HomePage_Banner
HomePage_Banner
HomePage_Banner
HomePage_Banner

ಆರ್ಯಾಪು: ಸ್ವಚ್ಛತಾ ಜಾಗೃತಿ, ಶ್ರಮದಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ  150ನೇ ಜನ್ಮದಿನಾಚರಣೆ ಅಂಗವಾಗಿ ನೆಹರು ಯುವಕೇಂದ್ರ ಹಾಗೂ ತಾಲೂಕು ಯುವಜನ ಒಕ್ಕೂಟದ ಆಶ್ರಯದಲ್ಲಿ ಆರ್ಯಾಪು ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯೇಶ್ವರ ಯುವಕ ಮಂಡಲ ವತಿಯಿಂದ ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಟ್ಟೆ ಹಾಗೂ ಮೇಲ್ಮಜಲು ಮೈದಾನದಲ್ಲಿ ಸ್ವಚ್ಚತಾ ಜಾಗೃತಿ ಮತ್ತು ಶ್ರಮದಾನ ನಡೆಯಿತು.

ಆರ್ಯಾಪು ಗ್ರಾ.ಪಂ  ಉಪಾಧ್ಯಕ್ಷೆ ಪೂರ್ಣಿಮ ರೈ ದೀಪ ಬೆಳಗಿಸಿ ಉದ್ಘಾಟಿಸಿದರು. ತಾಲೂಕು ಯೋಜನಾ ಒಕ್ಕೂಟದ ಅಧ್ಯಕ್ಷ  ದಿನೇಶ್ ಸಾಲಿಯಾನ್ ಅಧ್ಯಕ್ಷತೆಯನ್ನು ವಹಿಸಿದರು. ಮಂಗಳೂರು ಯೋಜನಾ ಒಕ್ಕೂಟ ನೆಹರು ಕೇಂದ್ರದ ಪದಾಧಿಕಾರಿಗಳಾದ ಪ್ರಜ್ಞಾ ಕುಲಾಲ್ ಕಾವು, ಗೌತಮ್ ಹಾಗೂ ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದ ಸದಸ್ಯರಾದ ದೇವಯ್ಯ ಗೌಡ, ಯುವಕ ಮಂಡಲ ಅಧ್ಯಕ್ಷ ಬಾಲಚಂದ್ರ ದೇವಸ್ಯ, ಯುವ ಸಬಲೀಕರಣ ರಾಮಕೃಫ್ಣ  ಪಡುಮಲೆ ತಾಲೂಕು ಯೋಜನಾ ಒಕ್ಕೂಟ ಕಾರ್ಯದರ್ಶಿ ಕಾವ್ಯಶ್ರೀ ಸಾಜ ತಾ. ಯುವಜನ ಒಕ್ಕೂಟದ ಜೊತೆ ಕಾರ್ಯದರ್ಶಿ ಮತ್ತು ಯುವಕ ಮಂಡಲದ ಕಾರ್ಯದರ್ಶಿ ಸಂದೀಪ್ ಆರ್ಯಾಪು ಉಪಸ್ಥಿತರಿದ್ದರು.

ಕಾರ್ಪಾಡಿ ವ್ಯವಸ್ಥಾಪನಾ ಸಮಿತಿ ಸದಸ್ಯೆ ಭಾರತಿ ಎಸ್, ಗ್ರಾ.ಪಂ ಸದಸ್ಯ ಚೇತನ್ ಗೌಡ ದೇವಸ್ಯ, ಗ್ರಾ.ಪಂ ಸದಸ್ಯೆ  ಪವಿತ್ರ ರೈ,  ಶ್ರೀಕೃಷ್ಣ ಯುವಕ ಮಂಡಲದ ಸಂತೋಷ್ ಸುವರ್ಣ ಮೇರ್ ಹಾಗೂ ಯುವಕ ಮಂಡಲದ ಸದಸ್ಯರು ಭಾಗಹಿಸಿದ್ದರು. ಕಾರ್ತಿಕ್ ನಾಯ್ಕ ಆರ್ಯಾಪು ಸ್ವಾಗತಿಸಿದರು.  ಯುವಕ ಮಂಡಲದ ಜೊತೆಕಾರ್ಯದರ್ಶಿ ಪವನ್ ದೇವಸ್ಯ ಕಾರ್ಯಕ್ರಮ ನಿರೂಪಿಸದರು. ರೋಹಿತ್ ಕಾರ್ಪಾಡಿ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.