HomePage_Banner
HomePage_Banner
HomePage_Banner
HomePage_Banner

ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

  • ನಾನು ಎನ್ನದೆ ನಾವು ಎನ್ನುವ ಮನೋಭಾವನೆ ಬೆಳೆಸಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು-ಶಾಲೆಟ್ ಪಿಂಟೋ

ಪುತ್ತೂರು: ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸೆ.೧೮ರಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲಿನಿ ಪಿಂಟೋರವರು ಪುತ್ತೂರು ಬ್ಲಾಕ್ ಮಹಿಳಾ ಕಾಂಗ್ರೆಸ್‌ನ ನೂತನ ಅಧ್ಯಕ್ಷೆಯಾಗಿ ಆಯ್ಕೆಗೊಂಡ ಶಾರದಾ ಅರಸ್ ಮತ್ತು ಅವರ ತಂಡದವರಿಗೆ ಅಧಿಕಾರ ಹಸ್ತಾಂತರಿಸುವ ಮೂಲಕ ಪದಗ್ರಹಣ ಸಮಾರಂಭ ನಡೆಸಿಕೊಟ್ಟರು. ಬಳಿಕ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ಬೆಳವಣಿಗೆಯಲ್ಲಿ ಮಹಿಳಾ ಕಾರ್‍ಯಕರ್ತರ ಪಾತ್ರ ಅತ್ಯಅಮೂಲ್ಯವಾಗಿದ್ದು ಮಹಿಳಾ ಕಾಂಗ್ರೆಸ್ ಕಾರ್‍ಯಕರ್ತರು ನಾನು ಎನ್ನದೆ ನಾವು ಎಂಬ ಮನೋಭಾವನೆಯನ್ನು ಬೆಳೆಸಿಕೊಂಡು ಕಾರ್‍ಯಪ್ರವೃತರಾದಾಗ ಪಕ್ಷವು ಬಲಿಷ್ಠವಾಗಿ ಬೆಳೆಯುತ್ತದೆ. ಮತ್ತು ನಿಮ್ಮಿಂದ ಪಕ್ಷಕ್ಕೆ ಇನ್ನಷ್ಟು ಕಾರ್‍ಯಕರ್ತರನ್ನು ಆಕರ್ಷಿಸುವಲ್ಲಿ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು. ಇಂದು ಮಹಿಳೆಯರು ರಾಜಕೀಯವಾಗಿ, ಸಾಮಾಜಿಕವಾಗಿ ಮೇಲೆ ಬರಲು ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿಯವರು ತಂದ ಮೀಸಲಾತಿಯಿಂದಾಗಿ ಮಹಿಳೆಯರು ರಾಜಕೀಯವಾಗಿ ಮೇಲೆ ಬರಲು ಸಾಧ್ಯವಾಗಿದೆ. ಇದು ಮಹಿಳೆಯರಿಗೆ ರಾಜೀವ್ ಗಾಂಧಿಯವರ ಮೂಲಕ ಕಾಂಗ್ರೆಸ್ ಪಕ್ಷವು ಮಹಾ ಕೊಡುಗೆಯಾಗಿದೆ. ಒಂದು ವೇಳೆ ರಾಜೀವಗಾಂಧಿಯವರು ಇಂತಹ ಮೀಸಲಾತಿಯನ್ನು ಜಾರಿಗೆ ತರದಿದ್ದಲ್ಲಿ ಮಹಿಳೆಯರು ಇಷ್ಟೊಂದು ಪ್ರಮಾಣದಲ್ಲಿ ಮೇಲೆ ಬರಲು ಸಾಧ್ಯವಾಗುತ್ತಿರಲಿಲ್ಲ. ಮಹಿಳೆಯರು ಒಗ್ಗಟ್ಟಾದರೆ ಏನೂ ಮಾಡಲು ಸಾಧ್ಯವಿದೆ. ಮಹಿಳೆಯರಿಗೆ ಜುಟ್ಟು ಹಿಡಿಯಲು ಗೊತ್ತಿದೆ ಅದನ್ನು ಬಿಡಿಸಲು ಗೊತ್ತಿದೆ. ಮಹಿಳೆಯರು ಒಗ್ಗಟ್ಟಾಗಿ ಒಬ್ಬರಿಗೊಬ್ಬರು ಅರಿತು ಜಾತ್ಯಾತೀತ ಮನೋಭಾವನೆಯಿಂದ ಕೆಲಸಕಾರ್‍ಯಗಳನ್ನು ಮಾಡಿದಾಗ ಪಕ್ಷವು ಇನ್ನಷ್ಟು ಬೆಳೆಯಲು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಪುತ್ತೂರು ಬ್ಲಾಕ್ ಮಹಿಳಾ ಕಾಂಗ್ರೆಸಿಗರ ಸೇವೆ ಶ್ಲಾಘನೀಯ. ಇಲ್ಲಿನ ಮಹಿಳೆಯರು ಒಗ್ಗಟ್ಟಾಗಿ ಶಕ್ತಿ ಮೀರಿ ದುಡಿದಿದ್ದರಿಂದ ಪಕ್ಷಕ್ಕೆ ನವಚೇತನ ತುಂಬುತ್ತಿದೆ ಎಂದರು.

