HomePage_Banner
HomePage_Banner
HomePage_Banner
HomePage_Banner

ವಿಟ್ಲದಲ್ಲಿ ನೂತನ ಬಟ್ಟೆಮಳಿಗೆ ಝೆನ್ ಟೆಕ್ಸ್ ಟೈಲ್ಸ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ವಿಟ್ಲ: ವಿಟ್ಲ-ಪುತ್ತೂರು ರಸ್ತೆಯ ವಿ.ಎಚ್ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಪುರುಷರ, ಮಹಿಳೆಯರ ಹಾಗೂ ಮಕ್ಕಳ ವಸ್ತ್ರ ಮಳಿಗೆ”ಝೆನ್ ಟೆಕ್ಸ್ ಟೈಲ್ಸ್” ಸೆ.19ರಂದು ಶುಭಾರಂಭಗೊಂಡಿತು.

ಅಲಿ ತಂಙಳ್ ಕುಂಬೋಳ್, ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಕೆಐಸಿ ಪ್ರಾಂಶುಪಾಲ ಬಿ.ಕೆ ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ, ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬು ಮಹಮ್ಮದ್ ಆಲಿ ಫೈಝಿ ಇರ್ಫಾನಿ, ವಿಟ್ಲ ಟೌನ್ ಮಸೀದಿ ಖತೀಬು ಅಬ್ಬಾಸ್ ಮದನಿ, ಪೆರಿಯಡ್ಕ ಜುಮಾ ಮಸೀದಿ ಖತೀಬು ಅಬೂಸಾಲಿ ಮುಸ್ಲಿಯಾರ್ , ದುವಾಃ ನೆರವೇರಿಸಿದರು.

ವಿಟ್ಲ ಅರಮನೆಯ ಕೃಷ್ಣಯ್ಯ ಕೆ ಅವರು ನೂತನ ಮಳಿಗೆಯನ್ನು ಉದ್ಘಾಟಿಸಿ, ಮಾತನಾಡಿ ಒಳ್ಳೆಯ ರೀತಿಯಲ್ಲಿ ಬೆಳೆಯಲಿ, ಜನರಿಗೆ ಉತ್ತಮ ಸೇವೆ ನೀಡಲು ದೇವರು ಅನುಗ್ರಹಿಸಲಿ ಎಂದು ಶುಭ ಹಾರೈಸಿದರು.

ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ. ಮಾತನಾಡಿ ಬೆಳೆಯುತ್ತಿರವ ವಿಟ್ಲ ಪೇಟೆಯ ಮುಕುಟಕ್ಕೆ ಇನ್ನೊಂದು ಕಿರೀಟ ಝೆನ್ ಟೆಕ್ಸ್ ಟೈಲ್, ಉತ್ತಮ ಕನಸಿನೊಂದಿಗೆ ಮಾಲಕರು ವಿಟ್ಲದಲ್ಲಿ ಆರಂಭಿಸಿದ ಸಂಸ್ಥೆಗೆ ಯಶಸ್ಸಾಗಲಿ. ಬದುಕಿನ ಚೈತನ್ಯವಿದ್ದರೆ ಸುಂದರ ಸಂಸಾರ ನಡೆಸಲು ಸಾಧ್ಯ. ವ್ಯವಹಾರ ಉದ್ಯೋಗದಲ್ಲಿ ಅರ್ಪಣಾ ಮನೋಭಾವ ವಿದ್ದರೆ ಸಂಸ್ಥೆ ಯಶಸ್ಸಾಗಲು ಸಾಧ್ಯ. ಸಮಾಜಸೇವೆ ಯೊಂದಿಗೆ ಕೆಲಸ ಮಾಡಿದಾಗ ದೇವರ ದಯೆ ಸಿಗಲು ಸಾಧ್ಯ ಎಂದರು.

ಜಿ.ಪಂ. ಮಾಜಿ ಸದಸ್ಯ ಎಂ.ಎಸ್ ಮಹಮ್ಮದ್ ಮಾತನಾಡಿ ಜನಸಂಖ್ಯೆ ಹೆಚ್ಚಾದಂತೆ ಇಂತಹ ಅಂಗಡಿಗಳ ಸ್ಥಾಪನೆ ಉತ್ತಮ ಬೆಳವಣಿಗೆ.  ಸತತ ಪ್ರಯತ್ನದೊಂದಿಗೆ ಸಂಸ್ಥೆ ಯಶಸ್ಸಾಗಲು ಸಾಧ್ಯ ಎಂದರು.

 ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಮೋನಪ್ಪ ಗೌಡ, ರೋಟರಿ ಕ್ಲಬ್ ಅಧ್ಯಕ್ಷ ಅಣ್ಣಪ್ಪ ಸಾಸ್ತಾನ, ವಿಟ್ಲ ವಾಣಿಜ್ಯ ಮತ್ತು ವರ್ತಕರ ಸಂಘದ ಅಧ್ಯಕ್ಷ ಬಾಬು ಕೆ.ವಿ, ಎಂ ಫ್ರೆಂಡ್ಸ್ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ, ಸುರಯ್ಯ ಕಾದರ್ ಹಾಜಿ, ಯು.ಎಂ ಅಬ್ಬಾಸ್ ಮಠ, ಲೂಯಿಸ್ ಮಸ್ಕರೇಂಞಸ್, ಇ.ಕೆ ಸಿದ್ದೀಕ್ ಅಡ್ಡೂರು, ಎಂ.ಬಿ ನಝೀರ್, ಎಸ್‌ಡಿಪಿಐ ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾರ್ಯದರ್ಶಿ ಶಾಕೀರ್ ಅಳಕೆಮಜಲು, ಕಲಂದರ್ ಪರ್ತಿಪ್ಪಾಡಿ, ಮುಸ್ತಫಾ ಬಾಂಬಿಲ, ರಮಾನಾಥ ವಿಟ್ಲ, ರಝಾಕ್ ಕುಕ್ಕಾಜೆ, ಸಿದ್ದೀಕ್ ಉಚ್ಚಿಲ, ಉಬೈದ್ ವಿಟ್ಲ ಬಝಾರ್, ಮೊದಲಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭಹಾರೈಸಿದರು‌.

ಪ್ರಥಮ ಗ್ರಾಹಕರಾದ ಹೈದರ್ ಮುಸ್ಲಿಯಾರ್ ರವರಿಗೆ 
ಸಂಸ್ಥೆಯ ಮಾಲಕರ ತಂದೆ ಎಂ.ಅಬ್ದುಲ್ ಗಫೂರ್ ರವರು ಬಟ್ಟೆ ಹಸ್ತಾಂತರ ಮಾಡಿದರು. ರಶೀದ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಮಾಲಕ ರಫೀಕ್ ಉಪ್ಪಿನಂಗಡಿ ಅತಿಥಿಗಳನ್ನು ಸ್ವಾಗತಿಸಿದರು.

ಶುಭಾರಂಭದ ಪ್ರಯುಕ್ತ ವಿವಿಧ ಕೊಡುಗೆಗಳು

ಸಂಸ್ಥೆಯಲ್ಲಿ  ಅತ್ಯುತ್ತಮ ಗುಣಮಟ್ಟ, ವಿಶಾಲ ಸಂಗ್ರಹ, ದೀರ್ಘ ಬಾಳಿಕೆ, ವಿನ್ಯಾಸಗಳನ್ನೂಳಗೊಂಡ  ಪುರುಷರ, ಮಹಿಳೆಯರ, ಮಕ್ಕಳ ವಿವಿಧ ಬಟ್ಟೆಗಳು ಮಿತದರದಲ್ಲಿ ದೊರೆಯಲಿದೆ.
ಶುಭಾರಂಭದ ಪ್ರಯುಕ್ತ‌ ಸಂಸ್ಥೆ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಸಂಸ್ಥೆ ನೀಡಲಿದ್ದು, ಸೆ. ೩೦ರ ವರೆಗೆ  ೫ ಪ್ಲಾಝೋ ಪ್ಯಾಂಟ್ ಗೆ ರೂ. ೩೯೯, ೫ ಲೇಡಿಸ್ ಟಾಪ್ ಗೆ ರೂ. ೪೯೯, ೫ ಲೆಗ್ಗಿನ್ಸ್ ಗೆ ರೂ. ೪೯೯, ೫ ಲೇಡಿಸ್ ಶಾಲ್ ರೂ. ೧೯೯ಕ್ಕೆ   ದೊರೆಯಲಿದೆ.
ಸಂಸ್ಥೆಯ ಉದ್ಘಾಟನೆಯ ಆಮಂತ್ರಣ ಪತ್ರಿಕೆಯನ್ನು ಸ್ಟೇಟಸ್ ಹಾಕಿದವರಿಗೂ ವಿಶೇಷ ಬಹುಮಾನ ಘೋಷಿಸಿದ್ದು, ೫೦ಕ್ಕಿಂತ ಹೆಚ್ಚು ಜನರು  ವೀಕ್ಷಿಸಿದ ಸ್ಟೇಟಸ್ ಸ್ಕ್ರೀನ್ ಶಾಟ್ ಅನ್ನು ೯೮೪೪೯೦೩೩೧೩ ಸಂಖ್ಯೆಗೆ ವಾಟ್ಸಾಪ್ ಕಳುಹಿಸಬೇಕು. ಸೆ. ೨೬ರಂದು ಅದರ ಡ್ರಾ ನಡೆಯಲಿದ್ದು, ವಿಜೇತರಿಗೆ ರೂ. ೩,೩೧೩ ರೂಪಾಯಿ ಮೌಲ್ಯದ  ಫ್ಯಾಮಿಲಿ ಪ್ಯಾಕ್ ನೀಡಲಾಗುತ್ತದೆ. ಕಳೆದ ಹಲವಾರು ವರುಷಗಳಿಂದ ಉಪ್ಪಿನಂಗಡಿಯಲ್ಲಿ ಬಟ್ಟೆ ಮಳಿಗೆಯನ್ನು ನಡೆಸುತ್ತಿದ್ದು, ಅಲ್ಲಿನ ಜನರು ನಮಗೆ ಉತ್ತಮ ರೀತಿಯಲ್ಲಿ ಸಹಕಾರ ನೀಡಿದ್ದು, ಇಲ್ಲಿನ ಜನರು ನಮ್ಮನ್ನು ಪ್ರೋತ್ಸಾಹಿಸುತ್ತಾರೆ ಎನ್ನುವ ನಂಬಿಕೆ ನಮಗಿದೆ-ರಫೀಕ್ ಉಪ್ಪಿನಂಗಡಿ, ಮಾಲಕರು ಝೆನ್ ಟೆಕ್ಸ್ ಟೈಲ್ಸ್

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.