HomePage_Banner
HomePage_Banner
HomePage_Banner
HomePage_Banner

ಕೆಯ್ಯೂರು ಕೆಪಿಎಸ್ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಗುರುವಂದನೆ, ಲಾಂಛನ ಅನಾವರಣ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ರೋಟರಿ ಕ್ಲಬ್ ಪುತ್ತೂರು ಯುವ, ಜನ್ಮ ಫೌಂಡೇಷನ್‌ನಿಂದ ವಿದ್ಯಾಸೇತು ವಿದ್ಯಾಭಿಯಾನ

ಪುತ್ತೂರು: ಕೋವಿಡ್‌ನ ಸಂಕಷ್ಟದಿಂದಾಗಿ ವಿದ್ಯಾರ್ಥಿಗಳ ಶಿಕ್ಷಣದ ಭವಿಷ್ಯಕ್ಕೆ ಬಹಳಷ್ಟು ಹೊಡೆತ ಬಿದ್ದಿದೆ. ಅದೆಷ್ಟೋ ವಿದ್ಯಾರ್ಥಿಗಳಿಂದ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇಂತಹ ಸಮಯದಲ್ಲಿ ವಿದ್ಯಾಸೇತು ವಿದ್ಯಾಭಿಯಾನದ ಮೂಲಕ ಮಕ್ಕಳಿಗೆ ಪುಸ್ತಕ ವಿತರಿಸಿ ಅವರ ಶಿಕ್ಷಣದ ಗುಣಮಟ್ಟವನ್ನು ಉತ್ತಮಗೊಳಿಸುವ ಕಾರ್ಯ ರೋಟರಿ ಕ್ಲಬ್ ಮತ್ತು ಜನ್ಮ ಫೌಂಡೇಷನ್‌ನಿಂದ ನಡೆದಿರುವುದು ಶ್ಲಾಘನೀಯ, ವಿದ್ಯಾರ್ಥಿಗಳು ಪುಸ್ತಕ ಓದುವ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಳ್ಳಿ ಎಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು ಇದರ ಪ್ರೌಢಶಾಲಾ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜರವರು ಹೇಳಿದರು.


ಅವರು ರೋಟರಿ ಕ್ಲಬ್ ಪುತ್ತೂರು ಯುವ ನೇತೃತ್ವದಲ್ಲಿ ಜನ್ಮ ಫೌಂಡೇಷನ್ ಟ್ರಸ್ಟ್‌ನ ಸಹಕಾರದೊಂದಿಗೆ ಸೆ.15ರಂದು ಕೆಯ್ಯೂರು ಕೆಪಿಎಸ್ ಸಭಾಂಗಣದಲ್ಲಿ ನಡೆದ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ರೋಟರಿ ಸದಸ್ಯರ ಸಹೃದಯಿ ಕೊಡುಗೆ ವಿದ್ಯಾಸೇತು ವಿದ್ಯಾಭಿಯಾನ ಪುಸ್ತಕ ವಿತರಣೆ, ಗುರುವಂದನೆ ಹಾಗೂ ಲಾಂಛನ ಅನಾವರಣ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ಮಗು ಒಂದು ಮಣ್ಣಿನ ಮುದ್ದೆಯಾಗಿರುತ್ತದೆ ಅದನ್ನು ತಿದ್ದಿತೀಡಿ ಅದಕ್ಕೆ ಜೀವ ಮತ್ತು ಸಂಸ್ಕಾರ, ಶಿಕ್ಷಣವನ್ನು ಕೊಡುವ ಕೆಲಸವನ್ನು ಶಿಕ್ಷಕರು ಮಾಡುತ್ತಾರೆ ಇಂತಹ ಶಿಕ್ಷಕರಿಗೆ ಗುರುವಂದನೆ ಮಾಡುವ ಕೆಲಸವೂ ನಡೆದಿರುವುದು ಶ್ಲಾಘನೀಯ ಎಂದು ಎಸ್.ಬಿ.ಜಯರಾಮ ರೈ ಹೇಳಿದರು.


ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ವಿದ್ಯಾಸೇತು ವಿದ್ಯಾಭಿಯಾನದ ಚೆಯರ್‌ಮೆನ್ ಪುತ್ತೂರು ಉಮೇಶ್ ನಾಯಕ್‌ರವರು, ಕೋವಿಡ್‌ನಿಂದಾಗಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಬಗ್ಗೆ ಹೆಚ್ಚಿನ ಜ್ಞಾನವನ್ನು ನೀಡುವ ಸಲುವಾಗಿ ವಿದ್ಯಾಸೇತು ವಿದ್ಯಾಭಿಯಾನದ ಮೂಲಕ ಪುಸ್ತಕಗಳನ್ನು ನೀಡಲಾಗುತ್ತದೆ. ರಾಜ್ಯದಲ್ಲಿಯೇ ಪುಸ್ತಕ ವಿತರಣೆ ನಡೆಯುತ್ತಿದೆ. ರೋಟರಿ ಕ್ಲಬ್, ವಿಜಯವಾಣಿ ಮತ್ತು ದಿಗ್ವಿಜಯ ಜೊತೆಗೂಡಿ ಪುಸ್ತಕ ಕೊಡುವ ಕೆಲಸವನ್ನು ಮಾಡುತ್ತಿದೆ ಎಂದರು. ಕೆಪಿಎಸ್ ಪ್ರಾಂಶುಪಾಲ ಆನಂದ ಪಿರವರು ಮಾತನಾಡಿ, ವಿದ್ಯಾಲಯಕ್ಕೆ ದಾನ ಮಾಡುವುದು ಎಂದರೆ ಸಮಾಜಕ್ಕೆ ದಾನ ಮಾಡಿದಂತೆ, ರೋಟರಿ ಮತ್ತು ಜನ್ಮ ಫೌಂಡೇಷನ್ ಉತ್ತಮ ಕೆಲಸ ಮಾಡಿದೆ ಎಂದು ಹೇಳಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರೋಟರಿ ಪೂರ್ವ ಸಹಾಯಕ ಗವರ್ನರ್ ರತ್ನಾಕರ ರೈ ಕೆದಂಬಾಡಿಗುತ್ತುರವರು ಮಾತನಾಡಿ, ವಿದ್ಯಾಸೇತು ವಿದ್ಯಾಭಿಯಾನ ಒಂದು ಒಳ್ಳೆಯ ಕಾರ್ಯಕ್ರಮವಾಗಿದ್ದು ವಿದ್ಯಾರ್ಥಿಗಳು ಪುಸ್ತಕದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.ರೋಟರಿ ಪುತ್ತೂರು ಯುವದ ಪೂರ್ವಾಧ್ಯಕ್ಷ ಚೇತನ್ ಪ್ರಕಾಶ್ ಕಜೆ, ನಿಯೋಜಿತ ಅಧ್ಯಕ್ಷೆ ರಾಜೇಶ್ವರಿ ಆಚಾರ್, ಪೂರ್ವ ವಲಯ ಸೇನಾನಿ ನರಸಿಂಹ ಪೈ, ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷ ಭರತ್ ಪೈರವರುಗಳು ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ರೋಟರಿ ಪುತ್ತೂರು ಯುವದ ಪೂರ್ವಾಧ್ಯಕ್ಷ ಸೂರಜ್ ಶೆಟ್ಟಿ, ರೋಟರಿ ಯುವದ ಕಾರ್ಯದರ್ಶಿ ದೇವಿಚರಣ್ ರೈ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಜನ್ಮ ಫೌಂಡೇಷನ್ ಟ್ರಸ್ಟ್‌ನ ಅಧ್ಯಕ್ಷ ಡಾ| ಹರ್ಷ ಕುಮಾರ್ ರೈ ಮಾಡಾವು ಸ್ವಾಗತಿಸಿದರು. ಕೆಪಿಎಸ್ ಪ್ರೌಢಶಾಲಾ ಉಪಪ್ರಾಂಶುಪಾಲ ಕೆ.ಎಸ್.ವಿನೋದ್ ಕುಮಾರ್ ವಂದಿಸಿದರು. ಕೆಪಿಎಸ್ ಶಿಕ್ಷಕಿ ಜೆಸ್ಸಿ ಪಿ.ವಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವೃಂದದವರು ಸಹಕರಿಸಿದ್ದರು.