ತಾ.ಪಂ ಮತ್ತು ಜಿ.ಪಂ ಚುನಾವಣೆಯು ಮೀಸಲಾತಿಯ ಗೊಂದಲದಿಂದ ಮುಂದೂಡಿದೆ. ಮುಂದೆ ಜಿ.ಪಂ, ತಾ.ಪಂಗೆ ಸ್ಪರ್ಧಿಸುವ ಮಹಿಳಾ ಕಾಂಗ್ರೆಸ್‌ನ ಅಭ್ಯರ್ಥಿಗಳ ಸಹಿತ ಸ್ಪರ್ಧಿಸುವ ಎಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಕೊಡುವ ಮೂಲಕ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ತೋರಿಸಿಕೊಡಬೇಕಾಗಿದೆ. ನಮಗೆ ಪ್ರತಿಭಟನೆಯ ಕಾಲ, ನನಮ್ಮಲ್ಲಿ ಅಧಿಕಾರವಿಲ್ಲ. ಗ್ಯಾಸ್ ಬೆಲೆಯೇರಿಕೆ, ಪೆಟ್ರೋಲ್, ಡಿಸೇಲ್ ಬೆಲೆಯೇರಿಕೆ, ಅಡುಗೆ ಅನಿಲ ಬೆಲೆಯೇರಿಕೆಯಾಗಿದ್ದು, ಹೀಗೆ ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ನಮ್ಮಲ್ಲಿ ಅಧಿಕಾರ ಇಲ್ಲದಿದ್ದರೂ, ನಾವು ಸಂಘಟಿತರಾಗಿ ಪ್ರತಿಭಟಿಸುವ ಅನಿವಾರ್ಯತೆಯಿದೆ. ಈ ನಿಟ್ಟಿನಲ್ಲಿ ಸರಕಾರದ ಯಾವುದೇ ವೈಪಲ್ಯದ ವಿರುದ್ಧ ನಡೆಯುವ ಪ್ರತಿಭಟನೆಗೆ ಮಹಿಳೆಯರಾದ ನಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅದನ್ನು ಯಶಸ್ವಿಗೊಳಿಸುವ ಅನಿವಾರ್ಯತೆಯಿದೆ ಎಂದು ಅವರು ಹೇಳಿದರು. ಮೋದಿಯವರ ಹುಟ್ಟುಹಬ್ಬಕ್ಕೆ ಶುಭಾಶಯ ಸಲ್ಲಿಸಿದವರಿಗಿಂತ ಹೆಚ್ಚಾಗಿ ಉದ್ಯೋಗ ಇಲ್ಲದ ನಿರುದ್ಯೋಗಿಗಳು ಉದ್ಯೋಗಕ್ಕಾಗಿ ಪ್ರತಿಭಟಿಸುವ ಸನ್ನಿವೇಶವು ನಡೆಯಿತು. ಇಂದಿನ ಕೊರೋನಾದ ಸಮಯದಲ್ಲಿ ಸಾಕಷ್ಟು ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬೆಲೆಯೇರಿಕೆಯಿಂದ ಮತ್ತಷ್ಟು ಜನರು ಸಮಸ್ಯೆಗಳಿಗೆ ಒಳಗಾಗಿದ್ದಾರೆ ಎಂದು ಅವರು ಹೇಳಿದರು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಮಾತನಾಡಿ ಯಾವುದೇ ಗ್ರಾಮದಲ್ಲಿ ಯಾವುದೇ ಹೆಣ್ಣು ಮಗಳಿಗೆ ಅನ್ಯಾಯವಾದರೆ ಜಾತಿ, ಪಕ್ಷ ನೋಡದೆ ಅವರಿಗೆ ನ್ಯಾಯ ಒದಗಿಸುವ ಕೆಲಸವನ್ನು ಮಹಿಳಾ ಕಾಂಗ್ರೆಸ್ ಕಾರ್‍ಯಕರ್ತರಿಂದ ಆಗಬೇಕಿದೆ. ಈ ಅಂತದಲ್ಲಿ ಆಯಾಯ ಗ್ರಾಮದಲ್ಲಿ ಮಹಿಳೆಯರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾದರೆ ಅದನ್ನು ಸರಿಯಾಗಿ ಖಚಿತ ಪಡಿಸಿಕೊಂಡು ನಮ್ಮ ಗಮನಕ್ಕೆ ತಂದರೆ ಖಂಡಿತ ನಾವು ಹೋರಾಟದ ಮೂಲಕ ನ್ಯಾಯ ಒದಗಿಸುವ ಕೆಲಸವನ್ನು ಮಾಡುತ್ತೇವೆ ಎಂದು ಅವರು ಹೇಳಿದರು. ಮಹಿಳೆಯರಲ್ಲಿ ಹಲವಾರು ಸಮಸ್ಯೆಗಳಿರಬಹುದು. ಆದರೆ ಅದನ್ನು ಸರಿದೂಗಿಸಿಕೊಂಡು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಾಗ ಮೇಲೇರಲು ಸಾಧ್ಯವಿದೆ. ನಲುವತ್ತೈದು ವರ್ಷಗಳ ಹಿಂದೆ ನಾನು ರಾಜಕೀಯವಾಗಿ ಸೇರುವಾಗ ಹೀಗಿನ ಹಾಗೆ ಯಾವುದೇ ಸೌಲಭ್ಯ ಇಲ್ಲದಿದ್ದರೂ ಕರ್ತವ್ಯ ಪ್ರಜ್ಞೆಯಿಂದ ಕಾರ್‍ಯನಿರ್ವಹಿಸಿದ್ದೇನೆ ಎಂದು ಅವರು ಹೇಳಿದರು. ಮಹಿಳೆಯರು ಮನೆಯಿಂದ ಹೊರಗೆ ಬರದಂತ ಸ್ಥಿತಿ ಉಂಟಾಗಿದ್ದು ಅಂತಹ ಸಂದರ್ಭದಲ್ಲಿ ಕಾಂಗ್ರೆಸ್ ಮಹಿಳೆಯರಲ್ಲಿ ಜಾಗೃತಿ ಮೂಡಿಸಿ, ಮಹಿಳೆಯರು ಎಲ್ಲಾ ಸಂದರ್ಭದಲ್ಲೂ ಮುಂದೆ ಬರುವಂತೆ ಪ್ರೇರೆಪಿಸಿದೆ ಎಂದು ಅವರು ಹೇಳಿದರು. ನಾವು ನಮ್ಮ ಮನೆಯನ್ನು ಹೇಗೆ ಗುಡಿಸಿ, ತಿಕ್ಕಿ ಯಾವ ರೀತಿ ಸ್ವಚ್ಛಗೊಳಿಸುತ್ತೇವೋ ಅದೇ ರೀತಿ ಅನ್ಯಾಯ ಹಾಗೂ ಭ್ರಷ್ಟಾಚಾರವನ್ನು ತೊಡೆದು ಹಾಕಿ ಶುಚಿಗೊಳಿಸುವ ಕೆಲಸ ಆಗಬೇಕಿದೆ ಎಂದು ಅವರು ಹೇಳಿದರು. ಪುತ್ತೂರು ಮಹಿಳಾ ಕಾರ್‍ಯಕಾರಿ ಸಮಿತಿಯಲ್ಲಿ ಕಡ್ಡಾಯವಾಗಿ ಮೂರು ಮೀಟಿಂಗ್‌ಗೆ ಹಾಜರಾಗದ ಪದಾಧಿಕಾರಿಗಳನ್ನು ಕಾರಣವಿಲ್ಲದೆ ವಜಗೊಳಿಸಲಾಗುವುದು. ಮುಂದೆ ಅವರು ಕಾರ್‍ಯಕರ್ತರಾಗಿ ಉಳಿಯಲಿದ್ದಾರೆ ಎಂದು ಅವರು ಹೇಳಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಎಂ.ಬಿ. ವಿಶ್ವನಾಥರವರು ಮಾತನಾಡಿ ಪೆಟ್ರೋಲ್ ಡೀಸೆಲ್ ಬೆಲೆ ಗಗನಕ್ಕೆ ಏರಿದ್ದು ಇದನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದಿಲ್ಲವೆಂದು ಬಿಜೆಪಿಯವರು ಹೇಳುತ್ತಿದ್ದಾರೆ. ಅಂದರೆ ಬಿಜೆಪಿಯವರು ಏನೂ ಮಾಡಿದರು ಕೇಳುವವರಿಲ್ಲ ಎಂದು ಅರ್ಥವಾಗುತ್ತದೆ ಎಂದು ಅವರು ಹೇಳಿದರು. ಮಹಿಳೆಯರು ಒಟ್ಟಿಗೆ ಸೇರಿಕೊಂಡು ಒಗ್ಗಟ್ಟಾಗಿ ಚಿಂತನೆ ನಡೆಸಿಕೊಂಡು ಪಕ್ಷದ ಬೆಳವಣಿಗೆಯಲ್ಲಿ ಕಾರ್‍ಯಪ್ರವೃತರಾದಾಗ ಪಕ್ಷವು ಗಣನೀಯವಾಗಿ ಬೆಳೆಯುವಲ್ಲಿ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು. ಸೆ.೨೦ರಂದು ನಡೆಯುವ ಹಿಂದುತ್ವದ ರಕ್ಷಕರೆಂದು ಹೇಳಿಕೊಂಡು, ಹಿಂದೂ ದೇವಾಲಯಗಳನ್ನು ದ್ವಂಸಗೊಳಿಸುತ್ತಿರುವ ಬಿಜೆಪಿಯ ನಡೆಯ ವಿರುದ್ದ ಪುತ್ತೂರಿನಲ್ಲಿ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಕಾರ್‍ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ಹೇಳಿದರು. ಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಶಾಂತಲ ಶೆಟ್ಟಿಯವರು ಮಾತನಾಡಿ ಕಾಂಗ್ರೆಸ್ ಪಕ್ಷ ಸ್ವತಂತ್ರ್ಯ ಸಂಗ್ರಾಮದಲ್ಲಿ ಪ್ರಪ್ರಥಮವಾಗಿ ಭಾಗವಹಿಸಿದ ಪಕ್ಷವಾಗಿದೆ. ಇಂದಿರಾ ಗಾಂಧಿಯವರ ಆದರ್ಶಗಳನ್ನು ಮೈಗೂಡಿಸಿಕೊಂಡು ಪಕ್ಷವನ್ನು ಮುನ್ನಡೆಸಿಕೊಂಡು ಹೋಗಬೇಕಾಗಿದೆ ಎಂದು ಅವರು ನೂತನವಾಗಿ ಆಯ್ಕೆಗೊಂಡಿರುವ ಪದಾಧಿಕಾರಿಗಳು ಸಕ್ರಿಯವಾಗಿ ತೊಡಗಿಸುವ ಮೂಲಕ ಕಾಂಗ್ರೆಸ್ ಶಕ್ತಿ ತುಂಬುವ ಕೆಲಸ ಆಗಬೇಕು ಎಂದು ಅವರು ಹೇಳಿದರು.

ಸನ್ಮಾನ..
