HomePage_Banner
HomePage_Banner
HomePage_Banner
HomePage_Banner

ಅನಧಿಕೃತ ಧಾರ್ಮಿಕ ಸಂಸ್ಥೆಗಳ ಪಟ್ಟಿಯೇ ದೋಷಪೂರಿತ ಪರಿಷ್ಕರಿಸಿ ಅಗತ್ಯ ಪರಿಹಾರಕ್ಕೆ ಸರಕಾರಕ್ಕೆ ಮನವಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರಾಜ್ಯದಲ್ಲಿ ಕೆಲವು ದಿನಗಳಿಂದ ಅನಧಿಕೃತ ದೇವಸ್ಥಾನದ ಹೆಸರಿನಲ್ಲಿ ಪ್ರಾಚೀನ ಮಂದಿರಗಳನ್ನು, ಅನಧಿಕೃತವೆಂದು ಸರ್ವೋಚ್ಚ ನ್ಯಾಯಾಲಯದ ಅದೇಶವನ್ನು ತಪ್ಪಾಗಿ ಅರ್ಥಮಾಡಿಕೊಂಡು ಸರ್ಕಾರವು ಧ್ವಂಸ ಮಾಡುತ್ತಿದ್ದು ದೋಷಪೂರಿತವಾಗಿ ತಯಾರಿಸಿದ ಅನಧಿಕೃತ ಧಾರ್ಮಿಕ ಸಂಸ್ಥೆಗಳ ಪಟ್ಟಿಯನ್ನು ಪರಿಷ್ಕರಿಸಬೇಕು ಮತ್ತು ದೋಷಪೂರಿತ ಪಟ್ಟಿಯ ಆಧಾರದ ಮೇಲೆ ಧ್ವಂಸ ಮಾಡಲಾದ ದೇವಾಲಯಗಳನ್ನು ಮರು ಸ್ಥಾಪನೆ ಮಾಡಬೇಕು ಎಂದು ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.

 

 

ನೂರಾರು ವರ್ಷಗಳ ಇತಿಹಾಸವಿರುವ ಸಾವಿರಾರು ಹಿಂದೂ ಧಾರ್ಮಿಕ ಸ್ಥಳಗಳನ್ನೂ ಅನಧಿಕೃತವೆಂದು ದೋಷಪೂರಿತವಾಗಿ ಸರಕಾರ ಪಟ್ಟಿ ಮಾಡಿದೆ. ಆದರೆ ಅನ್ಯಮತೀಯರ ಯಾವುದೇ ಅನಧಿಕೃತ ಧಾರ್ಮಿಕ ಕಟ್ಟಡ ತೆರವು ಪಟ್ಟಿಯಲ್ಲಿ ಸೇರಿಸಿಲ್ಲ. ಅದೇ ರೀತಿಯಲ್ಲಿ ಮೈಸೂರು ಜಿಲ್ಲೆಯಲ್ಲಿ 315 ಧಾರ್ಮಿಕ ಕಟ್ಟಡ ಅನಧಿಕೃತವೆಂದು ಗುರುತಿಸಿದ್ದು, ಅದರಲ್ಲಿ ತೆರವು ಮಾಡುವ ಪಟ್ಟಿಯಲ್ಲಿ 93 ಹಿಂದೂ ಧಾರ್ಮಿಕ ಸ್ಥಳಗಳನ್ನು ಮಾತ್ರ ಸೇರಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಸಹಾಯಕ ಆಯಕ್ತ ಡಾ|ಯತೀಶ್ ಉಳ್ಳಾಲ್ ಅವರ ಅನುಪಸ್ಥಿತಿಯಲ್ಲಿ ಕಚೇರಿ ವ್ಯವಸ್ಥಾಪಕ ಬಾಬು ನಾಯ್ಕ ಇವರ ಮೂಲಕ ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಅವರಿಗೆ ಮನವಿ ನೀಡಲಾಯಿತು. ದಕ್ಷಿಣ ಕನ್ನಡ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸದಸ್ಯ ಚಂದ್ರ ಮೊಗೇರ, ಧರ್ಣಪ್ಪ ಗೌಡ ಉಪ್ಪಿನಂಗಡಿ, ದಯಾನಂದ ಹೆಗ್ಡೆ ಪುತ್ತೂರು, ಹರೀಶ್ ಉಪ್ಪಿನಂಗಡಿ, ಶ್ರೀಧರ ಪುತ್ತೂರು, ಹರಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆ, ಸತೀಶ್ ಭಂಡಾರಿ ನೆಲ್ಲಿಕಟ್ಟೆ ಉಪಸ್ಥಿತರಿದ್ದರು.

