HomePage_Banner
HomePage_Banner
HomePage_Banner
HomePage_Banner

ಕಾವು ತುಡರ್ ಯುವಕ ಮಂಡಲದಿಂದ ಆಜಾದಿ ಕಾ ಅಮೃತ ಮಹೋತ್ಸವ ಫಿಟ್ ಇಂಡಿಯಾ ಫ್ರೀಡಂ ರನ್-ವಿಕಾಸ್ ದಿವಾಸ್ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವರದಿ: ಸುನೀಲ್ ಎನ್ ಕಾವು

ಜಾಥಾದಲ್ಲಿ ಕಾಲ್ನಡಿಗೆಯಲ್ಲಿಯೇ ಸಾಗಿದ ಎ.ಸಿ, ಎಸ್.ಐ:
ಕಾವುನಿಂದ ನನ್ಯ ಜನಮಂಗಲದವರೆಗೆ ಸಾಗಿದ ಫಿಟ್ ಇಂಡಿಯಾ ಫ್ರೀಡಂ ರನ್ ಜಾಥಾದಲ್ಲಿ ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್ ಮತ್ತು ಪೊಲೀಸ್ ಉಪನಿರೀಕ್ಷಕ ಉದಯರವಿ, ಜಿಲ್ಲಾ ಯುವ ಅಧಿಕಾರಿ ರಘುವೀರ್ ಎಸ್‌ರವರು ಯುವಕ ಮಂಡಲದ ಸದಸ್ಯರ ಜತೆ ಕಾಲ್ನಡಿಗೆಯಲ್ಲಿ ಬಂದು ಯುವಕರ ಉತ್ಸಾಹಕ್ಕೆ ಮತ್ತಷ್ಟು ಸ್ಫೂರ್ತಿ ನೀಡಿದರು.

ತುಡರ್ ಮಹಿಳಾ ಮಂಡಲದ ಉದ್ಘಾಟನೆ:
ದಶಮಾನೋತ್ಸವ ಪೂರೈಸಿರುವ ಕಾವು ತುಡರ್ ಯುವಕ ಮಂಡಲವು ತನ್ನ ೧೧ನೇ ವರ್ಷದಲ್ಲಿ ತನ್ನ ಯುವಕ ಮಂಡಲದ ಅಧೀನದಲ್ಲಿ ಮಹಿಳಾ ಸಂಘವನ್ನು ರಚಿಸಿ ತುಡರ್ ಮಹಿಳಾ ಮಂಡಲ ಹೆಸರಿನಲ್ಲಿ ಉದ್ಘಾಟನೆ ಮಾಡಲಾಯಿತು. ಮಹಿಳಾ ಮಂಡಲದ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ವಿಜಯ ಹೊನ್ನಪ್ಪ ಪೂಜಾರಿ ಪಿಲಿಪಂಜರ ಮತ್ತು ಕಾರ್ಯದರ್ಶಿ ತುಳಸಿ ಪುರುಷೋತ್ತಮ ಆಚಾರ್ಯ ನನ್ಯರವರಿಗೆ ಗ್ರಾ.ಪಂ ಅಧ್ಯಕ್ಷೆ ಸೌಮ್ಯರವರು ಹೂ ನೀಡಿ, ಶಾಲು ಹಾಕಿ ಗೌರವಿಸಿ, ಸಂಘದ ನಿರ್ಣಯ ಪುಸ್ತಕ ನೀಡಿ ಜವಾಬ್ದಾರಿ ವಹಿಸಿದರು.

ಕಾವು: ಭಾರತ ಸರಕಾರದ ಯುವಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು, ದ.ಕ.ಜಿಲ್ಲಾಡಳಿತ, ದ.ಕ ಜಿಲ್ಲಾ ಪಂಚಾಯತ್ ಇದರ ಸಹಯೋಗದೊಂದಿಗೆ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದ ವತಿಯಿಂದ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಫಿಟ್ ಇಂಡಿಯಾ ಫ್ರೀಡಂ ರನ್ ಜಾಥಾ ಮತ್ತು ವಿಕಾಸ್ ದಿವಾಸ್ ಕಾರ್ಯಕ್ರಮವು ಸೆ.೧೮ರಂದು ನನ್ಯ ಜನಮಂಗಲ ಸಭಾಭವನದಲ್ಲಿ ನಡೆಯಿತು.

