HomePage_Banner
HomePage_Banner
HomePage_Banner
HomePage_Banner

ಪುತ್ತೂರು ಸ್ಕಿನ್ ಕ್ಲಿನಿಕ್‌ನಲ್ಲಿ ಉಚಿತ ಚರ್ಮ ತಪಾಸಣೆ ಶಿಬಿರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: 4ನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ಬೊಳುವಾರಿನಲ್ಲಿರುವ ಪುತ್ತೂರು ಸ್ಕಿನ್ ಕ್ಲಿನಿಕ್‌ನಲ್ಲಿ ಉಚಿತ ಚರ್ಮ ತಪಾಸಣೆ ಶಿಬಿರ ಸೆ. 19ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1ವರೆಗೆ ಜರಗಿತು.

ಬೊಳುವಾರು ಹೋಟೆಲ್ ನ್ಯೂ ಹರಿಪ್ರಸಾದ್‌ನ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಪುತ್ತೂರು ಸ್ಕಿನ್ ಕ್ಲಿನಿಕ್ ವರ್ಷಕ್ಕೆ 4 ಬಾರಿ ಉಚಿತ ಚರ್ಮ ತಪಾಸಣಾ ಶಿಬಿರವನ್ನು ಆಯೋಜಿಸುತ್ತಿದೆ. ಇದರಲ್ಲಿ ವರ್ಷಾಚರಣೆಯಂದು ನಡೆಯುವ ಉಚಿತ ತಪಾಸಣೆಯೂ ಒಂದು. ಉಳಿದಂತೆ ಕುಷ್ಠರೋಗ ದಿನ, ವಿಶ್ವ ತೊನ್ನು ರೋಗ ದಿನ, ಸೋರಿಯಾಸೀಸ್ ದಿನಗಳಂದು ಉಚಿತ ಚರ್ಮ ತಪಾಸಣೆ ನಡೆಸಲಾಗುತ್ತದೆ. ಗ್ರಾಮೀಣ ಭಾಗದ ಜನರಿಗೆ ನೆರವಾಗುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗುತ್ತಿದೆ.

ಚರ್ಮದ ಅಲರ್ಜಿ, ಸೋರಿಯಾಸಿಸ್, ತೊನ್ನುರೋಗ, ಮೊಡವೆ ಕಲೆ, ವಂಶಪಾರಂಪರ್ಯ ಚರ್ಮ ಕಾಯಿಲೆಗಳು, ಕೂದಲು ಉದುರುವ ಸಮಸ್ಯೆ ಸೇರಿದಂತೆ ಎಲ್ಲಾ ರೀತಿಯ ಚರ್ಮರೋಗಗಳಿಗೂ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಸುಮಾರು ೧೦೦ರಿಂದ ೧೫೦ ಮಂದಿ ಈ ಶಿಬಿರದ ಪ್ರಯೋಜನ ಪಡೆದುಕೊಳ್ಳುತ್ತಾರೆ ಎಂದು ಸಂಸ್ಥೆಯ ಡಾ. ಸಚಿನ್ ಎಂ. ಶೆಟ್ಟಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.