HomePage_Banner
HomePage_Banner
HomePage_Banner
HomePage_Banner

ಮಾನಸಿಕ ತಲ್ಲಣ : ನಿರ್ಲಕ್ಷಿಸಿದರೆ ಆಗಬಹುದು ಸಣ್ಣ ಸಮಸ್ಯೆಯೂ ಉಲ್ಬಣ..!

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಮಾನವ ಸಂಘಜೀವಿ. ಆದರೆ ಮನುಷ್ಯನ ಈ ಗುಣಲಕ್ಷಣದ ಮೇಲೆ ಕೊರೋನಾ ಎಂಬ ಮಹಾಮಾರಿ ದೊಡ್ಡ ಹೊಡೆತವನ್ನೇ ನೀಡಿದೆ. ಕೋವಿಡ್ -19 ಹಿನ್ನೆಲೆಯಲ್ಲಿ ಹೇರಿಕೆಯಾದ ಲಾಕ್‌ಡೌನ್ ಸಮಾಜದ ಎಲ್ಲಾ ವರ್ಗದ ಜನರ ಮೇಲೆ ಪರಿಣಾಮ ಬೀರಿದೆ. ಜನರು ಆರ್ಥಿಕವಾಗಿ, ಸಾಮಾಜಿಕವಾಗಿ ಕಂಗೆಟ್ಟಿದ್ದಾರೆ. ಇಷ್ಟೇ ಆಗಿದ್ದರೆ ಪರಿಸ್ಥಿತಿ ಇಂದಲ್ಲ ನಾಳೆ ಸುಧಾರಿಸಬಹುದು ಎಂದು ಆಶಾವಾದಿಗಳಾಗಬಹುದಿತ್ತು. ಆದರೆ ಈ ಲಾಕ್‌ಡೌನ್‌ನ, ಸಾಮಾಜಿಕ ಅಂತರ ಇತ್ಯಾದಿ ಪರಿಕಲ್ಪನೆಗಳು ಮನುಷ್ಯನನ್ನು ಅನೇಕ ಬಾರಿ ದೈಹಿಕವಾಗಿ ಒಂಟಿಯಾಗಿಸುವ ಜೊತೆಗೆ ಮಾನಸಿಕವಾಗಿ ಕೂಡ ಒಂಟಿ ಎನ್ನುವ ಭಾವನೆಯನ್ನು ಅನೇಕ ಮಂದಿಯಲ್ಲಿ ಬಿತ್ತಿವೆ. ಇದು ಮುಂದೆ ಕಂಡು ಕೇಳರಿಯದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು ಎನ್ನುವುದು ಎಲ್ಲರೂ ಒಪ್ಪಿಕೊಳ್ಳಬೇಕಾದ ಕಹಿ ಸತ್ಯ.


ಕೊರೋನ ಮನುಷ್ಯನ ಎಲ್ಲಾ ಕಾರ್ಯಚಟುವಟಿಕೆಯ ಮೇಲೆ ಕಡಿವಾಣ ಹಾಕಿದೆ. ಅವನಿಗೆ ಮೊದಲಿನ ಹಾಗೆ ಪರಸ್ಪರ ಬೆರೆಯಲು, ಮಾತನಾಡಲೂ, ತನ್ನ ಭಾವನೆಯನ್ನು ವ್ಯಕ್ತ ಪಡಿಸಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮದಿಂದಾಗಿ ಜನರು ಒಂಟಿಯಾಗುತ್ತಿದ್ದಾರೆ. ಇದರಿಂದಾಗಿ ಮಾನಸಿಕ ಸಮಸ್ಯೆಗಳಾದ ಖಿನ್ನತೆ, ಆತಂಕ, ಭಯಭೀತಿ, ನಿದ್ರಾಹೀನತೆ, ಮನೋದೈಹಿಕ ಸಮಸ್ಯೆಗಳು ಕೂಡಾ ಹೆಚ್ಚಾಗುತ್ತಿವೆ. ಅನೇಕರು ಆರ್ಥಿಕ, ಸಾಮಾಜಿಕ ತೊಂದರೆಗಳ ಬಗೆಗಷ್ಟೇ ಚಿಂತಿತರಾಗಿದ್ದಾರೆ. ಆದರೆ ಬೆನ್ನ ಹಿಂದಿನಿಂದ ಸದ್ದಿಲ್ಲದಂತೆ ಬರುವ ಈ ಮಾನಸಿಕ ಖಾಯಿಲೆಗಳೆಂಬ ಗುಮ್ಮನ ಬಗ್ಗೆ ಯಾರೂ ಅಷ್ಟಾಗಿ ಲಕ್ಷ್ಯ ವಹಿಸುತ್ತಿಲ್ಲ.