ಫ್ರೀಡಂ ರನ್ ಜಾಥಾ:
ಕಾವು ಪಂಚವಟಿ ಬಳಿಯಿಂದ ಹೊರಟ ಫಿಟ್ ಇಂಡಿಯಾ ಫ್ರೀಡಂ ರನ್ ಜಾಥಾಕ್ಕೆ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್‌ರವರು ತುಡರ್ ಯುವಕ ಮಂಡಲದ ಅಧ್ಯಕ್ಷ ಸುನೀಲ್ ನಿಧಿಮುಂಡರವರಿಗೆ ಧ್ವಜ ಹಸ್ತಾಂತರಿಸಿ ಚಾಲನೆ ನೀಡಿದರು. ಜಾಥಾದ ಮುಂಭಾಗದಲ್ಲಿ ತುಡರ್ ಯುವಕ ಮಂಡಲದ ಸದಸ್ಯ ಯತೀಶ್ ರೈ ಮದ್ಲರವರು ರಾಷ್ಟ್ರಧ್ವಜವನ್ನು ಹಿಡಿದು ಮುಂದೆ ಸಾಗಿದರು. ಸದಸ್ಯರಾದ ಮೋಹಿತ್‌ರಾಜ್ ಮತ್ತು ಹರ್ಷಿತ್‌ರವರು ಫಿಟ್ ಇಂಡಿಯಾ ಫ್ರೀಡಂ ರನ್‌ನ ಬ್ಯಾನರ್ ಹಿಡಿದು ಸಾಗಿದರು. ಯುವಕ ಮಂಡಲದ ಸದಸ್ಯರು ಸಮವಸ್ತ್ರ ಧರಿಸಿ ಜೈಕಾರ ಕೂಗಿ ಸಾಲು ಸಾಲಾಗಿ ಜಾಥಾದಲ್ಲಿ ಸಾಗಿದರು. ಜಾಥಾದಲ್ಲಿ ತುಡರ್ ಮಹಿಳಾ ಮಂಡಲದ ಸದಸ್ಯರು ಸೇರಿದಂತೆ ಊರಿನ ಅನೇಕರು ಭಾಗವಹಿಸಿದ್ದರು. ನನ್ಯ ಜನಮಂಗಲ ಸಭಾಭವನದಲ್ಲಿ ಜಾಥಾ ಸಂಪನ್ನಗೊಂಡಿತು.

ವಿಕಾಸ್ ದಿವಾಸ್ ಕಾರ್ಯಕ್ರಮ:
ಜಾಥಾ ಸಂಪನ್ನಗೊಂಡ ಬಳಿಕ ಜನಮಂಗಲ ಸಭಾಭವನದಲ್ಲಿ ವಿಕಾಸ್ ದಿವಾಸ್ ಕಾರ್ಯಕ್ರಮ ನಡೆಯಿತು.

