HomePage_Banner
HomePage_Banner
HomePage_Banner
HomePage_Banner

ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನಾಚರಣೆ – ಸೆ.17ಕ್ಕೆ ತಾಲೂಕಿನಲ್ಲಿ 20  ಸಾವಿರ ಲಸಿಕೆ ನೀಡುವ ಗುರಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನಾಳೆ(ಸೆ.16) ಲಸಿಕೆ ಪಡೆಯುವ ಜಾಗೃತಿಗಾಗಿ ಜಾಥಾ

* ತಾಲೂಕಿನಲ್ಲಿ 20  ಕೇಂದ್ರ, ನಗರಸಭೆಯಲ್ಲಿ 6 ಕಡೆ ಲಸಿಕೆ ಕೇಂದ್ರ
* ಒಂದೊಂದು ಕೇಂದ್ರದಲ್ಲಿ ಕನಿಷ್ಠ 250ಲಸಿಕೆ
* 2  ಸಂಚಾರಿ ಲಸಿಕಾ ವಿತರಣಾ ಕೇಂದ್ರ
* ಲಸಿಕೆ ಪಡೆಯದ ಸಿಬ್ಬಂದಿಗಳಿದ್ದರೆ ಉದ್ಯಮ ಪರವಾನಿಗೆ ರದ್ದು

ಪುತ್ತೂರು: ಕೋವಿಡ್ -19ಸೋಂಕು ನಿಯಂತ್ರಣಕ್ಕಾಗಿ ಸರಕಾರ ಸಾರ್ವಜನಿಕರಿಗೆ ಉಚಿತ ಲಸಿಕೆ ನೀಡುತ್ತಿದೆ. ಬೇಡಿಕೆಯಷ್ಟು ಲಸಿಕೆ ಪೂರೈಕೆ ಮಾಡಿದರೂ ಇನ್ನೂ ಹಲವಾರು ಮಂದಿ ಲಸಿಕೆ ಪಡೆಯಲು ಬಾಕಿ ಇದ್ದಾರೆ. ಅವರು ಲಸಿಕಾ ಕೇಂದ್ರಗಳಿಗೆ ಬಾರದೆ ಇರಬಹುದು ಅಥವಾ ಬರಲು ಆಗದೇ ಇರಬಹದು. ಇಂತಹ ಸಂದರ್ಭದಲ್ಲಿ ಸಂಚಾರಿ ಲಸಿಕೆ ಕೇಂದ್ರದ ಮೂಲಕ ಅವರ ಮನೆಗೆ ಹೋಗಿಯಾದರೂ ಲಸಿಕೆ ನೀಡುವ ಕಾರ್ಯ ಸೇರಿದಂತೆ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಸೆ.17 ರಂದು 20 ಸಾವಿರ ಕೋವಿಡ್ ಲಸಿಕೆ ನೀಡಿಕೆ ಕಾರ್ಯಕ್ರಮ ನಡೆಯಲಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಾಚರಣೆ ಅಂಗವಾಗಿ ಈ ಬೃಹತ್ ಕೋವಿಡ್ ಲಸಿಕೆ ಮೇಳ ನಡೆಯಲಿದೆ ಎಂದು ನಗರಸಭಾ ಅಧ್ಯಕ್ಷ ಕೆ.ಜೀವಂಧರ್ ಜೈನ್ ತಿಳಿಸಿದ್ದಾರೆ.


