HomePage_Banner
HomePage_Banner
HomePage_Banner
HomePage_Banner

ಸುದ್ದಿ ಮಾಧ್ಯಮ ನಡೆಸಿದ ಜನಮೆಚ್ಚಿದ ಸಹಕಾರಿ ಇಲಾಖಾ ಅಧಿಕಾರಿಗಳಿಗೆ ಗೌರವಾರ್ಪಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಸುದ್ದಿ ಮಾಧ್ಯಮ ನಡೆಸಿದ ವಿವಿಧ ಇಲಾಖೆಗಳ ಜನಮೆಚ್ಚಿದ ಅಧಿಕಾರಿಗಳ ವೋಟಿಂಗ್ ಕಂಟೆಸ್ಟ್ ನಲ್ಲಿ ಸಹಕಾರಿ ಇಲಾಖೆಯಲ್ಲಿ ವಿಜೇತರಾದ ಪ್ರಭಾರ ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ  ಸುಕನ್ಯಾ ಹಾಗೂ ಸಹಕಾರಿ ಅಬಿವೃದ್ದಿ ಅಧಿಕಾರಿ ಶೋಭಾ ಇವರನ್ನು ಪುತ್ತೂರು ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ 20 ಅಂಶಗಳ ಸಭೆಯಲ್ಲಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ ಪುತ್ತೂರು ಶಾಖೆಯ ವ್ಯವಸ್ಥಾಪಕರಾದ  ರತ್ನಕುಮಾರ್ ವೇದಿಕೆಯಲಿ ಉಪಸ್ಥಿತರಿದ್ದರು. ಈ ಸಭೆಯಲ್ಲ್ಲಿ ವಲಯ ಮೇಲ್ವಿಚಾರಕರಾದ  ಶರತ್ ಹಾಗೂ ಪುತ್ತೂರು ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ, ಇರ್ದೆ-ಬೆಟ್ಟಂಪಾಡಿಯ ರಾಮಯ್ಯ ರೈ, ಮುಂಡೂರಿನ ಜಯಪ್ರಕಾಶ್ ರೈ, ಆಲಂಕಾರಿನ ಪ್ರಶಾಂತ್ ರೈ ಕುಂಬ್ರದ ರಾಜೀವಿ ರೈ , ಚಾರ್ವಕದ ಅಶೋಕ ಗೌಡ, ಬನ್ನೂರಿನ ಗೋಪಾಲಕೃಷ್ಣ ಭಟ್, ನರಿಮೊಗರಿನ ಮಧುಕರ್, ನೆಲ್ಯಾಡಿಯ ದಯಾಕರ್ ರೈ, ಕೊಳ್ತಿಗೆಯ  ಹಂಸಾವತಿ , ಕಡಬದ ಚಾಕೋ, ಬಲ್ನಾಡಿನ ಸೀತಾರಾಮ ಗೌಡ, ಆರ್ಯಾಪಿನ  ಜಯಂತಿ, ಉಪ್ಪಿನಂಗಡಿಯ  ಕ್ಲೇರಿ ವೇಗಸ್, ಪಾಣಾಜೆಯ ಲಕ್ಷ್ಮಣ ನಾಯ್ಕ್, ಕಾವು ಸಂಘದ ಕೇಶವ ಮೂರ್ತಿ, ಹೊಸಮಠದ ಸೋಮಸುಂದರ್ ಶೆಟ್ಟಿ, ಕೆದಂಬಾಡಿಯ ವಿನಯ್ ಕುಮಾರ್ ರೈ, ಬಿಳಿನೆಲೆಯ ಪ್ರಭಾರ ಸಿಇಓ  ಸುಜಾತ ಉಪಸ್ಥಿತರಿದ್ದರು. ಸವಣೂರಿನ ಸಿಇಓ ಚಂದ್ರಶೇಖರ್ ಸ್ವಾಗತಿಸಿ ಶುಭ ಹಾರೈಸಿದರು, ವಲಯ ಮೇಲ್ವಿಚಾರಕರಾದ ಶ್ರೀ ವಸಂತ ಎಸ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.