ಯುವ ಜನತೆಯಿಂದ ಸೂಪರ್ ಪವರ್ ದೇಶ ಸಾಧ್ಯ-ಡಾ. ಯತೀಶ್ ಉಳ್ಳಾಲ್
ವಿಕಾಸ್ ದಿವಾಸ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪುತ್ತೂರು ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್‌ರವರು ಮಾತನಾಡಿ ಯುವದೇಶವಾಗಿರುವ ನಮ್ಮ ಭಾರತದಲ್ಲಿ ಯುವ ಸಮುದಾಯದಿಂದ ಸೂಪರ್ ಪವರ್ ದೇಶ ನಿರ್ಮಾಣ ಸಾಧ್ಯವಿದೆ, ತುಡರ್ ಯುವಕ ಸಂಘವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಫಿಟ್ ಇಂಡಿಯಾ ಪ್ರೀಡಂ ರನ್ ಜಾಥಾದ ಮೂಲಕ ವಿಭಿನ್ನವಾಗಿ ಆಚರಿಸಿ ಮಾದರಿಯಾಗಿದ್ದಾರೆ, ಮುಖ್ಯವಾಗಿ ತುಡರ್ ಸಂಘದ ಬಹಳ ಅಚ್ಚುಕಟ್ಟಾದ ವ್ಯವಸ್ಥೆ, ಸದಸ್ಯರ ಶಿಸ್ತಿನ ಕಾರ್ಯವನ್ನು ನಾನು ಅಭಿನಂದಿಸುತ್ತೇನೆ ಇಂತಹ ಯುವಕರಿಂದ ಜಾಗೃತ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಸಂಪ್ಯ ಗ್ರಾಮಾಂತರ ಠಾಣೆಯ ಉಪನಿರೀಕ್ಷಕ ಉದಯರವಿ ಎಂ.ವೈಯವರು ಮಾತನಾಡಿ ನಾನು ಕಾರ್ಯಕ್ರಮಕ್ಕೆ ಬರುವ ಮೊದಲೇ ತುಡರ್ ಯುವಕ ಮಂಡಲದ ಅನೇಕ ಸಮಾಜ ಕಾರ್ಯವನ್ನು ನೋಡಿ ಸಂತಸನಾಗಿದ್ದೆ, ಕರ್ತವ್ಯದ ನೆಲೆಯಲ್ಲಿ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿರುವಾಗ ಮದ್ಲ,ನನ್ಯ ಪ್ರದೇಶದಲ್ಲಿ ತುಡರ್ ಸಂಘದ ಸಮಾಜ ಕಾರ್ಯ ಎದ್ದು ಕಾಣುತ್ತದೆ, ಬಸ್ಸು ತಂಗುದಾಣ ನಿರ್ಮಾಣ, ಸ್ವಚ್ಛತಾ ಕಾರ್ಯ, ದಾರಿದೀಪ ವ್ಯವಸ್ಥೆ ಸೇರಿದಂತೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ, ಯುವ ಸಂಘಗಳು ಬೇರೆ ಸಿದ್ಧಾಂತಗಳಿಗೆ ಮಣೆ ಹಾಕದೇ ಸಮಾಜ ಸೇವೆಯಲ್ಲಿ ತೊಡಗಿದಾಗ ಮಾತ್ರ ಇಂತಹ ಸಾಧನೆ ಮಾಡಿ, ಸಾಂತಿ ಸೌಹಾರ್ದತೆಯನ್ನು ಕಾಣಲು ಸಾಧ್ಯ ಎಂದರು. ಪೊಲೀಸ್ ಇಲಾಖೆಯ ನೇಮಕಾತಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕರಾವಳಿ ಭಾಗದ ಜನರು ಅಷ್ಟಾಗಿ ಆಸಕ್ತಿ ತೋರುತ್ತಿಲ್ಲದಿದ್ದು, ಯುವಕ ಸಂಘಗಳು ಗ್ರಾಮೀಣ ಜನರಿಗೆ ಈ ಬಗ್ಗೆ ಮಾಹಿತಿ ಕಾರ್ಯಕ್ರಮ, ಪ್ರೋತ್ಸಾಹ ನೀಡುವ ಕೆಲಸ ಮಾಡಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಬ್ಯಾಂಕ್ ಆಫ್ ಬರೋಡಾ ಕಾವು ಶಾಖಾ ಮ್ಯಾನೇಜರ್ ಅತಿಥ್ ರೈಯವರು ಮಾತನಾಡಿ ತುಡರ್ ಯುವಕ ಮಂಡಲದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೆ, ಆದರೆ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಸಂಘಟನಾ ಶಕ್ತಿಯ, ಸಮಾಜಕಾರ್ಯದ ಬಗ್ಗೆ ಅರಿವಾಗಿದೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಅಂತರ್ಜಾಲದ ಮೂಲಕ ವಂಚನೆಯ ಜಾಲ ನಡೆಯುತ್ತಿದ್ದು ಈ ಬಗ್ಗೆ ಗ್ರಾಹಕರು ಜಾಗೃತರಾಗಬೇಕು, ಯುವಕ ಸಂಘವು ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.