ಪುತ್ತೂರು ಬ್ಲಾಕ್ ಮಹಿಳಾ ಕಾಂಗ್ರೆಸ್‌ನ ನಿಕಟ ಪೂರ್ವ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರುರವರಿಗೆ ಇದೇ ಸಂದರ್ಭದಲ್ಲಿ ಶಾಲೆಟ್ ಪಿಂಟೋ ಹಾಗೂ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹಾಗೂ ಅತಿಥಿಗಳು ಶಾಲು ಹೊದಿಸಿ ಸನ್ಮಾನಿಸಿದರು. ಬಳಿಕ ಮಾತನಾಡಿದ ಅವರು ತನ್ನವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿ ಮುಂದೆಯೂ ಪಕ್ಷಕ್ಕಾಗಿ ದುಡಿಯಲು ಸದಾ ಸಿದ್ದನಿರುವನೆಂದು ಅವರು ಹೇಳಿದರು. ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಶಾರದಾ ಅರಸ್‌ರವರು ಮಾತನಾಡಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ ಎಲ್ಲರ ಸಹಕಾರ ಯಾಚಿಸಿದರು. ಈ ಸಂದರ್ಭದಲ್ಲಿ ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಲಿ, ಕಾರ್ಮಿಕ ಘಟಕದ ಅಧ್ಯಕ್ಷ ಶರೋನ್ ಸಿಕ್ವೇರಾ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಪಾಣಾಜೆ, ಯಸ್.ಟಿ. ಘಟಕದ ಅಧ್ಯಕ್ಷ ಕೇಶವ ಪಡೀಲ್ ಮೊದಲಾದವರು ಉಪಸ್ಥಿತರಿದ್ದರು. ಪುತ್ತೂರು ಬ್ಲಾಕ್ ಮಹಿಳಾ ಕಾಂಗ್ರೆಸ್‌ನ ಉಪಾಧ್ಯಕ್ಷರುಗಳಾದ ಚಂದ್ರಕಲಾ, ಯೋಗಿನಿ ರೈ, ಭವಾನಿ ಉಕ್ರಪ್ಪ, ಫೌಝಿಯಾ ಇಬ್ರಾಹಿಂ, ವನಿತಾ ಆಚಾರ್ಯ, ಸಿಂಥಿಯಾ ಡಿಸೋಜ, ಪ್ರಧಾನ ಕಾರ್‍ಯದರ್ಶಿಗಳಾದ ಸೀತಾ ಭಟ್, ಕಾರ್‍ಯದರ್ಶಿಗಳಾದ ಬಿ.ಸಿ. ಚಿತ್ರಾ, ಸರೋಜಿನಿ ಮೋನಪ್ಪ ಪೂಜಾರಿ, ನೆಬಿಸ, ಸಹಕಾರ್‍ಯದರ್ಶಿಗಳಾದ ಪೂಜಾ ವಸಂತ್, ಸುಜಾತ ರೈ, ವಿಮಲ ನಾಯಕ್, ಜೆಸಿಂತಾ ಗೊನ್ಸಾಲೀಸ್, ಖಜಾಂಜಿ ಶುಭಮಾಲಿನಿ ಮಲ್ಲಿರವರು ವಿವಿಧ ಕಾರ್‍ಯಕ್ರಮ ನಿರ್ವಹಿಸಿದರು. ಜಿಲ್ಲಾ ಕಾಂನ ಪದಾಧಿಕಾರಿ ನ್ಯಾಯವಾದಿ ರೋಟರಿ, ಸಾಯಿರಾ ಜುಬೈರ್‌ರವರು ಮಾತನಾಡಿ, ಶಕುಂತಳಾ ಶೆಟ್ಟಿಯವರು ಪುತ್ತೂರಿನ ಜಾನ್ಸಿ ರಾಣಿಯಾಗಿದ್ದಾರೆ. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥರಿಂದ ಪಕ್ಷಕ್ಕೆ ಬೆಳಕು ನೀಡುವಂತಾಗಿದೆ ಎಂದು ಹೇಳಿ ಇಲ್ಲಿನ ಮಹಿಳಾ ಸಂಘಟನೆಯು ಉತ್ತಮ ಕೆಲಸಕಾರ್‍ಯಗಳನ್ನು ಮಾಡುವ ಮೂಲಕ ಮುಂದೆ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರುವಂತಾಗಬೇಕಿದೆ ಎಂದು ಅವರು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.