HomePage_Banner
HomePage_Banner
HomePage_Banner
HomePage_Banner

ಪ್ರಗತಿಪರ ಕೃಷಿಕ, ಉದ್ಯಮಿ ಕಿನಾರ ಸಂಕಪ್ಪ ಶೆಟ್ಟಿಯವರಿಗೆ ಶ್ರದ್ಧಾಂಜಲಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕೃಷಿಯಲ್ಲಿ ಖುಷಿಯನ್ನು ಕಂಡ ಸಂಕಪ್ಪ ಶೆಟ್ಟಿ- ರಾಕೇಶ್ ರೈ ಕೆಡೆಂಜಿ

ಪುತ್ತೂರು: ಸೆ. 7 ರಂದು ನಿಧನರಾದ ಸವಣೂರಿನ ಕಿನಾರ ನಿವಾಸಿ, ಉದ್ಯಮಿ, ಪ್ರಗತಿಪರ ಕೃಷಿಕ ಸಂಕಪ್ಪ ಶೆಟ್ಟಿ ಕಿನಾರರವರ ಉತ್ತರ ಕ್ರಿಯೆಯು ಸೆ. 17 ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಜರಗಿತು.

ಸಂಕಪ್ಪ ಶೆಟ್ಟಿ ಕಿನಾರ

ಈ ಸಂದರ್ಭದಲ್ಲಿ ಏರ್ಪಡಿಸಲಾದ ಶ್ರದ್ಧಾಂಜಲಿ ಕಾರ‍್ಯಕ್ರಮದಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಅಕ್ರಮ-ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿರವರು ಮಾತನಾಡಿ ಚಿಪ್ಪಾರು ನಡುವಳಿಚ್ಚಿಲ್‌ನಲ್ಲಿ ತನ್ನ ಬಾಲ್ಯವನ್ನು ಕಳೆದು, ಬಳಿಕ ಪುತ್ತೂರಿಗೆ ಆಗಮಿಸಿದ ಸಂಕಪ್ಪ ಶೆಟ್ಟಿಯವರು ಪುತ್ತೂರಿನಲ್ಲಿ ಉದ್ಯಮವನ್ನು ಸ್ಥಾಪಿಸಿ, ಯಶಸ್ಸು ಕಂಡರು, ಬಳಿಕ ಸವಣೂರಿನ ಕುಮಾರಧಾರ ನದಿ ತಟದ ಕಿನಾರ ಎಂಬಲ್ಲಿ ಕೃಷಿ ಜಾಗವನ್ನು ಖರೀದಿಸಿ, ಅಲ್ಲಿ ಕಠಿಣ ದುಡಿಮೆಯ ಮೂಲಕ ವಿವಿಧ ಬೆಳೆಗಳ ಕೃಷಿಕನಾಗಿ ಕೃಷಿಯ ಸುಂದರವಾದ ಬದುಕು ಕಟ್ಟಿದರು. ಕೃಷಿಯಲ್ಲಿ ಅತ್ಯಂತ ಖುಷಿಯನ್ನು ಕಂಡ ಸಂಕಪ್ಪ ಶೆಟ್ಟಿರವರು ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲೂ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಜೊತೆಗೆ ತನ್ನ ಮಕ್ಕಳಿಗೂ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ನೀಡಿ, ಸಮಾಜದಲ್ಲಿ ಗೌರವಯುತವಾದ ಬದುಕು ಸಾಗಿಸುವಲ್ಲಿ ಪ್ರೇರಣೆಯಾದರು. ಸಂಕಪ್ಪ ಶೆಟ್ಟಿರವರ ಜೀವನ ನಮ್ಮ ಸಮಾಜಕ್ಕೆ ಮಾದರಿ ಎಂದು ಹೇಳಿದರು.


ಸಂಕಪ್ಪ ಶೆಟ್ಟಿಯವರ ಪತ್ನಿ ವಾರಿಜಾ ಶೆಟ್ಟಿ, ಪುತ್ರರಾದ ಪ್ರಗತಿಪರ ಕೃಷಿಕರಾದ ಸತೀಶ್ ಶೆಟ್ಟಿ ಕಿನಾರ, ಪುತ್ತೂರಿನ ಉದ್ಯಮಿ ಶಿವಪ್ರಸಾದ್ ಶೆಟ್ಟಿ ಕಿನಾರ, ಪುತ್ರಿಯರಾದ ಜಯಶ್ರೀ ಭಂಡಾರಿ, ವಸಂತಾ ಶೆಟ್ಟಿ, ಉಷಾ ಆಳ್ವ, ಅಳಿಯಂದಿರಾದ ಸೀತಾರಾಮ ಭಂಡಾರಿ, ಪ್ರಕಾಶ್ ಶೆಟ್ಟಿ, ಸುರೇಶ್ ಆಳ್ವ, ಸೊಸೆಯಂದಿರಾದ ವನಿತಾ ಶೆಟ್ಟಿ, ಸುಜಾತ ಶೆಟ್ಟಿ, ಮೊಮ್ಮಕ್ಕಳಾದ ರಶ್ಮಿ ಹೆಗ್ಡೆ- ಪುಷ್ಪರಾಜ್ ಹೆಗ್ಡೆ, ಸನಿಹ ಹೆಗ್ಡೆ-ಅನುದೀಪ್ ಹೆಗ್ಡೆ, ಪವಿತ್ರ ಶೆಟ್ಟಿ- ಮುಯೂರ್ ಶೆಟ್ಟಿ, ವರ್ಷ ಶೆಟ್ಟಿ-ಆದರ್ಶ್ ಶೆಟ್ಟಿ, ರಕ್ಷ ಭಂಡಾರಿ, ರವಿನಂದನ್ ಶೆಟ್ಟಿ, ಸಹನ್ ಆಳ್ವ, ವರುಣ್ ಶೆಟ್ಟಿ, ಶ್ರವಣ್ ಕುಮಾರ್ ಶೆಟ್ಟಿ, ಶಾಯರಿ ಶೆಟ್ಟಿ, ಮರಿ ಮಕ್ಕಳಾದ ಅಥರ್ವ್, ಅತೀಕ್ಷ್, ನಿರ್ವಾಣ್, ವಿವಾನ್ ಹಾಗೂ ದಿಯಾನ್ ಮತ್ತು ಕುಟುಂಬಸ್ಥರು ಹಾಗೂ ಸಹಕಾರ, ಸಾಮಾಜಿಕ, ಧಾರ್ಮಿಕ, ರಾಜಕೀಯ ಮುಖಂಡರುಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು, ಉದ್ಯಮಿಗಳು, ಊರ-ಪರವೂರ ಹಿತೈಷಿಗಳು, ಬಂಧುಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.