ಸಭಾಧ್ಯಕ್ಷತೆ ವಹಿಸಿದ್ದ ಅರಿಯಡ್ಕ ಗ್ರಾ.ಪಂ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯರವರು ಮಾತನಾಡಿ ತುಡರ್ ಯುವಕ ಸಂಘ ನಮ್ಮೂರಿನಲ್ಲಿ ಒಳ್ಳೆಯ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ, ಅವರ ಮನವಿಯಂತೆ ಯುವಕ ಮಂಡಲಕ್ಕೆ ನಿವೇಶನ ಗುರುತಿಸಿ ಕೊಟ್ಟು, ಪಂಚಾಯತ್‌ನಿಂದ ಸಿಗುವ ಎಲ್ಲಾ ಸಹಕಾರವನ್ನು ನೀಡಲಿದ್ದೇವೆ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಅಮೂಲ್ಯ ಆರ್ಥಿಕ ಸಾಕ್ಷರತಾ ಸಮಿತಿಯ ತಾಲೂಕು ಸಮಾಲೋಚಕಿ ಗೀತಾ ವಿಜಯ್‌ರವರು ಕೇಂದ್ರ ಪುರಸ್ಕೃತ ಯೋಜನೆಗಳ ಬಗ್ಗೆ, ಬ್ಯಾಂಕಿಂಗ್ ವ್ಯವಹಾರದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಸಂವಾದ ನಡೆಸಿದರು.

ಪ್ರಸ್ತಾವನೆಗೈದ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ರಘುವೀರ್ ಎಸ್‌ರವರು ಮಾತನಾಡಿ ತುಡರ್ ಯುವಕ ಸಂಘವು ನಮ್ಮ ಹೆಮ್ಮೆಯ ಸಂಘಟನೆ, ಯಾವ ಕಾರ್ಯಕ್ರಮ ನೀಡಿದರೂ ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ, ಫಿಟ್ ಇಂಡಿಯಾ ಫ್ರೀಡಂ ರನ್ ಜಾಥಾಕ್ಕೆ ಅಧಿಕಾರಿ ವರ್ಗದವರನ್ನು ಸೇರಿಸಿಕೊಂಡು ಯಶಸ್ವಿಯಾಗಿ ನಡೆಸಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಯುವ ಸದಸ್ಯರ ಸೇರ್ಪಡೆ:
ತುಡರ್ ಯುವಕ ಮಂಡಲಕ್ಕೆ ಹೊಸ ಸದಸ್ಯರಾಗಿ ಸೇರ್ಪಡೆಯಾದ ಹರ್ಷಿತ್ ಆಚಾರಿಮೂಲೆ, ಮೋಹಿತ್‌ರಾಜ್ ಪರನೀರು, ಶಿವ ಕುಮಾರ್ ಮಾಣಿಯಡ್ಕರವರಿಗೆ ಡಾ. ಯತೀಶ್ ಉಳ್ಳಾಲ್‌ರವರು ಸಂಘದ ಐಡಿ ಕಾರ್ಡ್ ಹಾಕಿ, ಸಮವಸ್ತ್ರ ನೀಡಿ ಅಭಿನಂದಿಸಿದರು.

ನೂತನ ಕಾರ್ಯದರ್ಶಿಗೆ ಅಭಿನಂದನೆ:
ಯುವಕ ಮಂಡಲಕ್ಕೆ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಮೋಹನಚಂದ್ರ ಆಚಾರಿಮೂಲೆಯವರಿಗೆ ರಘುವೀರ್ ಎಸ್‌ರವರು ಹೂ ನೀಡಿ, ಶಾಲು ಹಾಕಿ ಅಭಿನಂದಿಸಿದರು.

