HomePage_Banner
HomePage_Banner
HomePage_Banner
HomePage_Banner

ಕೆದಂಬಾಡಿ: ಪ್ರಧಾನಿ ಮೋದಿ ಹುಟ್ಟುಹಬ್ಬ, ಸಾರೆಪುಣಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪ್ರಧಾನಿ ನರೇಂದ್ರ ದಾಮೋದರ ದಾಸ್ ಮೋದಿಯವರ 71  ನೇ ಹುಟ್ಟು ಹಬ್ಬದ ಪ್ರಯುಕ್ತ ಕೆದಂಬಾಡಿ ಗ್ರಾಪಂ ಸದಸ್ಯರು, ಕೆದಂಬಾಡಿ ಬಿಜೆಪಿ ಶಕ್ತಿಕೇಂದ್ರ ಹಾಗೂ ಸ್ಥಳೀಯರಿಂದ ಸಾರೆಪುಣಿ ಬಸ್ಸು ತಂಗುದಾಣದ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಮಾಜಿ ಸಂಸದ ದಿ.ಧನಂಜಯ ಕುಮಾರ್‌ರವರು ಸಾರೆಪುಣಿಯಲ್ಲಿ ನಿರ್ಮಿಸಿರುವ ಬಸ್ಸು ತಂಗುದಾಣದ ಸುತ್ತಮುತ್ತ ಸ್ವಚ್ಛತೆ ಮಾಡಲಾಯಿತು. ಗಿಡಗಂಟಿಗಳನ್ನು ಕಡಿಯಲಾಯಿತು ಅಲ್ಲದೆ ಬಸ್ಸು ತಂಗುದಾಣದ ಮೇಲ್ಭಾಗದಲ್ಲಿ ವಿದ್ಯುತ್ ಲೈನ್‌ಗೆ ತಾಗಿಕೊಂಡಿದ್ದ ಬಳ್ಳಿಗಳನ್ನು ಮರದ ಗೆಲ್ಲುಗಳನ್ನು ಕಡಿದು ತೆಗೆಯಲಾಯಿತು.


ಸ್ವಚ್ಛತಾ ಕಾರ್ಯಕ್ರಮದಲ್ಲಿ ಕೆದಂಬಾಡಿ ಬಿಜೆಪಿ ಶಕ್ತಿಕೇಂದ್ರದ ಪ್ರಮುಖ್ ನಾರಾಯಣ ಪೂಜಾರಿ ಕುರಿಕ್ಕಾರ, ಕೆದಂಬಾಡಿ ಗ್ರಾಪಂ ಉಪಾಧ್ಯಕ್ಷ ಭಾಸ್ಕರ ರೈ ಮಿತ್ರಂಪಾಡಿ, ಸದಸ್ಯರುಗಳಾದ ವಿಠಲ ರೈ ಮಿತ್ತೋಡಿ, ಕೃಷ್ಣ ಇದ್ಯಪೆ, ಜಯಲಕ್ಷ್ಮೀ ಬಲ್ಲಾಳ್, ಸುಜಾತ, ರೇವತಿ, ಮಾಜಿ ಸದಸ್ಯೆ ಪುಷ್ಪಾ ಬೋಳೋಡಿ, ಸ್ಥಳೀಯರಾದ ಯಶೋಧರ ಚೌಟ, ಬೂತ್ ಪ್ರ.ಕಾರ್ಯದರ್ಶಿ ಚಂದ್ರ ಇದ್ಪಾಡಿ ಮತ್ತಿತರರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.