HomePage_Banner
HomePage_Banner
HomePage_Banner
HomePage_Banner

ಜಿಡೆಕಲ್ಲು ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ – ತರಕಾರಿ, ಹಣ್ಣಿನ ಗಿಡ ನೆಟ್ಟ ಪೋಷಕರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ಪುತ್ತೂರು:  ಆರನೇ ಮತ್ತು ಏಳನೇ ತರಗತಿಗಳಿಗೆ ಸೋಮವಾರ ದಿಂದ ಶಾಲೆ ಆರಂಭವಾಗುವ ಹಿನ್ನಲೆಯಲ್ಲಿ  ಜಿಡೆಕಲ್ಲು ಶಾಲಾ ವಠಾರದಲ್ಲಿ ಪೋಷಕರು ಸಚ್ಛತಾ ಕಾರ್ಯವನ್ನು ಕೈಗೊಂಡರು. 
 ನಗರಸಭಾ ಸ್ಥಳೀಯ ಸದಸ್ಯ ರಾಬಿನ್ ತಾವ್ರೋ ಇವರ ನೇತೃತ್ವದಲ್ಲಿ ನಗರಸಭೆಯಿಂದ ಸಾನಿಟೈಜಿಂಗ್ ಮಾಡಲಾಯಿತು ಪೋಷಕರು  ಶೌಚಾಲಯ ಅಡುಗೆ ಕೋಣೆ ತರಗತಿ ಕೋಣೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿದರು.ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ  ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷೆ ಶ್ರೀಮತಿ ಶೋಭಾ ಹಾಗೂ ಹತ್ತಾರು ಪೋಷಕರು ಪಾಲ್ಗೊಂಡರು ಆ ಬಳಿಕ ಪೋಷಣಾ ಅಭಿಯಾನ ಕಾರ್ಯಕ್ರಮದಲ್ಲಿ ತಾವು ತಂದಿದ್ದ ಬಾಳೆಗಿಡವನ್ನು ,ಪಪ್ಪಾಯಿ ಗಿಡವನ್ನು ನೆಡಲಾಯಿತು. ಬಳಿಕ ನಡೆದ  ಸಭಾ ಕಾರ್ಯಕ್ರಮದಲ್ಲಿ  ತೆರವಾಗಿದ್ದ ಪೋಷಕ ಪ್ರತಿನಿಧಿಗಳನ್ನು ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಗೆ  ನೇಮಿಸಿಕೊಳ್ಳಲಾಯಿತು.ಕೃಷ್ಣಪ್ಪ ಇವರಿಂದ ತೆರವುಗೊಂಡ ಅಧ್ಯಕ್ಷ ಸ್ಥಾನಕ್ಕೆ ತೀರ್ಥರಾಮರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಶ್ರೀಮತಿ ಶೋಬಾ ಇವರನ್ನು ಮುಂದುವರಿಸಲು ಸಭೆ ನಿರ್ಣಯಿಸಿತು. ನಿರ್ಗಮಿತ ಅಧ್ಯಕ್ಷ ಇವರಿಗೆ ಗೌರವ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಯಿತು.  ಶಾಲಾ ಮುಖ್ಯಗುರು ತಾರಾನಾಥ ಸವಣೂರು ಕಾರ್ಯಕ್ರಮ ಸಂಯೋಜಿಸಿದರು ಶಿಕ್ಷಕಿಯರಾದ ಶ್ರೀಮತಿ ರತ್ನಾಕುಮಾರಿ, ಶ್ರೀಮತಿ ಪ್ರೇಮಾ ಕೆ.ಸಿ ಹಾಗೂ ಅಡುಗೆ ಸಿಬ್ಬಂದಿಗಳು ಸಹಕರಿಸಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.