ನಿವೇಶನಕ್ಕಾಗಿ ಗ್ರಾ.ಪಂ.ಗೆ ಮನವಿ:
ತುಡರ್ ಯುವಕ ಮಂಡಲಕ್ಕೆ ಸ್ವಂತ ಕಟ್ಟಡ ನಿರ್ಮಿಸುವ ಸಲುವಾಗಿ ನಿವೇಶನ ಕಾದಿರಿಸುವಂತೆ ಕೋರಿ ಕಾರ್ಯಕ್ರಮದ ವೇದಿಕೆಯಲ್ಲಿ ಅರಿಯಡ್ಕ ಗ್ರಾ.ಪಂ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯರವರಿಗೆ ಮನವಿ ಸಲ್ಲಿಸಲಾಯಿತು.

ಎನ್‌ವೈಕೆ ಸಂಯೋಜಕಿಗೆ ಅಭಿನಂದನೆ:
ನೆಹರು ಯುವ ಕೇಂದ್ರದ ತಾಲೂಕು ಸಂಯೋಜಕಿಯಾಗಿ ಆಯ್ಕೆಯಾಗಿರುವ ಪ್ರಜ್ಞಾ ಕುಲಾಲ್‌ರವರಿಗೆ ತುಡರ್ ಯುವಕ ಮಂಡಲದಿಂದ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ತುಡರ್ ಯುವಕ ಮಂಡಲದ ಅಧ್ಯಕ್ಷ ಸುನೀಲ್ ನಿಧಿಮುಂಡರವರು ಸ್ವಾಗತಿಸಿ, ನೆಹರು ಯುವ ಕೇಂದ್ರದ ಸಂಯೋಜಕಿ ಪ್ರಜ್ಞಾ ಕುಲಾಲ್ ವಂದಿಸಿದರು. ಯುವಕ ಮಂಡಲದ ಮಾಜಿ ಅಧ್ಯಕ್ಷ ಗಂಗಾಧರ ನಾಯ್ಕ ಮತ್ತು ಸದಸ್ಯ ದಿವ್ಯಪ್ರಸಾದ್‌ರವರು ಕಾರ್ಯಕ್ರಮ ನಿರ್ವಹಿಸಿದರು. ಯುವಕ ಮಂಡಲದ ಸದಸ್ಯರು ಸಹಕರಿಸಿದರು. ಕಾರ್ಯಕ್ರಮದಲ್ಲಿ ಅರಿಯಡ್ಕ ಗ್ರಾ.ಪಂ ಉಪಾಧ್ಯಕ್ಷ ಸಂತೋಷ್ ಮಣಿಯಾಣಿ, ಸದಸ್ಯರಾದ ಲೋಕೇಶ್ ಚಾಕೋಟೆ, ಹರೀಶ್ ಜಾರತ್ತಾರು, ಅನಿತಾ, ಹೇಮಾವತಿ, ಕಾವು ದೇವಸ್ಥಾನದ ಆಡಳಿತ ಸಮಿತಿ ಸದಸ್ಯರಾದ ಕೃಷ್ಣಪ್ರಸಾದ್ ಕೊಚ್ಚಿ, ಮಳಿ ರಾಮಚಂದ್ರ ಭಟ್, ನಿರ್ಮಲ ರೈ, ಕಾವು ಸಹಕಾರ ಸಂಘದ ನಿರ್ದೇಶಕ ಶ್ರೀಧರ್ ರಾವ್, ಅರಿಯಡ್ಕ ಬಿಜೆಪಿ ಶಕ್ತಿ ಕೇಂದ್ರದ ಸಂಚಾಲಕ ಸಚಿನ್ ಪಾಪೆಮಜಲು, ಯುವಕ ಮಂಡಲದ ಮಾರ್ಗದರ್ಶಕ ಲಕ್ಷ್ಮೀನಾರಾಯಣ ಭಟ್, ಮಹಿಳಾ ಮಂಡಲದ ಸದಸ್ಯರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.