರ್ಗದವರೂ ಆರ್‌ಸಿಸಿ ಮನೆ ಕಟ್ಟುತ್ತಿರುವುದರಿಂದ‌ ಪ್ರತಿಯೊಬ್ಬರೂ ತಮ್ಮ ಮನೆಯ ಟೈಲ್ಸ್, ಗ್ರಾನೈಟ್ಸ್ ವಿಭಿನ್ನತೆಯಿಂದ ಕೂಡಿರಬೇಕೆಂದು ಬಯಸುತ್ತಾರೆ. ಕಳೆದ ಹಲವು ವರ್ಷಗಳಿಂದ ಬೈಪಾಸ್ ರಸ್ತೆಯ ಬಪ್ಪಳಿಗೆಯಲ್ಲಿ  ‘ಡೆಲ್ಮಾ‌ ಸ್ಯಾನಿಟರಿ’ ಮನೆ,‌ ಬೃಹತ್ ಸೌಧಗಳ ಸಂಪೂರ್ಣ ಒಳ ವಿನ್ಯಾಸದ ಸಾಮಾಗ್ರಿಗಳ ಅಪೂರ್ವ ಸಂಗ್ರಹ ಮತ್ತು ವಿಫುಲ ಆಯ್ಕೆಯ ಟೈಲ್ಸ್ ಮಳಿಗೆಯಾಗಿ ಕಾರ್ಯನಿರ್ವಹಿಸುತ್ತಿದೆ. ಇದೀಗ ಗ್ರಾಹಕರ ಇನ್ನಷ್ಟು ಅನುಕೂಲತೆಗಾಗಿ ಮತ್ತು ಮತ್ತಷ್ಟು ಸಂಗ್ರಹಗಳಿಗಾಗಿ ಡೆಲ್ಮಾ ಸ್ಯಾನಿಟರಿ ಸೆ.17 ರಂದು ಮಾಣಿ ಮೈಸೂರು ಹೆದ್ದಾರಿಯ ಸಂಪ್ಯದ  ಫಾಝಿಲ್ ಕಾಂಪ್ಲೆಕ್ಸ್ ನಲ್ಲಿ  ನೂತನ ಆಡಳಿತದೊಂದಿಗೆ ಶುಭಾರಂಭಗೊಳ್ಳುತ್ತಿದೆ.

ತನ್ನ ಗುಣಮಟ್ಟ ಮತ್ತು ವಿಫುಲ ಆಯ್ಕೆ ಹಾಗೂ ಖಚಿತ ಸೇವೆಗಳಿಂದಾಗಿ ಪುತ್ತೂರಿನ ಆಸುಪಾಸಿನ ಗ್ರಾಹಕರನ್ನು ಆಕರ್ಷಿಸುವಲ್ಲಿ ಡೆಲ್ಮಾ ಸ್ಯಾನಿಟರಿ ಭರವಸೆಯಿರಿಸಿದೆ. ಈಗಾಗಲೇ ಬೆಳ್ತಂಗಡಿ ತಾಲೂಕಿನ ಉಜಿರೆ ಹಳೆ ಪೇಟೆಯ ಮನ್ಹ ಕಾಂಪ್ಲೆಕ್ಸ್ ನಲ್ಲಿ  ಬೃಹತ್ ಗೋದಾಮು ಜೊತೆ ಶೋರೂಂ ಹೊಂದಿರುವ ಸಂಸ್ಥೆಯ ಪ್ರವರ್ತಕರು ಸುಮಾರು  ವರ್ಷಗಳಿಂದ ಸಿರಾಮಿಕ್ ಕ್ಷೇತ್ರದಲ್ಲಿ ಅನುಭವ ಹೊಂದಿದ್ದಾರೆ. ಗುಜರಾತ್‌ನ ಫ್ಯಾಕ್ಟರಿಗಳ ಜೊತೆ ನೇರ ವ್ಯವಹಾರ ಹೊಂದಿರುವುದರಿಂದ ವಿಶೇಷ ರಿಯಾಯಿತಿ ಬೆಲೆಯಲ್ಲಿ ಗುಣಮಟ್ಟದ ಉತ್ಪನ್ನಗಳನ್ನು ನೀಡಲು ಸಾಧ್ಯವಾಗುತ್ತಿದೆ ಅನ್ನುತ್ತಾರೆ ಸಂಸ್ಥೆಯ ಮ್ಹಾಲಕರು. ಶುಭಾರಂಭದ ಪ್ರಯುಕ್ತ ವಿಶೇಷ ರಿಯಾಯಿತಿ ಬೆಲೆಯಲ್ಲಿ ಸಾಮಾಗ್ರಿಗಳು ದೊರೆಯಲಿವೆ ಮಾತ್ರವಲ್ಲದೆ ಉಚಿತ ಡೋರ್ ಡೆಲಿವರಿ ವ್ಯವಸ್ಥೆಯೂ ಕಲ್ಪಿಸಲಾಗಿದೆ.