ಸೆ.16 ರಂದು ಬೆಳಿಗ್ಗೆ ದರ್ಬೆಯಿಂದ ಜಾಗೃತಿ ಜಾಥಾ ನಡೆಯಲಿದೆ. ಸೆ.17 ರಂದು ನಗರಸಭೆಯ6ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ನೀಡಿಕೆ ನಡೆಯಲಿದೆ. ಪುತ್ತೂರು ನಗರವನ್ನು ಲಸಿಕೆಯುಕ್ತ ಮತ್ತು ಕೊರೋನಾ ಮುಕ್ತ ನಗರವನ್ನಾಗಿ ಮಾಡುವಲ್ಲಿ ನಗರಸಭೆ ಹಾಗೂ ಆರೋಗ್ಯ ಇಲಾಖೆ ಪಣತೊಟ್ಟಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನಾಚರಣೆಯ ಅಂಗವಾಗಿ ನಡೆಯುತ್ತಿರುವ ಬೃಹತ್ ಲಸಿಕಾ ಮೇಳದಲ್ಲಿ ಸಂಚಾರಿ ಲಸಿಕಾ ಕೇಂದ್ರವನ್ನು ನಗರದಲ್ಲಿ ಪರ್ಯಾಟನ ನಡೆಸುವ ಚಿಂತನೆಯನ್ನು ತಾಲೂಕು ಆರೋಗ್ಯ ಇಲಾಖೆ ಮಾಡಿದೆ. ಪುತ್ತೂರು ನಗರಸಭೆಯ ಸದಸ್ಯರು ಕೂಡಾ ಈ ಚಿಂತನೆಗೆ ತಮ್ಮ ಸಂಪೂರ್ಣ ಸಹಕಾರ ನೀಡಲು ಸಿದ್ದರಾಗಿದ್ದಾರೆ. ಆಯಾ ವಾರ್ಡ್‌ಗಳಲ್ಲಿ ಅಲ್ಲಿನ ನಗರಸಭಾ ಸದಸ್ಯರುಗಳು ಸಂಚಾರಿ ಲಸಿಕಾ ಕೇಂದ್ರಗಳ ಕಾರ್ಯಾಚರಣೆಗೆ ಸಹಕರಿಸಲಿದ್ದಾರೆ ಎಂದು ಅವರು ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಅವರು ಮಾತನಾಡಿ ಪುತ್ತೂರು ತಾಲೂಕಿನಲ್ಲಿ ಕೋವಿಡ್ ಲಸಿಕೆ ಪ್ರಥಮ ಡೋಸ್ ಪಡೆಯಲು 10,802 ಮಂದಿ ಬಾಕಿ ಇದ್ದಾರೆ. ಎರಡನೇ ಡೋಸ್‌ಗೆ 3,108  ಮಂದಿ ಇದ್ದಾರೆ. ಅದೇ ರೀತಿ ಕಡಬ ತಾಲೂಕಿನಲ್ಲಿ ಪ್ರಥಮ ಮತ್ತು ದ್ವಿತೀಯ ಡೋಸ್ ಪಡೆಯಲು 16 ಸಾವಿರ ಮಂದಿ ಬಾಕಿ ಇದ್ದಾರೆ.

ನಗರ ಆರೋಗ್ಯ ಕೇಂದ್ರ ಮಾತ್ರ ಹೆಚ್ಚಾಗಿ ವ್ಯಾಕ್ಸಿನೇಶನ್ ಆಗಿದೆ. ಆದರೂ ಶೇ.100  ಲಸಿಕೆ ಆಗಬೇಕೆಂದು ಸೆ.17 ರಂದು ನಗರಸಭೆ ವ್ಯಾಪ್ತಿಯ6  ಕೇಂದ್ರಗಳಲ್ಲಿ ಲಸಿಕೆ ವಿತರಣೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು. ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಮಾತನಾಡಿ ನಗರಸಭೆ ವ್ಯಾಪ್ತಿಯಲ್ಲಿ 2  ಲಸಿಕಾ ಸಂಚಾರಿ ಕೇಂದ್ರದಿಂದ ಲಸಿಕೆ ನೀಡುವ ಯೋಜನೆ ಇದೆ. ಈ ನಿಟ್ಟಿನಲ್ಲಿ ಉದ್ಯಮ ಮಳಿಗೆಯಲ್ಲಿ ಲಸಿಕೆ ಪಡೆಯದ ಸಿಬ್ಬಂದಿಗಳಿದ್ದರೆ ಅವರಿಗೆ ಲಸಿಕೆ ಕೊಡಿಸುವ ಕೆಲಸ ಆಗುತ್ತದೆ. ಮುಂದೆ ಅವರೆಲ್ಲ ಲಸಿಕೆ ಪಡೆಯುವ ದಾಖಲೆ ಇಟ್ಟು ಕೊಂಡಿರಬೇಕಾಗುತ್ತದೆ. ಇಲ್ಲವಾದಲ್ಲಿ ಉದ್ಯಮ ಪರವಾನಿಗೆ ರದ್ದು ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು, ಭಾಮಿ ಅಶೋಕ್ ಶೆಣೈ, ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಸೇರಿದಂತೆ ಅಧಿಕಾರಿಗಳು, ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.