HomePage_Banner
HomePage_Banner
HomePage_Banner
HomePage_Banner

  ಅಖಿಲ ಭಾರತೀಯ ಪಂಚಾಯತ್ ಪರಿಷತ್  ಕರ್ನಾಟಕ ರಾಜ್ಯ ಪ್ರಧಾನ  ಕಾರ್ಯದರ್ಶಿಯಾಗಿ  ಡಾ.ಹಾಜಿ.ಯಸ್ ಅಬೂಬಕ್ಕರ್ ಆರ್ಲಪದವು ‍ ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ; ಅಖಿಲ ಭಾರತೀಯ ಪಂಚಾಯತ್ ಪರಿಷತ್, ಪಂಚಾಯತ್ ರಾಜ್ ಇಲಾಖೆಗಳ ಮಾನ್ಯತೆ ಪಡೆದ ಸ್ವಾಯತ್ತ ಅಫೆಕ್ಷ್ ಫೆಡರೇಷನ್, ಗ್ರಾಮೀಣ ಭಾರತದ ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನೊಂದಿ, ಪಂಚಾಯತ್ ರಾಜ್ ಇಲಾಖೆಯ ಅಧೀನ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಬಲವಂತ್ ರಾಯಿ ಮೆಹ್ತಾ, ಭಾರತ ರತ್ನ ಲೋಕ ನಾಯಕ್ ಜಯಪ್ರಕಾಶ್ ನಾರಾಯಣ್ ಸ್ಥಾಪಕಾಧ್ಯಕ್ಷರಾಗಿ  ಸ್ಥಾಪನೆಗೊಂಡ ಅಖಿಲ ಭಾರತೀಯ ಪಂಚಾಯತ್ ಪರಿಷತ್  ಇದರ ಕರ್ನಾಟಕ ರಾಜ್ಯ ಪಂಚಾಯತ್ ಪರಿಷತ್ ನ ನೂತನ ರಾಜ್ಯ ಪ್ರಧಾನ  ಕಾರ್ಯದರ್ಶಿಯಾಗಿ ಬರಹಗಾರರೂ, ಗಡಿನಾಡಿನ ಅಭಿವೃದ್ಧಿಯ ಹರಿಕಾರ ಡಾ.ಹಾಜಿ.ಯಸ್.ಅಬೂಬಕ್ಕರ್ ಆರ್ಲಪದವು ಇವರು ಆಯ್ಕೆಯಾಗಿದ್ದಾರೆ.  ನವ ದೆಹಲಿಯಲ್ಲಿ ಕೇಂದ್ರಕಛೇರಿಯನ್ನು ಹೊಂದಿರುವ ಅಖಿಲ ಭಾರತ ಪಂಚಾಯತ್ ಪರಿಷತ್ ಪ್ರಧಾನ ಕಾರ್ಯದರ್ಶಿ ಡಾ.ರುದ್ರಾ ಭಾನು ಇವರು ನಾಮ ನಿರ್ದೇಶನ ಗೊಳಿಸಿ ಆದೇಶಿಸಿರುತ್ತಾರೆ. ಪ್ರಸಕ್ತ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪರಿಷತ್‌ನ ಕಾರ್ಯ ವೈಖರಿಯ ಬಗ್ಗೆ ತಿಳಿಯಪಡಿಸಿ ಬಲಪಡಿಸುವ ಮಹತ್ತರ ಜವಾಬ್ದಾರಿಯನ್ನೂ ನೀಡಿರುತ್ತಾರೆ.
ಡಾ.ಹಾಜಿ.ಯಸ್ ಅಬೂಬಕ್ಕರ್ ಆರ್ಲಪದವು ‍ ಇವರು ಭಾರತೀಯ ಪತ್ರಕಾರ್ ಕಲ್ಯಾಣ ಮಂಚ್ ಇದರ ಕರ್ನಾಟಕ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿಯಾಗಿಯೂ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾಧ್ಯಕ್ಷರಾಗಿ , ದಕ್ಷಿಣ ಕನ್ನಡ ಜಿಲ್ಲಾ ಸಿಎಸ್ಸಿ ವಿಎಲ್ಇ ಸೊಸೈಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಕರ್ನಾಟಕ ಮುಸ್ಲಿಂ ಜಮಾತ್ ತಾಲೂಕು ಸಮಿತಿ ಕಾರ್ಯದರ್ಶಿಯಾಗಿಯೂ ತಾಲೂಕು ಕಾನೂನು ಪ್ರಾಧಿಕಾರದ ಪ್ಯಾರಾ ಲೀಗಲ್ ವ್ಯಾಲೆಂಟರಿಯಾಗಿಯೂ, ವಿದ್ಯಾಸಂಸ್ಥೆಗಳ ಅಧ್ಯಕ್ಷರು ಗಳಾಗಿಯೂ, ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾಗಿಯೂ ಗಡಿನಾಡ ಧ್ವನಿ ಪತ್ರಿಕೆ ಸಂಪಾದಕರಾಗಿಯೂ,ಅಲ್ಲದೆ ಹಲವಾರು ಸಂಘ-ಸಂಸ್ಥೆಗಳ ಪದಾಧಿಕಾರಿಗಳಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರು ಗೌರವ ಡಾಕ್ಟರೇಟ್ , ಭಾರತ ವಿಕಾಸ ರತ್ನ , ಕರ್ನಾಟಕ ಜ್ಞಾನ ಚಕ್ರವರ್ತಿ ರಾಷ್ಟ್ರೀಯ ಪ್ರಶಸ್ತಿ , ಕನ್ನಡ ಶ್ರೀ ರಾಷ್ಟ್ರಪ್ರಶಸ್ತಿ, ಒಡಿಯೂರು ಸಂಸ್ಥಾನದ ಶ್ರೀ ಗುರುದೇವಾನುಗ್ರಹ ಪ್ರಶಸ್ತಿ , ಡಾ ಬಿ ಆರ್ ಅಂಬೇಡ್ಕರ್ ರಾಜ್ಯಪ್ರಶಸ್ತಿ, ಡಾ ಶಿವರಾಮ ಕಾರಂತ ರಾಷ್ಟ್ರಪ್ರಶಸ್ತಿ , ಆರ್ಯಭಟ್ಟ ರಾಷ್ಟ್ರಪ್ರಶಸ್ತಿ , ಕರ್ನಾಟಕ ಜ್ಯೋತಿ ರಾಜ್ಯಪ್ರಶಸ್ತಿ , ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.