ಗುರುವಂದನೆ
ಜಿಲ್ಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಚೆನ್ನಾವರ ಸರಕಾರಿ ಶಾಲೆಯ ಶಿಕ್ಷಕಿ ಶಾಂತಕುಮಾರಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶಾಲು,ಸ್ಮರಣಿಕೆ,ಫಲಪುಷ್ಪ ನೀಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಶಾಂತ ಕುಮಾರಿಯವರು ಮಾತನಾಡಿ, ನಾನು ಪ್ರಶಸ್ತಿಗೆ ಅರ್ಜಿ ಹಾಕಿರಲಿಲ್ಲ, ಅರ್ಜಿ ಹಾಕದೆ ನನಗೆ ಪ್ರಶಸ್ತಿ ಬಂದಿರುವುದು ಖಷಿ ತಂದಿದೆ. ಈ ಪ್ರಶಸ್ತಿಗೆ ನನ್ನ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಕಾರಣರಾಗಿದ್ದಾರೆ. ಇದು ಶಾಲೆಗೆ, ಸಮಾಜಕ್ಕೆ ಸಂದ ಗೌರವವಾಗಿದೆ. ನನ್ನನ್ನು ಗುರುತಿಸಿ ಗೌರವಿಸಿದ ರೋಟರಿಗೆ ಜನ್ಮ ಫೌಂಡೇಷನ್‌ಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಕೆಪಿಎಸ್ ಕನ್ನಡ ಭಾಷಾ ಶಿಕ್ಷಕಿ ನಳಿನಿಯವರು ಶಾಂತಕುಮಾರಿಯವರ ಪರಿಚಯ ಮಾಡಿದರು.

ಕೆಯ್ಯೂರು ಶಾಲಾ73  ವಿದ್ಯಾಥಿಗಳಿಗೆ ಪುಸ್ತಕ ವಿತರಣೆ
ರಾಜ್ಯದ 8000 ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ೫ ಲಕ್ಷಕ್ಕೂ ಅಧಿಕ ಪುಸ್ತಕ ವಿತರಣೆ ಮಾಡಲಾಗುತ್ತಿದೆ. ಜಿಲ್ಲೆಯ 21 ಸರಕಾರಿ ಮತ್ತು ೫ ಅನುದಾನಿತ ಶಾಲೆಯ ವಿದ್ಯಾರ್ಥಿಗಳಿಗೆ 1300 ಕ್ಕೂ ಅಧಿಕ ಪುಸ್ತಕಗಳನ್ನು ವಿತರಿಸಲಾಗುತ್ತಿದೆ.ಕೆಯ್ಯೂರು ಶಾಲೆಯ 73  ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಗಿದೆ. ಜನ್ಮ ಫೌಂಡೇಷನ್‌ನ ಅಧ್ಯಕ್ಷ ಹರ್ಷಕುಮಾರ್ ರೈಯವರ ಸಹಕಾರದೊಂದಿಗೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಗಿದೆ.

ಲಾಂಛನ ಅನಾವರಣ
ವಿದ್ಯಾಸೇತು ವಿದ್ಯಾಭಿಯಾನದ ಲಾಂಛನವನ್ನು ಶಾಲಾ ಗೋಡೆಯಲ್ಲಿ ರಚಿಸಲಾಗಿದ್ದು ಇದನ್ನು ವಿದ್ಯಾಸೇತು ವಿದ್ಯಾಭಿಯಾನದ ಚೆಯರ್‌ಮ್ಯಾನ್ ಪುತ್ತೂರು ಉಮೇಶ್ ನಾಯಕ್‌ರವರು ಅನಾವರಣಗೊಳಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.