ಬೇಡಿಕೆಗಳು: ದೋಷಪೂರಿತವಾಗಿ ತಯಾರಿ ಮಾಡಿದ ಈ ಅನಧಿಕೃತ ಪಟ್ಟಿಯನ್ನು ಕೂಡಲೇ ಪರಿಷ್ಕರಿಸಬೇಕು ಮತ್ತು ದೋಷಪೂರಿತ ಪಟ್ಟಿಯ ಆಧಾರದ ಮೇಲೆ ಧ್ವಂಸ ಮಾಡಿದ ದೇವಾಲಯಗಳ ಮರುಸ್ಥಾಪನೆಯಾಗಬೇಕು.ಹೊಸದಾಗಿ ಪರಿಷ್ಕರಿಸಿದ ಅನಧಿಕೃತ ಧಾರ್ಮಿಕ ಸ್ಥಳಗಳ ಪಟ್ಟಿಗಳನ್ನು ಸರ್ಕಾರದ ಎಲ್ಲಾ ಸಂಕೇತಸ್ಥಳದಲ್ಲಿ ಅಪ್‌ಲೋಡ್ ಮಾಡಬೇಕು ಮತ್ತು ಈ ಪಟ್ಟಿಯನ್ನು ಎಲ್ಲಾ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಿಸಬೇಕು.ಪರಿಷ್ಕರಿಸಿದ ಅನಧಿಕೃತ ಧಾರ್ಮಿಕ ಕಟ್ಟಡಗಳ ಬಗ್ಗೆ ಏನಾದರೂ ಸಂಬಂಧಿಸಿದ ಕಾಗದ ಪತ್ರಗಳನ್ನು ಸರ್ಕಾರಕ್ಕೆ ಸಲ್ಲಿಸಲು ಸಾರ್ವಜನಿಕರಿಗೆ ಸಾಕಷ್ಟು ಸಮಯಾವಕಾಶ ನೀಡಬೇಕು.ಸರ್ಕಾರದ ವತಿಯಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಪುನರ್ ಪರಿಶೀಲನೆಗೆ ಪ್ರತ್ಯೇಕ ಅರ್ಜಿ ಸಲ್ಲಿಸಿ, ಕಾನೂನು ಹೋರಾಟ ನಡೆಸಬೇಕು.ಇದು ಅತ್ಯಂತ ಸೂಕ್ಷ್ಮ ವಿಷಯವಾಗಿರುವುದರಿಂದ ಇದನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಣೆ ಮಾಡಬೇಕು.ಹಾಲಿ ಅಥವಾ ಮುಂದಿನ ಅಧಿವೇಶನದಲ್ಲಿ ಹಿಂದೂ ದೇವಾಲಯದ ಸಂರಕ್ಷಣೆ, ಪುನರ್ ನಿರ್ಮಾಣ, ಸ್ಥಳಾಂತರದ ಬಗ್ಗೆ ಮಸೂದೆಯನ್ನು ಮಂಡಿಸಿ ಕಾಯಿದೆಯನ್ನು ರೂಪಿಸಬೇಕು.ಪ್ರಾಚೀನ ಮಂದಿರಗಳನ್ನು ಸಂರಕ್ಷಣೆಯ ದೃಷ್ಟಿಯಿಂದ, ಅವುಗಳನ್ನು ಪುರಾತತ್ವ ಇಲಾಖೆಗೆ ಸೇರಿಸಬೇಕು ಮತ್ತು ಇದರ ಆಸ್ತಿಗಳಿಗೆ ಸಂಬಂಧಿಸಿದ ವರದಿಗಳನ್ನು ಪ್ರಕಟಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.