HomePage_Banner
HomePage_Banner
HomePage_Banner
HomePage_Banner

ಉಪ್ಪಿನಂಗಡಿ ನಾಗರಿಕ ಹಿತ ರಕ್ಷಣಾ ವೇದಿಕೆ ವತಿಯಿಂದ ದೆಹಲಿಯ ಪೊಲೀಸ್ ಅಧಿಕಾರಿ ರಾಬಿಯಾ ಸೈಫಿಯ ಅತ್ಯಾಚಾರ, ಕೊಲೆ ಖಂಡಿಸಿ ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

೦ ಧರ್ಮದ ಆಧಾರ ಮೇಲೆ ನ್ಯಾಯ-ಅನ್ಯಾಯವನ್ನು ಅಳೆಯುವುದು ಈ ದೇಶದ ದುರಂತ-ನಝೀರ್ ಅಝ್ಹರಿ.

೦ ದೇಶದಲ್ಲಿ ಅತ್ಯಾಚಾರ, ಕೊಲೆ ಪ್ರಕರಣಗಳು ಮುಂದುವರಿಯುತ್ತಲೇ ಇದೆ-ಸವಾದ್ ಕಲ್ಲರ್ಪೆ

೦ ಎಲ್ಲರೂ ಮೌನಕ್ಕೆ ಶರಣಾಗಿದ್ದು ಜನರಲ್ಲಿ ಆತಂಕ, ಸಂಶಯ ಮೂಡುವಂತಾಗಿದೆ-ಮುಸ್ತಫಾ ಕೆಂಪಿ

ಉಪ್ಪಿನಂಗಡಿ: ದೆಹಲಿಯ ಮಹಿಳಾ ಪೊಲೀಸ್ ಅಧಿಕಾರಿ ರಾಬಿಯಾ ಸೈಫಿ ಅವರ ಅತ್ಯಾಚಾರ ಹಾಗೂ ಬರ್ಬರ ಕೊಲೆಯನ್ನು ಖಂಡಿಸಿ ಉಪ್ಪಿನಂಗಡಿ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಸೆ. 17 ರಂದು ಉಪ್ಪಿನಂಗಡಿಯಲ್ಲಿ ಪ್ರತಿಭಟನೆ ನಡೆಯಿತು. ಇಲ್ಲಿನ ಮಾಲಿಕ್ ದೀನಾರ್ ಜುಮಾ ಮಸೀದಿಯಿಂದ ಜಾಥಾದ ಮೂಲಕ ಬಂದ ಪ್ರತಿಭಟನಕಾರರು ಬಸ್ ನಿಲ್ದಾಣ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾಲಿಕ್ ದೀನಾರ್ ಜುಮಾ ಮಸೀದಿ ಖತೀಬ್ ನಝೀರ್ ಅಝ್‌ಹ್ಹರಿ ಮಾತನಾಡಿ ನಮ್ಮ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ರಾಬಿಯಾ ಸೈಫಿಯನ್ನು ಅತ್ಯಾಚಾರ ನಡೆಸಿ, ಬರ್ಬರವಾಗಿ ಕೊಲೆ ಮಾಡಿದ್ದರೂ, ಯಾರೂ ಇದರ ವಿರುದ್ಧ ಧ್ವನಿಯೆತ್ತಿಲ್ಲ. ಈ ಘಟನೆಯೂ ಹತ್ರಸ್, ಉನ್ನಾವೋ, ನಿರ್ಭಯಾ ಪ್ರಕರಣಗಳ ಹಾಗೆ ಚರ್ಚೆಗೂ ಬಂದಿಲ್ಲ. ಘಟನೆಯೊಂದು ನಡೆದಾಗ ಧರ್ಮದ ಆಧಾರ ಮೇಲೆ ನ್ಯಾಯ-ಅನ್ಯಾಯವನ್ನು ಅಳೆಯೋದು ಈ ದೇಶದ ದುರಂತ. ರಾಬಿಯಾಳನ್ನು ಮುಸ್ಲಿಂ ಎಂದು ಧರ್ಮದ ಆಧಾರದಲ್ಲಿ ನೋಡಬೇಡಿ. ಆಕೆಯೂ ಕೂಡ ಒಬ್ಬ ಹೆಣ್ಣು ಮಗಳು. ಭಾರತೀಯ ಪ್ರಜೆ ಎಂಬುದನ್ನು ನೋಡಿ. ಈ ಘಟನೆಗೆ ಕಾರಣರಾದವರಿಗೆ ಶಿಕ್ಷೆಯಾಗಲು ಹಾಗೂ ಅವಳ ಸಾವಿಗೆ ನ್ಯಾಯ ದೊರಕಿಸಿಕೊಡಲು ನಾವೆಲ್ಲಾ ಒಟ್ಟು ಸೇರಿ ಪ್ರಯತ್ನಿಸೋಣ. ಅಪಘಾನಿಸ್ತಾನದಲ್ಲಿರುವ ಮಹಿಳೆಯರ ಬಗ್ಗೆ ಟಿವಿ, ಮಾಧ್ಯಮಗಳಲ್ಲಿ ವಾರಗಟ್ಟಲೆ ಚರ್ಚೆಯಾಗುತ್ತಿರುವಾಗ ರಾಬಿಯಾ ಸೈಫಿಯ ಅತ್ಯಾಚಾರ ಹಾಗೂ ಸಾವಿನ ಬಗ್ಗೆ ಚರ್ಚೆಯಾಗದಿರುವುದು ಖೇದವಾಗುತ್ತದೆ ಎಂದರು.


ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ  ಮಾತನಾಡಿ ಬಡತನ, ನಿರುದ್ಯೋಗ, ಶಿಕ್ಷಣ ನೀತಿ ಕೇಸರಿಕರಣ ಹೀಗೆ ದೇಶದಲ್ಲಿ ಹತ್ತು ಹಲವು ಜ್ವಲಂತ ಸಮಸ್ಯೆಗಳಿವೆ. ಇದರೊಂದಿಗೆ ಅತ್ಯಾಚಾರ, ಕೊಲೆ ಪ್ರಕರಣಗಳು ಮುಂದುವರಿದಿದೆ. ಆದ್ದರಿಂದ ನಮ್ಮ ದೇಶ ಎತ್ತ ಸಾಗುತ್ತಿದೆ ಎಂಬ ಬಗ್ಗೆ ನಾವೆಲ್ಲಾ ಯೋಚಿಸಬೇಕಿದೆ. ನಿರ್ಭಯಾ ಪ್ರಕರಣಗಳಿಗಿಂತಲೂ ಭೀಕರವಾದ ಪರಿಸ್ಥಿತಿ ರಾಭಿಯಾ ಸೈಫಿ ಮೇಲೆ ಆಗಿದ್ದರೂ, ಅವಳ ಸಾವಿಗೆ ನ್ಯಾಯ ದೊರಕಿಸಿಕೊಡಲು ಧ್ವನಿಯಾಗುವವರು ಯಾರೂ
ಇಲ್ಲದಿರುವುದು ನಮ್ಮ ದುರಂತ. ಪ್ರಧಾನಿ ಮೋದಿ ಹಾಗೂ ಸಚಿವ ಅಮಿತ್ ಶಾ ಅವರಿಗೆ ಇಂತಹ ಪ್ರಕರಣಗಳು ಸರ್ವೇ ಸಾಮಾನ್ಯವಾದಂತಿದ್ದು, ಆದ್ದರಿಂದ ಅವರು ಈ ಬಗ್ಗೆ ಮೌನವಾಗಿದ್ದಾರೆ. ನಮ್ಮ ದೇಶದಲ್ಲಿ ಓರ್ವ ಪೊಲೀಸ್ ಅಧಿಕಾರಿಗೆ ಈ ಸ್ಥಿತಿ ಬಂದರೆ ಇನ್ನು ಬೇರೆಯವರ ಸ್ಥಿತಿ ಏನಾಗಬೇಡ? ರಾಬಿಯಾ ಮುಸ್ಲಿಂ ಹೆಣ್ಣಾದ ಕಾರಣ ಅಕೆಯ ಸಾವನ್ನು ಕಡೆಗಣಿಸಲಾಗಿದ್ದರೆ, ಇನ್ನಾವೋ ಪ್ರಕರಣದಲ್ಲಿ ದಲಿತ ಯುವತಿಯೋರ್ವಳ ಮೇಲೆ ಅತ್ಯಾಚಾರ ನಡೆದಾಗ ಇದರ ಆರೋಪಿ ಬಿಜೆಪಿ. ಶಾಸಕನನ್ನು ರಕ್ಷಿಸುವುದಕ್ಕೋಸ್ಕರ ಸುಮಾರು ಎರಡು ತಿಂಗಳ ಕಾಲ ಅವರ ಕಡೆಯವರಿಂದ ಅತ್ಯಾಚಾರದ ಬಗ್ಗೆ ದೂರನ್ನೇ ತೆಗೆದುಕೊಳ್ಳಲಿಲ್ಲ. ಇದು ನಮ್ಮ ಭಾರ ತದ ಇಂದಿನ ಸ್ಥಿತಿ. ಇದನ್ನು ಎಲ್ಲರೂ ಅರ್ಥೈಸಿಕೊಂಡು, ಇದರ ವಿರುದ್ಧ ಎಲ್ಲರೂ ಒಗ್ಗಟ್ಟಾಗಬೇಕು ಎಂದರು.

