HomePage_Banner
HomePage_Banner
HomePage_Banner
HomePage_Banner

ಸೆ.19 : ವಿಟ್ಲದಲ್ಲಿ ನೂತನ ಬಟ್ಟೆಮಳಿಗೆ ಝೆನ್ ಟೆಕ್ಸ್ ಟೈಲ್ಸ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವಿಟ್ಲ: ವಿಟ್ಲ-ಪುತ್ತೂರು ರಸ್ತೆಯ ವಿ.ಎಚ್ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ನೂತನ ಬಟ್ಟೆಮಳಿಗೆ ಝೆನ್ ಟೆಕ್ಸ್ ಟೈಲ್ಸ್ ಸೆ.19 ರಂದು  ಶುಭಾರಂಭಗೊಳ್ಳಲಿದೆ. ಸಂಸ್ಥೆಯನ್ನು  ಉಡುಪಿ ಮತ್ತು ಚಿಕ್ಕಮಗಳೂರು ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಕೆಐಸಿ ಪ್ರಾಂಶುಪಾಲ ಬಿ.ಕೆ ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ, ಪುತ್ತೂರು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ.

ಉಳ್ಳಾಲ ಶಾಸಕ ಯು.ಟಿ ಖಾದರ್, ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬು ಮಹಮ್ಮದ್ ಆಲಿ ಫೈಝಿ ಇರ್ಫಾನಿ, ವಿಟ್ಲ ಟೌನ್ ಮಸೀದಿ ಖತೀಬು ಅಬ್ಬಾಸ್ ಮದನಿ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಕೆಥೋಲಿಕ್ ಸಭಾ ಮೊಗರ್ನಾಡು ವಲಯಾಧ್ಯಕ್ಷ ಲೂವಿಸ್ ಮಸ್ಕರೇಂಞಸ್, ವಿಟ್ಲ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, ಅರುಣ್ ಎಂ ವಿಟ್ಲ,  ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ.ಎಸ್ ಮಹಮ್ಮದ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಾರಾಂ ಕೆ.ಬಿ, ಕೆಪಿಸಿಸಿ ಸದಸ್ಯ ಬಿ ರಘು, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಮೋನಪ್ಪ ಗೌಡ, ರೋಟರಿ ಕ್ಲಬ್ ಅಧ್ಯಕ್ಷ ಅಣ್ಣಪ್ಪ ಸಾಸ್ತಾನ, ಜೇಸಿಐ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ವಿಟ್ಲ ವಾಣಿಜ್ಯ ಮತ್ತು ವರ್ತಕರ ಸಂಘದ ಅಧ್ಯಕ್ಷ ಬಾಬು ಕೆ.ವಿ, ಎಂ ಫ್ರೆಂಡ್ಸ್ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ, ಇ.ಕೆ ಸಿದ್ದೀಕ್ ಅಡ್ಡೂರು, ಎಂ.ಬಿ ನಝೀರ್, ಎಸ್‌ಡಿಪಿಐ ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾರ್ಯದರ್ಶಿ ಶಾಕೀರ್ ಅಳಕೆಮಜಲು, ಜೆಡಿಎಸ್ ಮುಖಂಡ ಜಾಫರ್ ಖಾನ್, ರಝಾಕ್ ಕುಕ್ಕಾಜೆ, ಆರ್.ಕೆ ಅಬ್ದುಲ್ಲ ಹಾಜಿ, ವಿ.ಎಚ್ ಅಶ್ರಫ್, ರಹಿಮಾನ್ ಮಠ, ಸಿದ್ದೀಕ್ ಉಚ್ಚಿಲ ಮೊದಲಾದವರು ಭಾಗವಹಿಸಲಿದ್ದಾರೆ.

ಸಂಸ್ಥೆಯಲ್ಲಿ  ಅತ್ಯುತ್ತಮ ಗುಣಮಟ್ಟ, ವಿಶಾಲ ಸಂಗ್ರಹ, ದೀರ್ಘ ಬಾಳಿಕೆ, ವಿನ್ಯಾಸಗಳನ್ನೂಳಗೊಂಡ ಇಲ್ಲಿ ಪುರುಷರ, ಮಹಿಳೆಯರ, ಮಕ್ಕಳ ವಿವಿಧ ಬಟ್ಟೆಗಳು ಮಿತದರದಲ್ಲಿ ದೊರೆಯಲಿದೆ.

ಶುಭಾರಂಭದ ಪ್ರಯುಕ್ತ‌ಸಂಸ್ಥೆ ವಿಶೇಷ ಆಫರ್ ಇಡಲಾಗಿದ್ದು, ಸೆ. 30 ರ ವರೆಗೆ 5 ಪ್ಲಾಝೋ ಪ್ಯಾಂಟ್ ಗೆ ರೂ. 399, 5 ಲೇಡಿಸ್ ಟಾಪ್ ಗೆ ರೂ. 499, 5 ಲೆಗ್ಗಿನ್ಸ್ ಗೆ ರೂ. 499, 5 ಲೇಡಿಸ್ ಶಾಲ್ ಗೆ ರೂ. 199 ಗೆ   ದೊರೆಯಲಿದೆ.

ಸಂಸ್ಥೆಯ ಉದ್ಘಾಟನೆಯ ಆಮಂತ್ರಣ ಪತ್ರಿಕೆಯನ್ನು ಸ್ಟೇಟಸ್ ಹಾಕಿದವರಿಗೂ ವಿಶೇಷ ಬಹುಮಾನ ಘೋಷಿಸಲಾಗಿದೆ. 50  ೦ಕ್ಕಿಂತ ಜನರು ಹೆಚ್ಚು ವೀಕ್ಷಿಸಿದ ಸ್ಟೇಟಸ್ ಸ್ಕ್ರೀನ್ ಶಾಟ್ ಅನ್ನು 9844903313 ಸಂಖ್ಯೆಗೆ ವಾಟ್ಸಾಪ್ ಕಳುಹಿಸಬೇಕು. ಸೆ. 26 ರಂದು ಡ್ರಾ ನಡೆಯಲಿದ್ದು, ವಿಜೇತರಿಗೆ ರೂ. 3,313 ರೂಪಾಯಿ ಮೌಲ್ಯದ  ಫ್ಯಾಮಿಲಿ ಪ್ಯಾಕ್ ನೀಡಲಾಗುತ್ತದೆ ಎಂದು ಸಂಸ್ಥೆಯ ವ್ಯವಸ್ಥಾಪಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.