ಇಲ್ಲಿ ಬಹಳಷ್ಟು ಮಾನಸಿಕ ಖಾಯಿಲೆಗಳು ಎದುರಾಗುವ ಅಪಾಯ ಇರುವುದು ಮಕ್ಕಳಲ್ಲಿ. ಮಕ್ಕಳು ಸಮಾಜದ ಪ್ರಮುಖ ಅಂಗ. ಶಾಲೆ, ಆಟ-ಪಾಠಗಳ ನಡುವೆ ಇದ್ದ ಮಕ್ಕಳಲ್ಲಿ ಕೊರೋನಾದ ಸ್ಥಿತ್ಯಂತರ ಬಹಳಷ್ಟು ದೊಡ್ಡ ಆಘಾತ ನೀಡಿದೆ. ಶಾಲೆ ಎಂಬುದು ಬರೆ ಪುಸ್ತಕದ ಕಲಿಕೆಯನ್ನು ಕಲಿಸದೆ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಸಹಾಯವಾಗುತ್ತದೆ. ಆದರೆ ಈವರೆಗೆ ಅದಿಲ್ಲದ ಕಾರಣ ಮಕ್ಕಳು ಮನೆಯ ಒಳಗೆ ಉಳಿದು ನಿಧಾನಕ್ಕೆ ಸಮಾಜದಲ್ಲಿ ಬೆರೆಯುವುದು, ಹೊಂದಾಣಿಕೆಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಮಕ್ಕಳ ಸಾಮಾಜಿಕ ಕೌಶಲ್ಯ ಕುಂಠಿತವಾಗಿ ಮಕ್ಕಳು ಅಂರ್ತಮುಖಿಯಾಗುತ್ತಿದ್ದಾರೆ.

ಇದು ಒಂದು ಬಗೆಯ ಸಮಸ್ಯೆಯಾಗಿದ್ದರೆ ಇನ್ನೊಂದು ಬಗೆಯ ಸಮಸ್ಯೆ ಆನ್‌ಲೈನ್ ಕ್ಲಾಸ್‌ನ ಮತ್ತೊಂದು ಆಯಾಮದ್ದು. ಇಂದು ಆನ್‌ಲೈನ್ ಕ್ಲಾಸ್‌ಗಳಿಂದಾಗಿ ಪ್ರತಿಯೊಂದು ಮಗುವಿಗೆ ಮೊಬೈಲ್ ಸಿಗುವಂತಾಗಿದೆ. ಸೋಶಿಯಲ್ ಮೀಡಿಯಾ ಮತ್ತು ಸುಲಭವಾಗಿ ಸಿಗುವ ಗೇಮ್ಸ್ ಮಕ್ಕಳು ಮತ್ತು ಹದಿಹರೆಯ ಗುಂಪನ್ನು ನಿಧಾನವಾಗಿ ಅಡಿಕ್ಷನ್‌ನ ಹತ್ತಿರ ಕೊಂಡೊಯ್ಯುತ್ತಿದೆ. ಸಣ್ಣ ಮಕ್ಕಳಿಗೆ ಅದು ಒಂದು ಆಟಿಕೆಯ ಹಾಗೆ ಆಗಿದೆ ಎಂದರೆ ತಪ್ಪಾಗಲಾರದು. ಇದು ವ್ಯತಿರಿಕ್ತ ಪರಿಣಾಮವನ್ನು ಮಕ್ಕಳ ಮನಸ್ಸಿನ ಮೇಲೆ ಉಂಟುಮಾಡುತ್ತಿದ್ದು, ಮಕ್ಕಳ ವರ್ತನೆಯನ್ನು ನೋಡಿ ಪೋಷಕರು ಹೇಗೆ ನಿಭಾಯಿಸುವುದು ಎಂದು ಆಲೋಚಿಸುವಂತಾಗಿದೆ. ಇದು ಎಲ್ಲರೂ ಗಂಭೀರವಾಗಿ ಚಿಂತಿಸಬೇಕಿರುವ ವಿಚಾರ. ಯಾಕೆಂದರೆ ಇವುಗಳಿಂದ ಹದಿಹರೆಯ ಗುಂಪುಗಳಲ್ಲಿ ಸಾಮಾನ್ಯವಾಗಿ ವ್ಯಕ್ತಿತ್ವ ದೋಷಗಳು ಕಾಣಿಸುತ್ತವೆ. ಇದರ ಲಕ್ಷಣಗಳು ಎಂದರೆ ಹಟ ಸ್ವಭಾವ, ಡಿಮ್ಯಾಡಿಂಗ್ ಸ್ವಭಾವ, ಅತಿಯಾದ ಖರ್ಚು ಮಾಡುವುದು, ತನ್ನನ್ನೇ ತಾನು ಶಿಕ್ಷಿಸಿಕೊಳ್ಳುವುದು, ಒಂಟಿಯಾಗಿರುವುದನ್ನು ಬಯಸುವುದು ಅಥವಾ ತನ್ನ ವಯಸ್ಸಿನ ಮಕ್ಕಳೊಂದಿಗೆ ಮಾತ್ರ ಬೆರೆಯುವುದು, ತಂದೆ -ತಾಯಿಯ ಬಗ್ಗೆ ತಿರಸ್ಕಾರ ಭಾವನೆ , ಊಟ, ನಿದ್ರೆಯ ಬಗ್ಗೆ ಅಸಡ್ಡೆ ಮತ್ತು ಮಾದಕ ದ್ರವ್ಯಗಳ ಸೇವನೆ. ಇವುಗಳೇನಾದರೂ ಮಕ್ಕಳಲ್ಲಿ ಕಂಡುಬಂದರೆ ಒಂದೊಮ್ಮೆ ಮಾನಸಿಕ ತಜ್ಞರ ಸಲಹೆ ಪಡೆಯುವುದು ಒಳಿತು.

