HomePage_Banner
HomePage_Banner
HomePage_Banner
HomePage_Banner

ಪ್ರಧಾನಿ ಮೋದಿ ಜನ್ಮದಿನಾಚರಣೆ ಅಂಗವಾಗಿ ಸೇವೆ ಮತ್ತು ಸಮರ್ಪಣಾ ಅಭಿಯಾನ: ಪಾಲ್ತಾಡಿಯಲ್ಲಿ ವಿವಿಧ ಕಾರ್ಯಕ್ರಮಗಳು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಸವಣೂರು : ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಾಚರಣೆಯ ಅಂಗವಾಗಿ ಸೆ.೧೭ರಿಂದ ಅ.೭ರವರೆಗೆ ನಡೆಯಲಿರುವ ಸೇವೆ ಮತ್ತು ಸಮರ್ಪಣಾ ಅಭಿಯಾನದ ಅಂಗವಾಗಿ ಪಾಲ್ತಾಡಿಯ ಬೂತ್ ಸಂಖ್ಯೆ ೭೦ರಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಯಿತು..ಪಾಲ್ತಾಡಿ ಗ್ರಾಮದ ಅಂಕತಡ್ಕದಲ್ಲಿ  ಸವಣೂರು ಗ್ರಾಮ ಪಂಚಾಯತ್ ಅನುದಾನದಲ್ಲಿ ನಿರ್ಮಿಸಿದ ಸಾರ್ವಜನಿಕ ಶೌಚಾಲಯ ಲೋಕಾರ್ಪಣೆಯನ್ನು ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ ನೆರವೇರಿಸಿದರು.



ಅಂಕತ್ತಡ್ಕ ಶಾಲೆಯಲ್ಲಿ ನಡೆಯುತ್ತಿದ್ದ ಕೋವಿಡ್ ಲಸಿಕಾ ಅಭಿಯಾನದಲ್ಲಿ ಲಸಿಕೆ ತೆಗೆದುಕೊಳ್ಳಬೇಕಾದ ಅಗತ್ಯಯ ಕುರಿತು ಮಾಹಿತಿ ನೀಡಲಾಯಿತು.ಹಾಗೂ ಲಸಿಕೆ ಪಡೆದವರಿಗೆ ಸಿಹಿತಿಂಡಿ ವಿತರಿಸಲಾಯಿತು.
ಅಂಕತ್ತಡ್ಕ ಅಂಚೆ ಕಛೇರಿಯ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಾಶಯ ಕೋರುವ ಕಾರ್ಡ್ ರವಾನೆ ಮಾಡಲಾಯಿತು.
 ವಿಕಲಚೇತನ ಚೆನ್ನಾವರದ ಹರೀಶ್ ರೈ ಅವರಿಗೆ ಹಣ್ಣು ಹಂಪಲು ವಿತರಿಸಿ ಆರೋಗ್ಯ ವಿಚಾರಣೆ,ಅನಾರೋಗ್ಯದಿಂದ ಬಳಲುತ್ತಿರುವ ಬಂಬಿಲದ ಗುರುವ ಎಂಬವರಿಗೆ ಕಿಟ್ ನೀಡಲಾಯಿತು. ಬಂಬಿಲ ಮಹಮ್ಮಾಯಿ  ಮಾರಿಯಮ್ಮ ದೇವಸ್ಥಾನದಲ್ಲಿ ,ಮಂಜುನಾಥನಗರ ಸಿದ್ದಿವಿನಾಯಕ ಭಜನಾ ಮಂದಿರದಲ್ಲಿ  ಪ್ರಧಾನಿಯವರ ಶ್ರೇಯೋಭಿವೃದ್ಧಿಗೆ ಪ್ರಾರ್ಥನೆ ಹಾಗೂ ಪೂಜೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿಶೆಟ್ಟಿ ,ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಅಂಗಡಿಮೂಲೆ, ಸುಂದರಿ ಬಿ.ಎಸ್., ಹರಿಕಲಾ ರೈ ಕುಂಜಾಡಿ, ವಿನೋದಾ ರೈ ಚೆನ್ನಾವರ, ಭರತ್ ರೈ ಪಾಲ್ತಾಡಿ,ಹರೀಶ್,ತಾರಾನಾಥ ಬೊಳಿಯಾಲ,ಚೇತನಾ ಶಿವಾನಂದ,ಗ್ರಾ.ಪಂ.ಅಭಿವೃದ್ದಿ ಅಽಕಾರಿ ನಾರಾಯಣ ಬಿ,ಪಾಲ್ತಾಡಿ ಭಾರತಿ ಗ್ರಾಮ ವಿಕಾಸ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷ ಬಿ.ಕೆ.ರಮೇಶ್,ಸವಣೂರು ಗ್ರಾ.ಪಂ.ಬಿಜೆಪಿ ಸಮಿತಿಯ ಮಾಜಿ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ,ಬಿ.ಜೆ.ಪಿ.ಸುಳ್ಯ ಮಂಡಲ ಕಾರ್ಯದರ್ಶಿ ಇಂದಿರಾ ಬಿ.ಕೆ,ಬೂತ್ ೭೦ ರ ಅಧ್ಯಕ್ಷಅನ್ನಪೂರ್ಣ ಪ್ರಸಾದ್ ರೈ ಬಲಾಡಿ, ಪಾಲ್ತಾಡಿ ಪುಣ್ಚಪ್ಪಾಡಿ ಶಕ್ತಿ ಕೇಂದ್ರದ ಸಹಪ್ರಭಾರಿ ಮಹೇಶ್ ಕೆ ಸವಣೂರು, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ತಾರಾನಾಥ ಕಾಯರ್ಗ, ಬಿ.ಜೆ.ಪಿ. ಬೂತ್ ೭೦ರ ಮಾಜಿ ಅಧ್ಯಕ್ಷ ಸುಬ್ರಾಯ ಗೌಡ, ಅಂಕತ್ತಡ್ಕ ಫ್ರೆಂಡ್ಸ್ ರಿಕ್ಷಾ ಯೂನಿಯನ್ ಅಧ್ಯಕ್ಷ ರೋಹಿತ್ ರೈ ಕುಂಜಾಡಿ, ಕಾರ್ಯದಶಿ ಕರುಣಾಕರ ರೈ ಚೆನ್ನಾವರ,ಗ್ರಾ.ಪಂ.ಮಾಜಿ ಸದಸ್ಯ ಸತೀಶ್ ಬಲ್ಯಾಯ ಮೊದಲಾದವರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.