HomePage_Banner
HomePage_Banner
HomePage_Banner
HomePage_Banner

ಮೊಟ್ಟೆತ್ತಡ್ಕ ಕೆಮ್ಮಿಂಜೆ-ಮಣ್ಣಾಪು ಕೊರಗಜ್ಜ ಕ್ಷೇತ್ರದಲ್ಲಿ ಸಂಕ್ರಮಣದ ಪ್ರಯುಕ್ತ ಅಗೇಲು ಸೇವೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮೊಟ್ಟೆತ್ತಡ್ಕ ಮಣ್ಣಾಪು-ಕೆಮ್ಮಿಂಜೆ ಶ್ರೀ ಕೊರಗಜ್ಜ ಮತ್ತು ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಸೆ.16  ರಂದು ರಾತ್ರಿ ಸಂಕ್ರಮಣದ ಪ್ರಯುಕ್ತ ಅಗೇಲು ಸೇವೆ ನಡೆಯಿತು. ನೂರಾರು ಭಕ್ತರು ಈ ಧಾರ್ಮಿಕ ವಿಧಿವಿಧಾನದಲ್ಲಿ ಶ್ರದ್ಧೆಯಿಂದ ಪಾಲ್ಗೊಂಡರು. ಅರ್ಚಕರಾದ ಕೃಷ್ಣ ಭಟ್‌ರವರ ನೇತೃತ್ವದಲ್ಲಿ ಶ್ರೀ ಕ್ಷೇತ್ರದ ಮಧ್ಯಸ್ತ ಗಣೇಶ್ ಪೂಜಾರಿ ಕೆಮ್ಮಿಂಜೆ, ದೈವದ ಪ್ರಧಾನ ಅರ್ಚಕ ಕುಂಡ ಮಣ್ಣಾಪು, ಅಣ್ಣು ಮಣ್ಣಾಪು, ದೈವ ನರ್ತಕರು ಹರೀಶ್ ಕೇಪುರವರ ಸಹಕಾರದಲ್ಲಿ ಸಂಕ್ರಮಣದ ಪ್ರಯುಕ್ತ ಅಗೇಲು ಸೇವೆ ಶ್ರದ್ಧಾಭಕ್ತಿಯಿಂದ ಜರಗಿತು. ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಅಧ್ಯಕ್ಷ ವಿಶ್ವನಾಥ್ ಮಣ್ಣಾಪು, ಕಾರ್ಯದರ್ಶಿ ದಿನೇಶ್ ಎಂ.ಕೆಮ್ಮಿಂಜೆ, ಸಹ-ಕಾರ್ಯದರ್ಶಿ ವಿಶ್ವನಾಥ್ ನಾಯ್ಕ ಅಮ್ಮುಂಜ, ಗೌರವ ಸಲಹೆಗಾರ ಗಂಗಾಧರ ಮಣ್ಣಾಪು, ಪ್ರಮುಖರಾದ ಪಾಲಿಂಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಮಣ್ಣ ನಾಯ್ಕ ಅಮ್ಮುಂಜೆ, ಸದಸ್ಯ ರೇಖನಾಥ್ ರೈ, ದಾಸಪ್ಪ ರೈ ಬಪ್ಪಳಿಗೆ, ಕೆಎಸ್‌ಆರ್‌ಟಿಸಿಯ ನಾರಾಯಣ ನಾಕ್, ಕೇಶವ ಮೊಟ್ಟೆತ್ತಡ್ಕ, ರಾಧಾಕೃಷ್ಣ ಆಚಾರ್ಯ, ಸುಜೀರ್ ಕುಮಾರ್ ಶೆಟ್ಟಿ ನುಳಿಯಾಲು ಸಹಿತ ಶ್ರೀ ಕ್ಷೇತ್ರದ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಆಗಮಿಸಿದ ಭಕ್ತರಿಗೆ ಭೋಜನವನ್ನು ಏರ್ಪಡಿಸಲಾಗಿತ್ತು.


ಪ್ರತೀ ಸಂಕ್ರಮಣದಂದು ಶ್ರೀ ಕ್ಷೇತ್ರದಲ್ಲಿ ಅಗೇಲು ಸೇವೆ ನಡೆಯಲಿರುವುದು ಮಾತ್ರವಲ್ಲದೆ ಆದಿತ್ಯವಾರ, ಮಂಗಳವಾರ ಮತ್ತು ಶುಕ್ರವಾರ ಭಕ್ತಾಧಿಗಳಿಗೆ ಪ್ರಾರ್ಥನೆ ಸಲ್ಲಿಸಲು ಶ್ರೀ ಕ್ಷೇತ್ರದಲ್ಲಿ ಅವಕಾಶವಿದೆ. ಅಗೇಲು ಸೇವೆ ನೀಡುವ ಭಕ್ತಾಧಿಗಳು ಎರಡು ದಿನ ಮುಂಚಿತವಾಗಿ ಶ್ರೀ ಕ್ಷೇತ್ರದಲ್ಲಿ ತಿಳಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ 9591546107, 7349237945,776058071ಕರೆ ಮಾಡಬಹುದು ಎಂದು ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರದ ಆಡಳಿತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಶೀಘ್ರದಲ್ಲೇ ಶಾಶ್ವತ ದೈವ ನರ್ತನ ಚಾವಡಿ, ಪಾಕ ಶಾಲೆ…

ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಇದೀಗ ದಿನೇ ದಿನೇ ಭಕ್ತರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಶ್ರೀ ಕ್ಷೇತ್ರದ ಕೊರಗಜ್ಜನ ಮಹಿಮೆಯ ಅಂತಹುದು. ಶ್ರೀ ಕೊರಗಜ್ಜನನ್ನು ಮನಸಾರೆ ಪ್ರಾರ್ಥಿಸಿದರೆ ಸಕಲ ಸಂಕಷ್ಟ ತೊಲಗುವುದು ಹಾಗೂ ಪುಣ್ಯ ದೊರಕುವುದು ನಿಜ. ಮುಂದಿನ ದಿನಗಳಲ್ಲಿ ಶ್ರೀ ಕ್ಷೇತ್ರದಲ್ಲಿ ಕೊರಗಜ್ಜ ದೈವದ ಶಾಶ್ವತ ದೈವ ನರ್ತನ ಚಾವಡಿ ಹಾಗೂ ಪಾಕ ಶಾಲೆಯನ್ನು ನಿರ್ಮಾಣ ಮಾಡುವ ಬಗ್ಗೆ ಚಿಂತನೆಯಿದ್ದು, ಭಕ್ತಾಧಿಗಳು ಶ್ರೀ ಕ್ಷೇತ್ರದ ಅಭಿವೃದ್ಧಿಗೆ ತನು-ಮನ-ಧನಗಳಿಂದ ಸಹಕರಿಸಿ ದೈವದ ಕೃಪೆಗೆ ಪಾತ್ರರಾಗಬೇಕು ಎಂದು ಶ್ರೀ ಕ್ಷೇತ್ರದ ಪರವಾಗಿ ವಿನಂತಿಸುತ್ತಿದ್ದೇವೆ.
-ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಗೌರವಾಧ್ಯಕ್ಷರು, ಮೊಟ್ಟೆತ್ತಡ್ಕ ಕೆಮ್ಮಿಂಜೆ-ಮಣ್ಣಾಪು ಕೊರಗಜ್ಜ ಕ್ಷೇತ್ರ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.