HomePage_Banner
HomePage_Banner
HomePage_Banner
HomePage_Banner

ಆಲಂಕಾರು ಗ್ರಾ.ಪಂ ನಲ್ಲಿ ಸ್ವಚ್ಚತಾ ಹಿ ಸೇವಾ ಕಾರ್ಯಕ್ರಮ ಉದ್ಘಾಟನೆ,ಮಹಿಳಾ ಗ್ರಾಮ ಸಭೆ, ಪೋಷಣ್ ಅಭಿಯಾನ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಆಲಂಕಾರು: ಆಲಂಕಾರು ಗ್ರಾ.ಪಂ ನಲ್ಲಿ ಸ್ವಚ್ಚತಾ ಹಿ ಸೇವಾ ಕಾರ್ಯಕ್ರಮ ಉದ್ಘಾಟನೆ,ಮಹಿಳಾ ಗ್ರಾಮ ಸಭೆ, ಪೋಷಣ್ ಅಭಿಯಾನ ಕಾರ್ಯಕ್ರಮವು ಗ್ರಾ.ಪಂ ಅಧ್ಯಕ್ಷರಾದ ಸದಾನಂದ ಆಚಾರ್ಯರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಭವನದಲ್ಲಿ ನಡೆಯಿತು.


ಭಾರತ ದೇಶ ಸ್ವಾತಂತ್ರ್ಯ ಪಡೆದು 75 ವರ್ಷಗಳ ಆಚರಣೆ ಪ್ರಯುಕ್ತ ದೇಶದ ಎಲ್ಲಾ ಗ್ರಾಮೀಣ ಸಮುದಾಯದಲ್ಲಿ ನೀರು ನೈರ್ಮಲ್ಯ ವಿಷಯಗಳ ಕುರಿತು ವ್ಯಾಪಕ ವಾದ ಜಾಗೃತಿ ಮೂಡಿಸುವ ಸಂಬಂಧವಾಗಿ ಸತ್ಯಾಗ್ರಹ ಸೇ ಸ್ವಚ್ಚಾಗ್ರಹ ರಥಯಾತ್ರೆ ಮತ್ತು ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮಗಳನ್ನು ಸೆ.15 ರಿಂದ ಅಕ್ಟೋಬರ್ 02 ರವರೆಗೆ ಆಯೋಜಿಸಲು ಜಿಲ್ಲೆಯ 14 ಗ್ರಾಮ ಪಂಚಾಯತಿಗಳಲ್ಲಿ ಕಡಬ ತಾಲೂಕಿನ ಆಲಂಕಾರು ಮತ್ತು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಗಳನ್ನು ಅಮೃತ ಗ್ರಾಮಗಳಾಗಿ ಆಯ್ಕೆ ಮಾಡಿದ್ದು ಇದರ ಅಂಗವಾಗಿ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮವನ್ನು ಪಂಚಾಯತ್ ಅದ್ಯಕ್ಷರಾದ ಸದಾನಂದ ಆಚಾರ್ಯ ದೀಪ ಬೆಳಗಿಸಿ ಉದ್ಘಾಟಿಸಿ ಸತ್ಯಾಗ್ರಹ ಸೇ ಸ್ವಚ್ಚಾಗ್ರಹ ರಥಯಾತ್ರೆ ಚಾಲನೆ ನೀಡಿ ಶುಭಹಾರೈಸಿದರು. ಇದೇ ಸಂಧರ್ಭದಲ್ಲಿ ಸ್ವಚ್ಚತಾ ಸೇನಾನಿಗಳಾದ ಗಿರಿಯಾಪ್ಪ ನೆಕ್ಕರೆ,ಕಮಲ ಪಂಜೋಡಿ, ಶೋಭಾ ಪಂಜೋಡಿ, ಸುನಂದ ನಗ್ರಿ,ಗಂಗಮ್ಮ ನಗ್ರಿ,ಲಕ್ಷೀ೬ ಪಂಜೋಡಿಯವರ ಸೇವೆಯನ್ನು ಗುರುತಿಸಿ ಸಭೆಯಲ್ಲಿ ಸನ್ಮಾನಿಸಲಾಯಿತು. ನಂತರ ಮಹಿಳಾ ಗ್ರಾಮ ಸಭೆ ನಡೆದು, ಮಹಿಳಾ ಮತ್ತು ಶಿಶು ಅಭಿವೃದ್ದಿ ಇಲಾಖೆಯ ಅಂಗನವಾಡಿ ಮೇಲ್ವಿಚಾರಕಿ ಊಮಾವತಿಯವರು ಮಹಿಳೆಯರ ಕಾನೂನು ಮತ್ತು ಅರಿವಿನ ಬಗ್ಗೆ ಹಾಗು ಪೌಷ್ಠಿಕಾಂಶದ ,ಪೋಷಣ್ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು. ಆನಂತರ ಅರೋಗ್ಯ ಕಿರಿಯ ಸಹಾಯಕಿ ಸರೋಜಿನಿಯವರು ನೈರ್ಮಲ್ಯ, ಸ್ವಚ್ಚತೆ,ಪೌಷ್ಠಿಕಾ ಆಹಾರದ ಪ್ರಾತ್ಯಕ್ಷತೆಯ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು.ಪಂಚಾಯತ್ ಅಭಿವೃದ್ದಿ ಅಧಿಕಾರಿ ಜಗನ್ನಾಥ ಶೆಟ್ಟಿಯವರು ಒಟ್ಟು ಕಾರ್ಯಕ್ರಮದ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿ ಕಾರ್ಯಕ್ರಮದ ಮಹತ್ವದ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಪೋಷಣ್ ಅಭಿಯಾನದ ಅಂಗವಾಗಿ ಪ್ರತಿ ಅಂಗನವಾಡಿಯ ಸ್ತೀ – ಶಕ್ತಿ ಗುಂಪ್ಪಿನವರಿಂದ ಪೌಷ್ಠಿಕ ಸಪ್ತಾಹ ಮಾಸಚರಣೆ ಯ ಅಂಗವಾಗಿ ವಿವಿಧ ಬಗೆಯ ಪೌಷ್ಠಿಕ ಆಹಾರ ಮನೆಯಲ್ಲಿ ತಯಾರಿಸಿ ತಂದು ಸಭೆಯಲ್ಲಿ ಎಲ್ಲರಿಗೆ ಹಂಚಿದರು ಹಾಗು ಪೌಷ್ಠಿಕ ಅಹಾರದ ಸವಿಯನ್ನು ಪಡೆದರು ಹಾಗು ವಿವಿಧ ಬಗೆಯ ಸೊಪ್ಪು ,ತರಕಾರಿಗಳನ್ನು ಪ್ರದರ್ಶನಕ್ಕೆ ತಂದು ಉಪಯುಕ್ತದ ಬಗ್ಗೆ ತಿಳಿಸಿದರು.. ಪಂಚಾಯತ್ ಕಾರ್ಯದರ್ಶಿ ವಸಂತ ಶೆಟ್ಟಿ ಧನ್ಯವಾದ ಸಮರ್ಪಿಸಿದರು.ವೇದಿಕೆಯಲ್ಲಿ. ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರೂಪಾಶ್ರೀ ಪಟ್ಟೆ, ಗ್ರಾ.ಪಂ ಸದಸ್ಯರಾದ ಶ್ವೇತಾಕುಮಾರ್,ರವಿಪೂಜಾರಿ,ಚಂದ್ರಶೇಖರ ಗೌಡತ್ತಿಗೆ,ಕೃಷ್ಣ.ಜಿ,ವಾರಿಜಾ,ಸುಶೀಲಾ,ಸುಮತಿ,ಶಾರದ,ಸುನಂದಾ ಉಪಸ್ಥಿತರಿದ್ದರು, ಪಂಚಾಯತ್
ಸಿಬ್ಬಂದಿಗಳು ಸಹಕರಿಸಿದರು. ಕಾರ್ಯಕ್ರಮದಲ್ಲಿ ಅಶಾ,ಅಂಗನವಾಡಿ ಕಾರ್ಯಕರ್ತೆಯರು,ಸ್ತ್ರೀ ಶಕ್ತಿ ಗುಂಪ್ಪಿನ ಪದಾದಿಕಾರಿಗಳು ,ಸದಸ್ಯರುಗಳು ಹಾಗು ಇನ್ನಿತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.