ಇನ್ನು ಉದ್ಯೋಗಸ್ಥರ ಪಾಡು ಕೂಡ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಕೊರೋನಾದಿಂದಾಗಿ ಜನರ ಆರ್ಥಿಕ ಪರಿಸ್ಥಿತಿಯೂ ಕೂಡ ಅಲ್ಲೋಲ ಕಲ್ಲೋಲವಾಗಿದೆ. ಉದ್ಯೋಗದ ಕೊರತೆಯಿಂದಾಗಿ, ಅರೆ ಉದ್ಯೋಗದಿಂದಾಗಿ ಜನರು ಮನೆ ನಡೆಸಲು ಕಷ್ಟಪಡುತ್ತಿದ್ದಾರೆ. ಇದರಿಂದಾಗಿ ಕುಟುಂಬದ ಭಾಂದವ್ಯ ಮತ್ತು ಹೊಂದಾಣಿಕೆ ಸಮಸ್ಯೆ ಕಂಡುಬರುತ್ತಿವೆ. ತಮಗೆ ಸಿಗುವ ಅಲ್ಪ ಸಂಬಳದಿAದಾಗಿ ಇಡೀ ಕುಟುಂಬದ ಖರ್ಚನ್ನು ಭರಿಸಲು ಕಷ್ಟಪಡುವ ಪುರುಷ ಮಹಿಳೆಯರು ಮನಸ್ಸಿನ ಸಮಸ್ಯೆಗಳಾದ ಆತಂಕ, ಖಿನ್ನತೆ ಕಡೆಗೆ ಜಾರುತ್ತಿದ್ದಾರೆ. ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಅವಕಾಶ ಇಲ್ಲದೆ ಕಷ್ಟಪಡುತ್ತಿದ್ದಾರೆ. ಇಂತಹವರಿಗೂ ಮಾನಸಿಕ ಆಪ್ತ ಸಮಾಲೋಚನೆಯ ಅಗತ್ಯವಿದೆ.

ಮೇಲೆ ವಿವರಿಸಿದ ಎಲ್ಲಾ ಸಮಸ್ಯೆಗಳಿಗೆ ಇರುವ ಸುಲಭದ ಪರಿಹಾರ ಎಂದರೆ ಅದು ‘ಆಪ್ತ ಸಮಾಲೋಚನೆ’. ಆಪ್ತ ಸಮಾಲೋಚಕರು ವ್ಯಕ್ತಿಯ ಸಮಸ್ಯೆ ಮತ್ತು ನಡವಳಿಕೆಗಳನ್ನು ಅಧ್ಯಯನ ಮಾಡಿ ಮದ್ದಿನ ಸಹಾಯ ಇಲ್ಲದೆ ಪರಿಹಾರ ಕಂಡುಕೊಳ್ಳುವುದಕ್ಕೆ ಕೌನ್ಸಿಲಿಂಗ್ ಅಥವಾ ಥೆರಪಿ ಮೂಲಕ ಸಹಾಯ ಮಾಡುತ್ತಾರೆ. ಈ ಮೂಲಕ ಮಾನಸಿಕ ಸಮಸ್ಯೆಗಳನ್ನು ಆರಂಭದ ಹಂತದಿಂದಲೇ ಗುರುತಿಸಿದರೆ ಮುಂದಾಗಬಹುದಾದ ಗಂಭೀರ ಸಮಸ್ಯೆಗಳನ್ನು ಸುಲಭದಿಂದಲೇ ನಿವಾರಿಸಬಹುದು.

ಈ ನಿಟ್ಟಿನಲ್ಲಿ ಈಗ ಪುತ್ತೂರು ಭಾಗದಲ್ಲೂ ಈ ಮಾನಸಿಕ ತಜ್ಞರ, ಆಪ್ತ ಸಮಾಲೋಚಕರ ಸೇವೆ ಲಭ್ಯವಿದೆ. ಮಕ್ಕಳ ನಡವಳಿಕೆಯ ಸಮಸ್ಯೆಗಳು, ಹದಿಹರೆಯ ಸಮಸ್ಯೆಗಳು, ಹೊಂದಾಣಿಕೆಯ ಸಮಸ್ಯೆಗಳು, ಗಂಡ ಹೆಂಡತಿ ಭಿನ್ನಾಭಿಪ್ರಾಯಗಳು, ಲೈಂಗಿಕ ಸಮಸ್ಯೆಗಳು, ಮಾದಕ ದ್ರವ್ಯ ಸೇವನೆ -ಸಿಗರೇಟ್, ಗಾಂಜಾ, ಹೊಗೆಸೊಪ್ಪು, ಕುಡಿತದ ಸಮಸ್ಯೆಗಳು ಅಲ್ಲದೆ, ಮನಸ್ಸಿನ ಸಮಸ್ಯೆಗಳಾದ ನಿದ್ರಾ ಹೀನತೆ – ಒತ್ತಡ, ಆತಂಕ – ಫೋಬಿಯ, ಡಿಪ್ರೆಶನ್ – ಖಿನ್ನತೆ, ಒ.ಸಿ.ಡಿ (ಗೀಳು ರೋಗ) ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಲಭ್ಯವಿದೆ. ರಿಲ್ಯಾಕ್ಸ್ಸನ್ ಥೆರಪಿ, ಸೈಕೋ ಥೆರಪಿ, ಕೋಗ್ನಿಟಿವ್ ಬಿಹೇವಿಯರ್ ಥೆರಪಿ, ಬಿಹೇವಿಯರ್ ಥೆರಪಿ, ಆಪ್ತ ಸಮಾಲೋಚನೆ, ಮೆಡಿಕಲ್ ಕೌನ್ಸಿಲಿಂಗ್, ಮ್ಯಾರೈಟಲ್ ಕೌನ್ಸಿಲಿಂಗ್ ಮೂಲಕ ಸಕಲ ಮನಸ್ಸಿನ ಸಮಸ್ಯೆಗಳಿಗೂ ಈಗ ಪುತ್ತೂರಿನಲ್ಲಿ ಚಿಕಿತ್ಸೆ ಲಭ್ಯವಿದೆ.

ಡಾ. ತುಳಸಿ ಪಟ್ಟೆ ತುಳಸಿ ಕೌನ್ಸಿಲಿಂಗ್ ಸೆಂಟರ್ ಡಾ. ಪ್ರದೀಪ್ ಕುಮರ‍್ಸ್ ಥೆರಪಿ ಸೆಂಟರ್ ಹಿತ ಹಾಸ್ಪಿಟಲ್ ಎದುರುಗಡೆ ದರ್ಬೆ, ಪುತ್ತೂರು

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.