HomePage_Banner
HomePage_Banner
HomePage_Banner
HomePage_Banner

ಡಾ.ವಿಠಲ್ ಜಿ.ಎನ್ ರವರ ಫುಡ್ ಫಾರ್ ಟ್ರುತ್, ಜೋಕ್ಸ್ ಏಂಡ್ ಫ್ಯಾಕ್ಟ್ ಪುಸ್ತಕ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು; ಡಾ.ವಿಠಲ್‌ ಜಿ.ಎನ್ ರವರ ಆಧ್ಯಾತ್ಮಿಕ ಯೋಗ ಆಧುನಿಕ ವಿಜ್ಞಾನ ಮತ್ತು ಇತರ ಲೇಖನಗಳನ್ನು ಒಳಗೊಂಡ ಫುಡ್ ಫಾರ್ ಟ್ರುತ್ ಮತ್ತು ಜೋಕ್ಸ್ ಏಂಡ್ ಫ್ಯಾಕ್ಟ್ ಸಂಕಲನವನ್ನು ಸೆ.19ರಂದು ಭಕ್ತಕೋಡಿ ಕಲ್ಲಮ‌ ಶ್ರೀ ಗುರುರಾಘವೇಂದ್ರ ಮಠದ ಸಭಾಂಗಣದಲ್ಲಿ ಬಿಡುಗಡೆಗೊಂಡಿತು.

ಕಾರ್ಯಕ್ರಮವನ್ನು ಕಲ್ಲಮ‌ ಶ್ರೀಗುರುರಾಘವೇಂದ್ರ ಮಠದ ವ್ಯವಸ್ಥಾಪಕ ಡಾ. ಕೆ.ಎಸ್ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ ಶಿವಾನಂದ ಪುಸ್ತಕ ಬಿಡುಗಡೆ ಮಾಡಿದರು.ಸಂಪ್ಯ ಆನಂದಾಶ್ರಮದ ಸ್ಥಾಪಕಿ ಡಾ.ಗೌರಿ ಪೈ ಅಧ್ಯಕ್ಷತೆ ವಹಿಸಿದ್ದರು. ಮಹಾವೀರ ಆಸ್ಪತ್ರೆಯ ಡಾ.ಅಶೋಕ್ ಕುಮಾರ್ ಪಡಿವಾಳ್, ಪುತ್ತೂರು ಸಿ.ಟಿ ಆಸ್ಪತ್ರೆಯ ಸರ್ಜನ್ ಡಾ. ಗೋಪಿನಾಥ ಪೈ, ಖ್ಯಾತ ವಕೀಲ ಭಾಸ್ಕರ ಕೋಡಿಂಬಾಳ, ಚೇತನ ಆಸ್ಪತ್ರೆಯ ಡಾ.ಜೆ.ಸಿ ಅಡಿಗ, ಭಕ್ತಕೋಡಿ ಎಸ್.ಜಿ.ಎಮ್ ಪ್ರೌಢಶಾಲಾ ನಿವೃತ್ತ ಮುಖ್ಯ ಗುರು ಎಚ್.ಬಿ ಶ್ರೀನಿವಾಸ, ನಿವೃತ್ತ ಇಂಗ್ಲಿಷ್ ಮುಖ್ಯೋಪಾಧ್ಯಾಯ ಪದ್ಮನಾಭ ಗೌಡ, ಆಯುರ್ವೇದ ತಜ್ಞೆ ಡಾ.ವಾಣಿ ಕಿಲ್ಲೂರು, ಲೇಖಕ ಡಾ.ವಿಠಲ್ ಜಿ.ಎನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಾ.ವಿಠಲ್ ಜಿ.ಎನ್ ರವರ ಪುತ್ರ ಡಾ.ಮಹಂತ್ ಸ್ವಾಗತಿಸಿದರು. ಪಲ್ಲವಿ, ಚೇತನಾ, ವಿಜಿತ್ ಪ್ರಾರ್ಥಿಸಿದರು. ಮುಂಡೂರು ಗ್ರಾ.ಪಂ ಸದಸ್ಯ ಕಮಲೇಶ್ ಎಸ್.ವಿ ಕಾರ್ಯಕ್ರಮ ನಿರೂಪಿಸಿದರು.

 



About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.