ವಿಶಾಲ ಗೋದಾಮು: ಸುಮಾರು4500   ಚದರ ಅಡಿ ವಿಸ್ತೀರ್ಣದ ಗೋದಾಮು ಹೊಂದಿರುವ ಉಜಿರೆಯ ಮಳಿಗೆ 2013 ರಲ್ಲಿ ಆರಂಭಗೊಂಡು, 2016 ರಲ್ಲಿ ಬೈಪಾಸ್ ರಸ್ತೆಯ ಬಪ್ಪಳಿಗೆಯಲ್ಲಿ ತನ್ನ ಸಹಸಂಸ್ಥೆಯನ್ನು ಆರಂಭಿಸಿ ಗ್ರಾಹಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸಂಪ್ಯದ ಮಳಿಗೆ 4000 ಚದರ ಅಡಿ ವಿಸ್ತೀರ್ಣ ಹೊಂದಿದ್ದು ಸಂಪೂರ್ಣ ಹವಾನಿಯಂತ್ರಿತ ಶೋರೂಂ ಆಗಿದೆ.

ಉತ್ಪನ್ನಗಳು: ದೇಶದ ಪ್ರಸಿದ್ಧ ಟೈಲ್ಸ್ ಉತ್ಪಾದಕ ಕಂಪೆನಿಯಾದ  ಸಿರಾಮಿಕ್ ಕಂಪೆನಿಯ ಕಲೆಕ್ಷನ್ ಮಳಿಗೆ ಇದಾಗಿದ್ದು, ಇಲ್ಲಿ ಪ್ಯಾರಿವೇರ್, ಜಾಗ್ವಾರ್, ಸೆರಾ, ಹಿಂದ್ವೇರ್, ಡ್ರಾಪ್ಸ್ ಜರ್ಮನ್ ಕಲೆಕ್ಷನ್, ಕೋರ್ಸಾ, ಜಾಲ್, ಹಾಗೂ ಅನ್‌ಬ್ರ್ಯಾಂಡೆಡ್ ಐಟಂಗಳೂ ಲಭ್ಯವಿದೆ. ಮಳಿಗೆಯಲ್ಲಿ ಟೈಲ್ಸ್, ಸಿರಾಮಿಕ್ ಟೈಲ್ಸ್, ವೆಟ್ರಿಫೈಡ್ ಟೈಲ್ಸ್, ಗ್ರಾನೈಟ್ಸ್, ಸ್ಯಾನಿಟರಿ ವೇರ್ಸ್, ಡಿಜಿಟಲ್ ವಾಲ್ ಟೈಲ್ಸ್, ಸಿಪಿ ಫಿಟ್ಟಿಂಗ್ಸ್ ಹಾಗೂ ಬಾತ್‌ರೂಂ ಬಿಡಿಭಾಗಗಳ  ಬ್ರಹತ್ ಸಂಗ್ರಹವೇ ಇಲ್ಲಿದೆ.

ಶುಭಾರಂಭ ಕಾರ್ಯಕ್ರಮ: ನೂತನ ಮಳಿಗೆಯ ಶುಭಾರಂಭ ಕಾರ್ಯಕ್ರಮ ಸೆ.17 ರಂದು  ಬೆಳಿಗ್ಗೆ ನಡೆಯಲಿದೆ. ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಎಸ್.ಐ. ಉದಯರವಿ ಎಂ.ವೈ., ಆರ್ಯಾಪು ಗ್ರಾಮ ಪಂಚಾಯತ್ ಅಧ್ಯಕ್ಷೆ ಕೆ‌. ಸರಸ್ವತಿ ವಿಶ್ವನಾಥ ನಾಯಕ್, ಪುತ್ತೂರು ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್ ನ ಅಧ್ಯಕ್ಷ ರಮೇಶ್ ಭಟ್ ಮಿತ್ತೂರು, ಸಂಪ್ಯ ಮೊಹಿದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷ ಹಾಜಿ ಅಬ್ದುಲ್ ಜಲೀಲ್, ಫಾಝಿಲ್ ಕಾಂಪ್ಲೆಕ್ಸ್ ನ‌ ಮಾಲಕ ಅಬ್ದುಲ್ ಸಮದ್, ಡ್ರಾಪ್ಸ್ ಬಾತ್ ವೇರ್ ನ ಮಾಲಕ ಮೊಯಿದ್ದೀನ್ ಮೊದಲಾದವರು ಆಗಮಿಸಲಿದ್ದಾರೆ ಎಂದು ಸಂಸ್ಥೆಯ ಮಾಲಕರಾದ ಪಿ.ವಿ. ಅಬ್ದುಲ್ ರೆಹಮಾನ್ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.