HomePage_Banner
HomePage_Banner
HomePage_Banner
HomePage_Banner

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ವಿಶ್ವಕರ್ಮ ಜಯಂತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು; ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ವಿಶ್ವಕರ್ಮ ಜಯಂತಿ ಆಚರಣೆಯು ಸೆ.೧೮ ಮಿನಿ ವಿಧಾನ ಸೌಧದಲ್ಲಿರುವ ತಹಶೀಲ್ದಾರ್ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮದ ಪ್ರಾರಂಭದಲ್ಲಿ ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್ ದೀಪ ಪ್ರಜ್ವಲನೆ ಮಾಡಿದರು. ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾಗಿರುವ ತಹಶೀಲ್ದಾರ್ ರಮೇಶ್ ಬಾಬು ವಿಶ್ವಕರ್ಮ ದೇವರ ಭಾವಚಿತ್ರಕ್ಕೆ ಆರತಿ ಬೆಳಗಿದರು. ಬಳಿಕ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್‌ರವರು, ಬ್ರಹ್ಮಾಂಡದ ಸೃಷ್ಠಿಕರ್ತರಾಗಿರುವ ವಿಶ್ವಕರ್ಮ ದೇವರು ಜಗತ್ತಿನ ಪ್ರಥಮ ಇಂಜಿನಿಯರ್ ಆಗಿದ್ದಾರೆ. ವೇದ, ಉಪನಿಷತ್ತುಗಳಲ್ಲಿ ಆರಾಧನೆಯ ಬಗ್ಗೆ ಉಲ್ಲೇಖವಿದೆ. ಇಂದಿಗೂ ವಿಶ್ವಕರ್ಮ ಸಮಾಜದವರು ಆರಾಧ್ಯ ದೇವರಾಗಿ ಪೂಜಿಸುತ್ತಿದ್ದು ಇಂದಿಗೂ ವಿಶ್ವಕರ್ಮ ಸಮಾಜದವರು ಹಲವು ಹೊಸತನಗಳ ಸೃಷ್ಠಿಯಲ್ಲಿ ನಿಪುಣತೆಯನ್ನು ಹೊಂದಿರುತ್ತಾರೆ. ಜಗತ್ತು ತಂತ್ರಜ್ಞಾನವನ್ನು ಕಾಣುವ ಮೊದಲೇ ಅತ್ಯಬ್ದುತವಾದ ಕಟ್ಟಡ, ನಗರಗಳ ನಿರ್ಮಾಣದಲ್ಲಿ ಕುಶಲಕರ್ಮಿಗಳ ಕೈಚಲಕ ಪ್ರಾಮುಖ್ಯವಾಗಿದೆ. ಹೀಗಾಗಿ ವಿಶ್ವಕರ್ಮರು ಕೇವಲ ಭಾರತಕ್ಕೆ ಸೀಮಿತವಾಗಿಲ್ಲ. ಇಡೀ ಜಗತ್ತಿಗೆ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುತ್ತಾರೆ. ಇದೇ ಮೂಲ ಉದ್ದೇಶದಿಂದ ರಾಜ್ಯ ಸರಕಾರ ವಿಶ್ವಕರ್ಮ ಜಯಂತಿಯನ್ನು ಆಚರಿಸಲು ಮುಂದಾಗಿದೆ. ಆ ಮೂಲಕ ಜಗತ್ತಿನ ಎಲ್ಲಾ ಕುಶಲಕರ್ಮಿಗಳನ್ನು ಗುರುತಿಸಿ ಗೌರವಿಸುವ ಜಯಂತಿಯಾಗಿದೆ ಎಂದರು.


ಮುಖ್ಯ ಅತಿಥಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಲದ ತಾಲೂಕು ಅಧ್ಯಕ್ಷ ಎಂ.ಎಸ್ ರಾವ್ ಮಾತನಾಡಿ, ವಿಶ್ವಕರ್ಮ ದೇವರು ಒಂದೇ ಜಾತಿಗೆ ಸೀಮಿತವಾಗಿರದೆ. ಎಲ್ಲಾ ಜಾತಿಯವರಿಗೂ, ದೇಶದ ಏಕತೆಯ ಸಂಕೇತವಾಗಿದ್ದಾರೆ. ಆದಿ ಅಂತ್ಯವಿಲ್ಲದ ವಿಶ್ವಕರ್ಮ ದೇವರ ಜಯಂತಿಯಾಗಿಯೇ ಉಳಿಯದೇ ವಿಶ್ವಕರ್ಮ ಆರಾಧನೆಯಾಗಬೇಕು ಎಂದು ಹೇಳಿದರು.

ಡಿವೈಎಸ್ಪಿ ಡಾ.ಗಾನಾ ಪಿ ಕುಮಾರ್, ಗ್ರೇಡ್-೨ ತಹಶೀಲ್ದಾರ್ ಲೋಕೇಶ್, ಪೌರಾಯುಕ್ತ ಮಧು ಎಸ್ ಮನೋಹರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಕಚೇರಿಯ ದಯಾನಂದ ಸ್ವಾಗತಿಸಿದರು. ಚುನಾವಣಾ ಶಾಖೆಯ ನಾಗೇಶ್ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಉಪತಹಶೀಲ್ದಾರ್ ಸುಲೋಚನಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.