ಉಪ್ಪಿನಂಗಡಿ ನಾಗರಿಕ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ  ಮಾತನಾಡಿ ಪೊಲೀಸ್ ಅಧಿಕಾರಿಯನ್ನು ಅತ್ಯಾಚಾರ ಎಸಗಿ ಬರ್ಬರವಾಗಿ ಕೊಲೆ ಮಾಡಿದ್ದರೂ ರಾಬಿಯಾ ಸೈಫಿ ಮುಸ್ಲಿಂ ಎಂಬ ಕಾರಣಕ್ಕಾಗಿ ಮಾಧ್ಯಮದಿಂದ ಹಿಡಿದು ಎಲ್ಲರೂ ಮೌನಕ್ಕೆ ಶರಣಾಗಿದ್ದು ಜನರಲ್ಲಿ ಆತಂಕ, ಸಂಶಯ ಮೂಡುವಂತಾಗಿದೆ. ಈ ರೀತಿಯಾಗಿ ಕೋಮುವಾದ, ಕೋಮು ದ್ರುವೀಕರಣದ ವಿರುದ್ಧ, ಸಂವಿಧಾನ ವಿರೋಧಿ ವಿರುದ್ಧ ಉಪ್ಪಿನಂಗಡಿಯ ಜನರು ಜೀವ ಮಾತ್ರ ಇರುವುದಲ್ಲ, ನಮ್ಮಲ್ಲಿ ಜೀವಂತಿಕೆಯೂ ಇದೆ ಎಂದ ಅವರು ಇಂತಹ ಸಂದರ್ಭದಲ್ಲಿ ಸಮಾನ ಮನಸ್ಕರಿಂದ ಕೂಡಿದ ನಾಗರಿಕ ಹಿತ ರಕ್ಷಣಾ ವೇದಿಕೆ ಯಾವತ್ತೂ ಎದ್ದು ನಿಲ್ಲುತ್ತದೆ ಎಂದರು. ನಾಗರೀಕ ಹಿತ ರಕ್ಷಣಾ ವೇದಿಕೆಯ ಜಲೀಲ್ ಮುಕ್ರಿ, ನಝೀರ್ ಮಠ ಮಾತನಾಡಿದರು.

ಉಪ್ಪಿನಂಗಡಿ ನಾಗರಿಕ ಹಿತ ರಕ್ಷಣಾ ವೇದಿಕೆ ಸಂಚಾಲಕ ಹಮೀದ್ ಮೆಜೆಸ್ಟಿಕ್ ವಂದಿಸಿದರು. ಝಕರಿಯಾ ಕೊಡಿಪ್ಪಾಡಿ ಕಾರ್‍ಯಕ್ರಮ ನಿರೂಪಿಸಿದರು. ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಅಮೀನ್ ಅಹ್ಸನ್, ಯು.ಟಿ. ತೌಸೀಫ್, ಹಾರೂನ್ ರಶೀದ್ ಅಗ್ನಾಡಿ, ಇಸ್ಮಾಯಿಲ್ ತಂಙಳ್, ಶಬ್ಬೀರ್ ಕೆಂಪಿ, ಯೂಸುಫ್ ಪೆದಮಲೆ, ಯು.ಟಿ. ಫಯಾಝ್ ಅಹಮದ್, ಇಬ್ರಾಹಿಂ ಆಚಿ ಕೆಂಪಿ, ಮಹಮ್ಮದ್ ಕೆಂಪಿ, ಅಬ್ದುಲ್ ರಶೀದ್ ಮಠ, ಇಸ್ಮಾಯಿಲ್ ಇಕ್ಬಾಲ್, ಸಿದ್ದಿಕ್ ಕೆಂಪಿ, ಯು.ಟಿ. ಇರ್ಷಾದ್, ಅಬ್ದುಲ್ ರಹಿಮಾನ್ ಯುನಿಕ್, ಹನೀಫ್ ಪೆರ್ನೆ, ಅಸ್ಕರ್ ಆಲಿ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.